ಡ್ರಗ್ಸ್ ದಂಧೆ: ನಟಿ ರಾಗಿಣಿ ಸಿಸಿಬಿ ವಶಕ್ಕೆ
ಬೆಂಗಳೂರು,ಸೆಪ್ಟೆಂಬರ್ .4: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಬೆಳ್ಳಂಬೆಳಗ್ಗೆ 6.35ಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ಅವರ ನೇತೃತ್ವದಲ್ಲಿ ರಾಗಿಣಿ ಅವರ ಮನೆಯ ಮೇಲೆ ದಾಳಿ ಮಾಡಲಾಗಿತ್ತು.
ಸತತ 3 ಗಂಟೆ ಶೋಧ ಕಾರ್ಯ ಬಳಿಕ ಮನೆ ಕೀ, ಕಾರು ಕೀ, ಮೊಬೈಲ್ ಅನ್ನು ವಶಕ್ಕೆ ಪಡೆದು ರಾಗಿಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನ್ನೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ರಾಗಿಣಿ ಅವರು ತಾವು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಸ್ಪಷ್ಟಪಡಿಸಿದರು.
ಇನ್ನು, ಬಂಧನಗೊಳಗಾಗಿರುವ ರಾಗಿಣಿ ಆಪ್ತ ರವಿಶಂಕರ್, ತಾವು ರಾಗಿಣಿಗೆ ಪ್ರತಿ ದಿನ 1 ಲಕ್ಷ ರೂ. ಖರ್ಚು ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಹೀಗಾಗಿ ಈ ಕುರಿತು ಸಿಸಿಬಿ, ರಾಗಿಣಿಗೆ ವಿಚಾರಣೆ ನಡೆಸಲಿದ್ದಾರೆ. ಅಲ್ಲದೇ, ರಾಗಿಣಿ ವಾಟ್ಸಪ್ ಡಿಲೀಟ್ ಮಾಡಿದ್ದು, ಹೊಸ ಮೊಬೈಲ್ ಖರೀದಿಸಿದ್ದಾರೆ. ಈ ಮೂಲಕ ಅವರು ಸಾಕ್ಷ್ಯ ನಾಶಕ್ಕೆ ಮುಂದಾಗಿರುವುದು ಅಧಿಕಾರಿಗಳಿಗೆ ಅನುಮಾನವು ಮೂಡಿದೆ ಎನ್ನಲಾಗಿದೆ.