ಮನರಂಜನೆ

ನಟ ಸುಶಾಂತ್ ಆತ್ಮಹತ್ಯೆ, 4 ಗಂಟೆ ಕಾಲ ಆದಿತ್ಯ ಚೋಪ್ರಾ ವಿಚಾರಣೆ

ನಟ ಸುಶಾಂತ್ ಆತ್ಮಹತ್ಯೆ, 4 ಗಂಟೆ ಕಾಲ ಆದಿತ್ಯ ಚೋಪ್ರಾ ವಿಚಾರಣೆ

ಮುಂಬೈ, ಜುಲೈ 18: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಇಂದು  ಸತತ 4 ಗಂಟೆ ಕಾಲ ವಿಚಾರಣೆಗೆ ಹಾಜರಾಗಿದ್ದಾರೆ .

ಸುಶಾಂತ್ ಸಾವಿನ ಹಿನ್ನಲೆಯಲ್ಲಿ  ಯಶ್ ರಾಜ್ ಫಿಲಂಸ್ ಹೆಸರು ಸಹ ಕೇಳಿ ಬಂದಿತ್ತು. ಯಶ್ ರಾಜ್ ಫಿಲಂಸ್ ಜೊತೆ ಮಾಡಿಕೊಂಡಿದ್ದ ಹಲವು ಒಪ್ಪಂದಗಳಿಂದ  ಸುಶಾಂತ್ ಅವರನ್ನು ಕೈಬಿಡಲಾಗಿತ್ತು ಎಂಬ ಗುರುತರ ಆರೋಪಗಳಿವೆ. 

ಪೊಲೀಸರ ಸಮನ್ಸ್ ಹಿನ್ನೆಲೆ ಇಂದು ಮುಂಬೈನ ಬಾಂದ್ರಾ ಪೊಲೀಸರ ಮುಂದೆ ಆದಿತ್ಯ ಚೋಪ್ರಾ ವಿಚಾರಣೆಗೆ  ಹಾಜರಾಗಿದ್ದಾರೆ. 

ಸುಮಾರು ನಾಲ್ಕು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದ ಆದಿತ್ಯ ಚೋಪ್ರಾ ಅವರ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದುವರೆಗೂ ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ    34 ಜನರು ಹೇಳಿಕೆ ಪಡೆಯಲಾಗಿದೆ.

ಕಳದೆ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ತನ್ನ ಅಪಾರ್ಟ್ಮೆಂಟ್ನಲ್ಲಿ  ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ  ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾಗಿದ್ದರೂ ಅನುಮಾನದ ಹಿನ್ನೆಲೆ ವಿವಿಧ ಆಯಾಮಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಶಾಂತ್ ಸಿಂಗ್ ಅವರ ಗೆಳತಿ ರಿಯಾ ಚಕ್ರವರ್ತಿ ಇತ್ತೀಚಿಗಷ್ಟೆ ಟ್ವಿಟರ್  ಮೂಲಕ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದರು.


ಸುದ್ದಿ ಓದಿ