ಭತ್ತದ ಗದ್ದೆಗೆ ನುಗ್ಗಿದ ಸಾರಿಗೆ ಬಸ್
ಲೋಕದರ್ಶನ ವರದಿ
ಹೂವಿನಹಡಗಲಿ 13: ಮುಂಡರಗಿ ಯಿಂದ ಹೂವಿನಹಡಗಲಿ ಸಂಚರಿಸುವ ವಾಯುವ್ಯ ಸಾರಿಗೆ ಬಸ್ಸ್ ಬುಧವಾರರಂದು ತಾಲ್ಲೂಕಿನ ಕಾಗನೂರು ಬಳಿ ಭತ್ತದ ಗದ್ದೆಗೆ ನುಗ್ಗಿದೆ. ಮುಂಡರಗಿ ಯಿಂದ ಹೂವಿನಹಡಗಲಿ ಕಡೆಗೆ ಬರುತ್ತಿದ್ದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸ್ ಭತ್ತದ ಗದ್ದೆಗೆ ನುಗ್ಗಿ ಗದ್ದೆಯ ಬದುವಿಗೆ ಬಂದು ನಿಂತುಕೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನಿಗೆ ಮೂರ್ಚೆ ಬಂದಿದೆ ಎನ್ನಲಾಗಿದೆ.