ಧಾರವಾಡ - ಹುಬ್ಬಳ್ಳಿ

ಅಮ್ಮಿನಬಾವಿಯಲ್ಲಿ ವೀರಭದ್ರದೇವರ ವಾರ್ಷಿಕ ಗುಗ್ಗಳೋತ್ಸವ

ಅಮ್ಮಿನಬಾವಿಯಲ್ಲಿ ವೀರಭದ್ರದೇವರ ವಾರ್ಷಿಕ ಗುಗ್ಗಳೋತ್ಸವ

ಅಮ್ಮಿನಬಾವಿಯಲ್ಲಿ ವೀರಭದ್ರದೇವರ ವಾರ್ಷಿಕ ಗುಗ್ಗಳೋತ್ಸವ  

ಧಾರವಾಡ 03 : ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿಯ ಕ್ಷೇತ್ರನಾಥ ಶ್ರೀವೀರಭದ್ರದೇವರ ವಾರ್ಷಿಕ ಗುಗ್ಗಳೋತ್ಸವ ಕಾರ್ತೀಕ ಮಾಸದ ಗೌರಿ ಹುಣ್ಣಿಮೆಯ ದಿನ ಅಂದರೆ ನವ್ಹೆಂ.15ರಂದು(ಶುಕ್ರವಾರ) ಶಾಸ್ತ್ರೋಕ್ತವಾಗಿ ಜರುಗಲಿದೆ.  

ಅಂದು ಪ್ರಾತಃಕಾಲ ಶ್ರೀವೀರಭದ್ರದೇವರಿಗೆ ಪಂಚಾಮೃತ ಸಹಿತ ಏಕಾದಶ ಮಹಾರುದ್ರಾಭಿಷೇಕ ಅಷ್ಟೋತ್ತರ ನೂರೊಂದು ಬಿಲ್ವಾರ್ಚನೆ ಸಹಿತ ವಿಶೇಷ ಪೂಜೆ ಜರುಗಲಿದೆ. ಮುಂಜಾನೆ 7 ಗಂಟೆಗೆ ಹೊರಡುವ ಗುಗ್ಗಳೋತ್ಸವವನ್ನು ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಜಂಟಿಯಾಗಿ ಉದ್ಘಾಟಿಸುವರು. ಹಿರಿಯ ಪುರವಂತರುಗಳಾದ ಬಸವಂತಪ್ಪ ಕಂಬಾರ, ದೇವೇಂದ್ರ​‍್ಪ ಪತ್ತಾರ ಮಡಿವಾಳಪ್ಪ ಕುರುವಿನಕೊಪ್ಪ, ಶಿವಾನಂದ ಕುಂಬಾರ, ಸತೀಶ ಮುಗಳಿ, ಶರಣಪ್ಪ ಕಂಬಾರ, ರುದ್ರ​‍್ಪ ಕಂಬಾರ, ಅರುಣ ಕಂಬಾರ ಅವರು ಗುಗ್ಗಳೋತ್ಸವದಲ್ಲಿ  ಒಡಪುಗಳ ಭಕ್ತಿಸೇವೆ ಸಲ್ಲಿಸುವರು. ಗುಗ್ಗಳೋತ್ಸವವು ಅಮ್ಮಿನಬಾವಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀವೀರಭದ್ರಸ್ವಾಮಿ ದೇವಾಲಯಕ್ಕೆ ಆಗಮಿಸಲಿದೆ.  

ಗುಗ್ಗಳ ಹರಕೆಗೆ ಅವಕಾಶ : ವಿವಾಹದ ಸಂದರ್ಭದಲ್ಲಿ ಗುಗ್ಗಳಕಾರ್ಯ ನೆರವೇರಿಸಲು ತೊಂದರೆ ಇರುವ ಬಡ ಕುಟುಂಬಗಳಿಗೆ ಇದೇ ಸಂದರ್ಭದಲ್ಲಿ ಸುಲಭವಾಗಿ ಗುಗ್ಗಳದ ಹರಕೆ ತೀರಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ವೀರಯ್ಯ ಹಿರೇಮಠ (ಮೊ: 9611184200) ಇಲ್ಲವೇ ಸೋಮಲಿಂಗಶಾಸ್ತ್ರಿ ಗುಡ್ಡದಮಠ (ಮೊ:8073808447) ಅವರನ್ನು ನವ್ಹೆಂಬರ್‌-13ರ ಒಳಗಾಗಿ ಸಂಪರ್ಕಿಸಿ ತಮ್ಮ ಹೆಸರು ದಾಖಲಿಸಬಹುದಾಗಿದೆ. ಇದೇ ದಿನ ಸಂಜೆ 7 ಗಂಟೆಗೆ  ಕಾರ್ತಿಕ ದೀಪೋತ್ಸವವೂ ದೇವಾಲಯದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ