ಐನಾಪುರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸಭೆ
ಕಾಗವಾಡ 19: ಐನಾಪುರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ದಿ.18ರಂದು ಸಂಘದ ಮೈದಾನದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕುಮಾರ ಅಪರಾಜ ಸಂಘವು ಪ್ರಸಕ್ತ ಸಾಲಿನಲ್ಲಿ 72.17 ಲಕ್ಷ ಲಾಭ ಗಳಿಸಿದ್ದು, ಡಿವ್ಹಿಂಡ ಶೇ.16 ವಿತರಿಸಲಾಗಿದೆ. ಸಂಘವು ಪ್ರಗತಿಪಥದತ್ತ ಸಾಗುತ್ತಿದ್ದು ಸಾಲ ಪಡೆದ ಸದಸ್ಯರು ತಾವು ಆರ್ಥಿಕವಾಗಿ ಸಬಲರಾಗಿ ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಶ್ರಮಿಸಬೇಕೆಂದು ಹೇಳಿದರು.
ಸಂಘದಲ್ಲಿ ಅಂಕೌಟ ಆಗಿ. ಸೇವೆ ಸಲಿಸಿ ನಿವೃತ್ತಿ ಹೊಂದಿದ ವಿರುಪಾಕ್ಷಿ ಡೂಗನವರ ಅವರನ್ನು ಸತ್ಕರಿಸಿದರು. ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ಸತೀಶ ಗಾಣಿಗೇರ, ಭೂಪಾಲ ಮಾನಗಾಂವೆ, ರಾಜೇಂದ್ರ ಪೊತದಾರ, ಆದಿನಾಥ ದಾನೋಳಿ, ಅಣ್ಣಾಸಾಬ ಡೂಗನವರ, ಪ್ರವೀಣ ಕುಲಕರ್ಣಿ , ತಮಣ್ಣಾ ಪಾರಶೆಟ್ಟಿ, ರಾವಸಾಬ ಹರಳೆ, ಮಹಾದೇವ ಬೇಡರ, ಲಕ್ಷ್ಮೀ ಬಾಯಿ ರಡ್ಡಿ, ವರ್ಷಾ ಪಾಟೀಲ, ದಾದಾ ಪಾಟೀಲ, ಮನೋಹರ ಕೊಕಟನೂರ, ಸಂಜು ಭಿರಡಿ ಸೇರಿದಂತೆ ಸಭೆಯಲ್ಲಿ ಸಂಘದ ಶೇರುದಾರರು, ಹಾಗೂ ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಇದ್ದರು.
ಸಂಘದ ಮಾನ್ಯೆಜರ ಅಣ್ಣಾಸಾಬ ಜಾಧವ ವರದಿ ವಾಚನ ಮಾಡಿದರು. ಸಿಬ್ಬಂದಿ ಮೃತುಂಜಯ್ಯ ಹಿರೇಮಠ ನಿರೂಪಿಸಿ ವಂದಿಸಿದರು