ಯರಗಟ್ಟಿ

ಅಪ್ಪ ಬಸವಣ್ಣ ಮಹಾನ್ ಮಾನವತಾವಾದಿ: ಮುರಘೇಂದ್ರ ಶ್ರೀಗಳು

ಅಪ್ಪ ಬಸವಣ್ಣ ಮಹಾನ್ ಮಾನವತಾವಾದಿ: ಮುರಘೇಂದ್ರ ಶ್ರೀಗಳು

ಲೋಕದರ್ಶನ ವರದಿ

ಯರಗಟ್ಟಿ 05: ಮೇಲು, ಕೀಳು ಎಂಬ ಭೇದ ತೀವ್ರವಾಗಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನ, ಸಂದೇಶಗಳ ಮೂಲಕ ಸಮಾಜವನ್ನು ಶುದ್ಧಗೊಳಿಸಿದ ಮಹಾನ್ ಮಾನವತಾವಾದಿ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ತಲ್ಲೂರ ಗ್ರಾಮದ ಗಜಾನನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸವಣ್ಣನವರು ಕಾಯಕನಿಷ್ಠತೆ, ಸಮಾನತೆ, ಸಮಬಾಳ್ವೆ ಸಾರಿದ ದಾರ್ಶನಿಕ ಪುರುಷ ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ ನಡೆಯೋಣ. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಳಿತನ್ನೆ ಮಾಡೋಣ ಎಂದರು.

ತೊರಗಲ್ಲಮಠದ ದೀಪಕ ಸ್ವಾಮೀಜಿ ಮಾತನಾಡಿ, ಸಮಾಜವು ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಇಂದು ಬಸವ ತತ್ವ ತುಂಬಾ ಅಗತ್ಯವಿದೆ. ಜಗತ್ತಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ವಚನ ಸಾಹಿತ್ಯದಲ್ಲಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಶಶಿಧರ ತಳವಾರ, ಬಸವರಾಜ ಪೂಜೇರ ಮಾತನಾಡಿದರು.

ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಮಾಜಿ ಗ್ರಾಪಂ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಮಹಾರುದ್ರಪ್ಪ ಉಪ್ಪಿನ, ಶಂಕರಗೌಡ ಪಾಟೀಲ, ದುಂಡಪ್ಪ ಶಿವಪೂಜಿ, ಆಯ್.ಎಸ್.ಚಿಕಾಕಿ, ಬಿ.ವಿ.ಲಕ್ಕನ್ನವರ, ವಿನಯ ಪಾಟೀಲ, ಈರಣ್ಣ ಹುದ್ದಾರ, ಎ.ಎಮ್.ಬಾನದಾರ, ಮಹಾದೇವ ಶಿವಪೂಜಿ, ಈರಪ್ಪ ಬೆನಕಟ್ಟಿ, ಫಕ್ರುಸಾಬ ಬಾಗವಾನ, ಬಸಪ್ಪ ಉಪ್ಪಿನ, ರೈಮಾನಸಾಬ ಮುಲ್ಲಾ, ಬಸನಾಯ್ಕ ಚಿಕಾಕಿ, ಮಹಾದೇವ ಉಪ್ಪಾರ ಸೇರಿದಂತೆ ಬಸವ ಸೇನಾ ಸಮಿತಿ ಸದಸ್ಯರು ಇದ್ದರು. ವಿಜಯ ಅಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ