ರಾಣೆಬೆನ್ನೂರ

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಶೈಕ್ಷಣಿಕ ಸಾಧನೆ ಸಾಧ್ಯ: ದುಮ್ಮಾಳ

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಶೈಕ್ಷಣಿಕ ಸಾಧನೆ ಸಾಧ್ಯ: ದುಮ್ಮಾಳ

ರಾಣೇಬೆನ್ನೂರು 23:  ಆಧುನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯಿಂದಲೂ ಸಹಕಾರಿಯಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎ.ಬಿ. ದುಮ್ಮಾಳ ಹೇಳಿದರು. ಅವರು ಇತ್ತೀಚೆಗೆ ಜಿಲ್ಲಾ ಕೇಂದ್ರ ಹಾವೇರಿಯ ಅಗಸ್ತ್ಯ ಪಿಯು ವಿಜ್ಞಾನ ಕಾಲೇಜು ಭವನದಲ್ಲಿ ಆಯೋಜಿಸಲಾಗಿದ್ದ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಹಾಗೂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಮತ್ತು ಉಪನ್ಯಾಸಕಿ ಮಮತಾ ಬಿಜ್ಜುರಮಠ ಅವರ  ಬೀಳ್ಕೊಡುಗೆ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ತಂದೆ ತಾಯಿ ಹತ್ತು ಹಲವು ಕನಸುಗಳನ್ನು ಕಂಡಿರುತ್ತಾರೆ, ಅವರ ಆಸೆಗಳನ್ನು ಈಡೇರಿಸಬೇಕಾಗಿರುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ ಎಂದ  ಅವರು, ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಶಿಕ್ಷಣಕಷ್ಟೇ ಸೀಮಿತವಾಗದೆ ಕಲೆ, ಸಾಹಿತ್ಯ, ಸಂಗೀತದ ಮೂಲಕ ಸಂಸ್ಕಾರವನ್ನು ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ, ಮಮತಾ ಬಿಜ್ಜುರಮಠ ಅವರು, ಹಣ, ಆಸ್ತಿ, ಅಂತಸ್ತು, ಯಾವುದು ಶಾಶ್ವತವಲ್ಲ  ಇದೆಲ್ಲವೂ ಕ್ಷಣಿಕ. ಆದರೆ ಕಲಿತ ವಿದ್ಯೆ,ಸದಾ ಶಾಶ್ವತವಾಗಿರುತ್ತದೆ, ಅಷ್ಟೇ ಅಲ್ಲದೆ ವಿದ್ಯೆಗೆ ಸಮಾಜ ಸದಾಕಾಲ ಗೌರವ ನೀಡುತ್ತದೆ. ಅಂತಹ ಗೌರವವನ್ನು ಹೊಸದಾಗಿ ಬಂದ ವಿದ್ಯಾರ್ಥಿಗಳು ಪರಿಶ್ರಮದಿಂದ ಗಳಿಸಬೇಕು ಎಂದು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ, ವರ್ತಕ ಶ್ರೀಕಾಂತ ಹೊಸಮನಿ, ನಿರ್ದೇಶಕ ಸತೀಶ್ ಭತ್ತದ, ಮಂಜುನಾಥ ಚನ್ನೂರ, ಇಂದಿರಾ ಹೊಸಮನಿ, ಮತ್ತು ಪ್ರಾಚಾರ್ಯ ಪ್ರಭುಸ್ವಾಮಿ ಮಠ ಮತ್ತಿತರ ಗಣ್ಯರು ಶೈಕ್ಷಣಿಕ ಪ್ರಗತಿಯಲ್ಲಿ, ಉಪನ್ಯಾಸಕರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪಾಲಕರ ಪಾತ್ರ ಕುರಿತಂತೆ ಸಾಧ್ಯಂತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ವಿವಿಧ ವಿಷಯಗಳ ಉಪನ್ಯಾಸಕಿಯರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು  ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಓದಿ