ಕೃಷಿ ಸಾಲ ವಸೂಲಾತಿ ಪದ್ದತಿ ವಿರೋಧಿಸಿ ನ. 1ರಿಂದ ಪಾದಯಾತ್ರೆ
ಸಿರುಗುಪ್ಪ : ಕೃಷಿ ಸಾಲ ವಸೂಲಾತಿ ಪದ್ದತಿ ವಿರೋಧಿಸಿ ಮತ್ತು ತಕ್ಷಣವೇ ಬೆಂಬಲ ಬೆಲೆಯ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ನ. 1ರಿಂದ 7ರವರೆಗೆ ಸಿರುಗುಪ್ಪ ತಾಲೂಕಿನ ವತ್ತು ಮುರಣಿ ಗ್ರಾಮದಿಂದ ಆರಂಭಿಸಿ ಸರ್ಕಾರ ದ ಗಮನ ಸೆಳೆಯಲು ಹಚ್ಚೊಳ್ಳಿ , ಚಿಕ್ಕಬಳ್ಳಾರಿ, ಶ್ರೀಧರಗಡ್ಡ, ಕುಡುದರಹಾಳು ಕ್ಯಾಂಪ್, ಪಿಚ್ ಚೇಶ್ವರ ಕ್ಯಾಂಪ್ , ಇಬ್ರಾಹಿಂಪುರ್ ,ಸಿರುಗುಪ್ಪ, ಹಳೆಕೋಟೆ, ತೆಕ್ಕಲಕೋಟೆ, ಉಪ್ಪಾರುಹೊಸಳ್ಳಿ, ಬಲಕುಂದಿ, ಮೈಲಾಪುರ, ಬೂದುಗುಪ್ಪ , ಗೋಸುಬಾಳು , ಬೈರಾಪುರ ,ಕರೂರು, ದರೂರು, ಹಾಗಲೂರು, ಹೆಚ್ ಹೊಸಳ್ಳಿ, ತಾಳೂರು ಮತ್ತು ಬಳ್ಳಾರಿ, ತಾಲ್ಲೂಕಿನ ಹಂದಿಹಾಳು (ಇಸ್ಲಾಂಪುರ್ ),ಹಡ್ಲಿಗಿ, ಬಸರಕೋಡು ,ಕರ್ಚೆಡು, ಒಣೆನೂರು , ಬಾಣಸೂರ, ಕೇಕೆ ಹಾಳು, ಗೋಟೂರು, ಮೋಕಾ, ಯರಗುಡಿ ,ಎಂ ಗೋನಾಳು, ಜಾಲಿಹಾಳು, ನಾಗೇನಹಳ್ಳಿ, ಬೂದಿಹಾಳು ,ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಿಲಹಳ್ಳಿ ಮೂಲಕ ಬಳ್ಳಾರಿಗೆ 147ಕಿ.ಮೀ ಪಾದಯಾತ್ರೆ ಜಿಲ್ಲಾಧಿಕಾರಿ ಕಚೇರಿ ತಲುಪುವದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್ ಮಾಧವರೆಡ್ಡಿ ತಿಳಿಸಿದರು. ಪಾದಯಾತ್ರೆ ಮಾರ್ಗದ ಕರಪತ್ರಗಳನ್ನು ಜಿಲ್ಲಾ ಸಮಿತಿ ಸದಸ್ಯ ಕೆ ಬಸವರೆಡ್ಡಿ, ಹಚ್ಚೊಳ್ಳಿಯಲ್ಲಿ ಬಿಡುಗಡೆ ಮಾಡಿದರು. ಎಎಪಿ ಮುಖಂಡ ಧರಪ್ಪನಾಯಕ ರೈತ ಮುಖಂಡರಾದ ಓಂಕಾರೇಗೌಡ ಪ್ರವೀಣ್ ರೆಡ್ಡಿ ಇದ್ದರು