ಚುನಾವಣಾ ದಿನಾಂಕ ಘೋಷಣೆ :ತಯಾರಿಯಲ್ಲಿ ತೊಡಗಿದ ಜಿಲ್ಲಾಡಳಿತ
ಲೋಕದರ್ಶನ ವರದಿ
ಶಿಗ್ಗಾವಿ : ಚುನಾವಣಾ ದಿನಾಂಕ ನಿಗಧಿಯ ಬೆನ್ನೆಲ್ಲೆ ಶಿಗ್ಗಾವಿ -ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ (83) ಚುನಾವಣಾ ತಯಾರಿ ಮಾಡಿಕೊಳ್ಳಲು ಸರ್ವ ತಯಾರಿ ನಡೆಸಿದೆ ಎಂದು ಸವಣೂರ ಉಪವಿಭಾಗಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕವಾದ ರಾಯಪ್ಪ ಹುಣಸಗಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 10 ರಂದು ಚುನಾವಣೆ ನಡೆಯಲಿದ್ದು ಮೇ 13 ರಂದು ಮತ ಎಣಿಕೆ ಮತ್ತು ಫಲಿತಾಂಶ ಹೊರಬೀಳಲಿದೆ ಎಂದು ತಿಳಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ರಾಯಪ್ಪ ಹುಣಸಗಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಅನಿಲಕುಮಾರ ಜಿ ನೇಮಿಸಲಾಗಿದೆ ಎಂದರು.
ಒಟ್ಟು 2.23,784 ಮತದಾರರರಿದ್ದು ಅದರಲ್ಲಿ 1,15453 ಮಹಿಳಾ ಹಾಗೂ 1,08321 ಪುರುಷ ಮತದಾರರಿದ್ದು ಇತರೆ 10 ಮತದಾರರಿದ್ದಾರೆ, ತಾಲೂಕಿನಲ್ಲಿ 238 ಮತಗಟ್ಟೆಗಳನ್ನು ತೆರೆಯಲಾಗಿದ್ದು ಅದರಲ್ಲಿ 187 ಲೋಕೇಷನ್ನಲ್ಲಿದ್ದು, ಸೂಕ್ಷ್ಮ 4, ಅತೀ ಸೂಕ್ಷ್ಮ 50 ಮತಗಟ್ಟೆಗಳೆಂದು ಗುರುತಿಸಲಗಿದೆ, ತಾಲೂಕಿನಾದ್ಯಂತ ತಡಸ, ರಾಮನಕೊಪ್ಪ, ಕೋಣನಕೇರಿ ಹಾಗೂ ಪಾಣಿಗಟ್ಟಿಗಳಲ್ಲಿ ಒಟ್ಟು 04 ಚೆಕ್ಪೋಷ್ಟ್ಗಳನ್ನ ಹಾಕಲಾಗಿದೆ, 4 ವಿಡಿಯೋ ಕಣ್ಗಾವಲು ತಂಡ, 2 ವಿಡಿಯೋ ವೀಕ್ಷಣಾ ತಂಡ, 1 ಲೆಕ್ಕ ಪತ್ರ ತಂಡ, 1 ಸಹಾಯಕ ವೆಚ್ಚ ವೀಕ್ಷಕ ತಂಡ, 20 ವಲಯಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಟಾಲ್ಪ್ರೀನಂ 1950 ಸಹಾಯವಾಣಿಯನ್ನು ಸಂಪರ್ಕಿಸಲು ತಿಳಿಸಿದ ಅವರು ಅಲ್ಲದೇ ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಯಾವುದೇ ರಾಜಕೀಯ ಬಾವುಟ ಸೇರಿದಂತೆ ರಾಜಕೀಯ ಪ್ರಕ್ರಿಯೆಯಗಳು ನಡೆಸಿದರೆ ತುತರ್ು ಕ್ರಮ ತೆಗೆದುಕೊಳ್ಳುತ್ತದೆ, ಬ್ಯಾನರ್ಗಳನ್ನ ತೆರುವುಗೊಳಿಸುವ ಕಾರ್ಯ ನಡೆದಿದೆ, 50 ಸಾವಿರದಿಂದ ಮೆಲ್ಪಟ್ಟ ಹಣ್ಣಕ್ಕೆ ದಾಖಲೆಗಳ ಅವಶ್ಯವಾಗಿ ಬೇಕು ಇಲ್ಲವಾದರೆ ಕ್ರಮ ಅನಿವಾರ್ಯ ಎಂದ ಅವರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ದ್ವನಿವರ್ಧಕ ಬಳಸುವಂತಿಲ್ಲ ಎಂದರು.
ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾದ ತಹಶೀಲ್ದಾರರಾದ ಸಂತೋಷ ಹಿರೇಮಠ ಹಾಗೂ ಅನಿಲಕುಮಾರ ಜಿ ಹಾಗೂ ಸಿಬ್ಬಂದಿಗಳು ಇದ್ದರು.