ಕಾಗವಾಡ

ಅಕ್ರಮವಾಗಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ

ಅಕ್ರಮವಾಗಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ

ಕಾಗವಾಡ: ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ.   ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಎಷ್ಟೇ ಬ್ರೇಕ್ ಹಾಕಿದ್ರು ಅದರ ದಂಧೆ ಜೋರಾಗಿದೆ ಎಂಬುದಕ್ಕೆ  ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ  ನಡೆದ ರೈಡ್ ಸಾಕ್ಷಿಯಾಗಿದೆ. ಅಧಿಕಾರಿಗಳು ಖಚಿತ ಮಾಹಿತಿ  ಮೇರೆಗೆ  ಕಾಗವಾಡ  ಪೊಲೀಸ್ ಠಾಣಾಧಿಕಾರಿ  ಹಾಗೂ ಆಹಾರ ನೀರಿಕ್ಷಕರಾದ  ಸುನೀಲ ಕಟ್ಟಿ ಇಲಾಖೆಯ ಸಿಬ್ಬಂದಿಗಳು , ಗ್ರಾಮ ಲೆಕ್ಕಾಧಿಕಾರಿ  ಪ್ರಕಾಶ ಕಾಂಬಳೆ ತಂಡ  ಸೇರಿ ಅಕ್ರಮ ಪಡಿತರ ಅಕ್ಕಿಯನ್ನ  ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ನಡೆಸಿ 6 ಕ್ವಿಂಟಾಲ್ ಕ್ಕಿಂತಲೂ ಹೆಚ್ಚು  ಅಕ್ರಮ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.   ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗ್ರಾಹಕರಿಗೆ ನೀಡಿದ್ದ ಪಡಿತರ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು  ಮನೆಯಲ್ಲಿ  6 ಕ್ವಿಂಟಾಲ್  ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸಿಯಿಟ್ಟಿದ ಮನೆಯಲ್ಲಿ ಸಿಕ್ಕಿದ ಅಕ್ಕಿಯನ್ನು ಅಕ್ರಮ ಎಂದು ಪರಿಗಣಿಸಿ ಪ್ರಕಾಶ ಕೊರವಿ  ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಆಹಾರ ಇಲಾಖೆ ನಿರೀಕ್ಷಕರು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿ ಓದಿ