ಜಮಖಂಡಿ ಶಹರ ಠಾಣೆಯ ಪಿಎಸ್ ಐ ಹೆಸರಿನಲ್ಲಿ ಫೇಕ್ ಅಕೌಂಟ್ ಮಾಡಿದ ಆರೋಪಿ ಬಂಧನ
ಜಮಖಂಡಿ ಶಹರ ಠಾಣೆಯ ಪಿಎಸ್ ಐ ಹೆಸರಿನಲ್ಲಿ ಫೇಕ್ ಅಕೌಂಟ್ ಮಾಡಿದ ಆರೋಪಿ ಬಂಧನ.
ಜಮಖಂಡಿ 04 : 4-1ನಕಲಿ ಫೇಸ್ ಬುಕ್ ಖಾತೆ ತೆರೆದು ಅದಕ್ಕೆ ಜಮಖಂಡಿ ಶಹರ ಠಾಣೆಯ ಪಿಎಸ್ಐ ಅವರು ಸಮವಸ್ತ್ರದಲ್ಲಿ ಇರುವ ಫೋಟೋ ಅಪ್ಲೋಡ್ ಮಾಡಿ ಜನರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಸಿಇಎನ್ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿ ಅಥಣಿ ಮೂಲದ ವಿಜಯಕುಮಾರ ಬರಲಿ ಎನ್ನಲಾಗಿದೆ. ಜಮಖಂಡಿ ಶಹರ ಠಾಣೆ ಪಿಎಸ್ಐ ಅನೀಲ ಕುಂಬಾರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ಹಾಗೂ 1 ಇನ್ಸ್ಟಾಗ್ರಾಂ ಖಾತೆ ತೆರೆದಿದ್ದು ಪಿಎಸ್ಐ ಅನೀಲ ಕುಂಬಾರ ಸಮವಸ್ತ್ರದಲ್ಲಿನ ಭಾವಚಿತ್ರಗಳನ್ನು ಮತ್ತು ಇನ್ನಿತರ ಭಾವಚಿತ್ರಗಳನ್ನು ನಕಲಿ ಖಾತೆಗಳಿಗೆ ಅಪ್ಲೋಡ್ ಮಾಡಿದ್ದ. 27.12.2022 ರಂದು ಖಾತೆ ತೆರೆದು ಇಲ್ಲಿವರೆಗೂ ಅನೇಕರಿಗೆ ಹೋಮ್ ಗಾರ್ಡ್ ಕೆಲಸ ಕೊಡೆಸುವ ಆಮಿಶವೊಡ್ಡಿ ಹಣ ಪಡೆಯುತ್ತಿದ್ದನಂತೆ. ಜೊತೆಗೆ ಖಾತೆಯ ಮುಖಾಂತರ ರಾಜಕೀಯ ವ್ಯಕ್ತಿಗಳಿಗೆ ನಿಂದಿಸುವ ರೀತಿಯಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿ ಪಿಎಸ್ಐ ಅವರ ತೇಜೋವಧೆ ಮಾಡುತ್ತಿದ್ದ ಎಂದು ಪಿಎಸ್ಐ ಅನೀಲ ಕುಂಬಾರ ಬಾಗಲಕೋಟೆ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ 29.08.2024 ರಂದು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಯನ್ನು ಪತ್ತೆ ಮಾಡಿರುವ ಸಿಇಎನ್ ಪೊಲೀಸರು ಬಂಧಿಸಿ, ನ್ಯಾಯಾಂಗವಶಕ್ಕೆ ಒಪ್ಪಿಸಿದ್ದಾರೆ. ಜಮಖಂಡಿ ಶಹರ ಠಾಣೆಯ ಪಿಎಸ್ ಐ ಹೆಸರಿನಲ್ಲಿ ಫೇಕ್ ಅಕೌಂಟ್ ಮಾಡಿದ ಆರೋಪಿ ಬಂಧನ.