ಅಂಕಸಾಪುರ ಶ್ರೀ ಸದ್ಗುರು ರಾಮಾನಂದ ಸ್ವಾಮಿಗಳು ಲಿಂಗೈಕ್ಯ
ರಾಣೆಬೆನ್ನೂರು 12: ಸುಕ್ಷೇತ್ರ ತಾಲೂಕಿನ ಅಂಕಸಾಪುರ ಗ್ರಾಮದ ಸದ್ಗುರು ಶಿವನಪಾದ ಶಿವಾನಂದ ಮಠದ ಮೌನ ಯೋಗಿ, ರಾಮಾನಂದ ಸ್ವಾಮಿಗಳು ತಮ್ಮ 95ನೇ ವರ್ಷದಲ್ಲಿ ಗ್ರಾಮದ ಮಠದಲ್ಲಿ, ಮಂಗಳವಾರ ಸಂಜೆ 4-00 ಗಂಟೆಗೆ ಲಿಂಗೈಕ್ಯರಾದರು. ಲಿಂಗೈಕೆಗಳು, ತಮ್ಮ ಜೀವಿತಾವಧಿಯಲ್ಲಿ ನಾಡಿನ ಭಕ್ತ ಸಮುದಾಯಕ್ಕೆ, ತಪಸ್ವಿ ಮೌನಯೋಗಿ ಗಳಾಗಿ ಶ್ರೀಮಠದ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡು ಭಕ್ತರ, ಉದ್ದಾರಕ್ಕಾಗಿ ಸದಾಕಾಲ ಶ್ರಮಿಸಿದವರಾಗಿದ್ದರು. ಲಿಂಗೈಕ್ಯ ವಾರ್ತೆ ತಿಳಿಯುತ್ತಿದ್ದಂತೆ, ಭಕ್ತ ಸಮೂಹ, ಗ್ರಾಮದಲ್ಲಿರುವ ತಮ್ಮ ಮಠದತ್ತ ಧಾವಿಸಿ, ಪುಣ್ಯ ದರ್ಶನ ಪಡೆದರು. ಸದ್ಗುರು ರಾಮಾನಂದ ಸ್ವಾಮಿಗಳವರ ಅಂತಿಮ ಕ್ರಿಯಾದಿ ಗಳನ್ನು ವಿಧಿವತ್ತಾಗಿ, ಧಾರ್ಮಿಕ ಸಂಸ್ಕಾರ ಪರಂಪರೆಯಂತೆ ಅ.12ರಂದು ಬುಧವಾರ ಮುಂಜಾನೆ 12 ಗಂಟೆಗೆ, ಮಠದ ಸದ್ಗುರು ಈಶ್ವರಾನಂದ ಸ್ವಾಮಿಗಳವರು ನೇತೃತ್ವದಲ್ಲಿ, ಶಿವಾನಂದ ಮಠದಲ್ಲಿ ಅಪಾರ ಭಕ್ತ ಸಮೂಹದ ಮಧ್ಯೆ ನೆರವೇರಿಸಲಾಯಿತ.