ಅಥಣಿ

ಖಾಸಗಿ ವ್ಯಕ್ತಿ ವಿದ್ಯುತ್ ಕಂಬದ ಹತ್ತುವುದು ಕಾನೂನು ಅಪರಾಧ

ಖಾಸಗಿ ವ್ಯಕ್ತಿ ವಿದ್ಯುತ್ ಕಂಬದ ಹತ್ತುವುದು ಕಾನೂನು ಅಪರಾಧ

ಲೋಕದರ್ಶನ ವರದಿ

ಸಂಬರಗಿ 07: ಜಂಬಗಿ  ಹೆಸ್ಕಾಂ ವಲಯದಲ್ಲಿ ಬರುವ ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಯಾರಾದರೂ ವಿದ್ಯುತ್ ಕಂಬದ ಮೇಲೆ ಹತ್ತಿ ಏನಾದರೂ ಕೆಲಸ ಮಾಡಿದ್ದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲಯಾಧಿಕಾರಿ ಡಿ ಎಸ್ ಟಕ್ಕಾನಾವರ ಹೇಳಿದರು. 

            ಜಂಬಗಿ ಹೆಸ್ಕಾಮ ವಲಯ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಪ್ರತಿ ಗ್ರಾಮಕ್ಕೆ ಒಬ್ಬ ಲೈನಮನ್ ನೇಮಕ ಮಾಡಲಾಗಿದೆ. ಏನೇ ಕೆಲಸವಿದ್ದರೆ ಲೈನಮನ್ನನ್ನು ಸಂರ್ಪರ್ಕಿಸಬೇಕು.  ಇಲ್ಲವಾದರೆ

ನೇರವಾಗಿ ನನ್ನನು ಸಂಪರ್ಕಿಸಬೇಕು. ಯಾವುದೇ ಖಾಸಗಿ ವ್ಯಕ್ತಿ ವಿದ್ಯುತ ಕಂಬ ಏರುವುದು ಅಪರಾಧ ಎಂದು ಸ್ಪಷ್ಟ ಪಡಿಸಿದರು.  ನನ್ನ ಗಮನಕ್ಕೆ ಬಂದರೆ ಅವರ ವಿರುದ್ಧ ಕ್ರಿಮಿನಲ್ ಮೂಕದ್ದಮೆ ದಾಖಲಿಸುತ್ತೇವೆ. ಲೈನಮನ್ ನಿಮಗೆ ನೀಡಿದ  ಗಾಮ್ರದಲ್ಲಿ ಶಾಶ್ವತವಾಗಿ ಉಳಿಯಬೇಕು. ಈ ಕುರಿತು ಎಚ್ಚರಿಕೆ ನೋಟಿಸ್ ಲೈನಮನ್ಗೆ ನೀಡಲಾಗಿದೆ. ಜಂಬಗಿ  ಹೆಸ್ಕಾಂ ವಲಯದಲ್ಲಿ ಶಿರೂರ ಹಾಗೂ ಬಾಳಿಗೇರಿ ಸಬ್ಸ್ಟೇಶನ್ ಬರುತ್ತವೆ. ಎಲ್ಲಾ ಸಿಬಂದಿ ಹೆಸ್ಕಾಂ ನಿಯಮ ಪಾಲಿಸಬೇಕು ಎಂದು ತಿಳಿಸಿದರು 

ಸುದ್ದಿ ಓದಿ