ಮುಖವಾಡದ ಬಣ್ಣಗಳನ್ನು ಹೊತ್ತ ಮನುಜನು ದಿನಕ್ಕೊಂದು ಸ್ವಾರ್ಥದ ಬಣ್ಣ ಬದಲಾಯಿಸುತ್ತಾನೆ
ಮುಖವಾಡದ ಬಣ್ಣಗಳನ್ನು ಹೊತ್ತ ಮನುಜನು ದಿನಕ್ಕೊಂದು ಸ್ವಾರ್ಥದ ಬಣ್ಣ ಬದಲಾಯಿಸುತ್ತಾನೆ
ರಾಣಿಬೆನ್ನೂರ 30: ಏಳು ಬಣ್ಣ ಸೇರಿ ಹೇಗೆ ಬಿಳಿಯ ಬಣ್ಣ ವಾಗುವುದು ಹಾಗೆಯೆ ಅನೇಕ ಮುಖವಾಡದ ಬಣ್ಣಗಳನ್ನು ಹೊತ್ತ ಮನುಜನು ದಿನಕ್ಕೊಂದು ಸ್ವಾರ್ಥದ ಬಣ್ಣ ಬದಲಾಯಿಸುತ್ತಾ ತನ್ನ ನಿಜ ಸ್ವರೂಪವನ್ನು ಸಮಾಜಕ್ಕೆ ತೋರಿಸ ತೋರಿಸುತ್ತಾನೆ ಎಂದು ಸ್ಥಳೀಂಯೀಶ್ವರಿ ವಿಶ್ವ ವಿದ್ಯಾಲದ ಸಂಚಾಲಕಿ ಮಾಲತಿ ಅಕ್ಕ ಹೇಳಿದರು.
ನಗರದ ನೂತನ ಮಾರುತಿ ಪೇಂಟ್ಸನ ಬಿರ್ಲಾ ಓಪನ್ ಗ್ಯಾಲರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸುಂದರವಾದ ಮನೆಗೆ ಅನೇಕ ಬಣ್ಣಗಳ ಮಿಶ್ರಣವಿರುತ್ತದೆ ಇದರಿಂದ ಆ ಮನೆ ಅಂದ ಚಂದವಾಗಿ ಕಾಣುತ್ತದೆ ಆದರೆ ಮನುಷ್ಯನು ಎಲ್ಲಾ ಬಣ್ಣಗಳನ್ನು ಮಿಶ್ರಣ ಮಾಡಿಕೊಂಡು ಮೃಗದಂತೆ ವರ್ತಿಸುತ್ತಾನೆ ಎಂದವರು ವಿಷಾದಿಸಿದರು
ಬರೀ ಲಾಭಕ್ಕಾಗಿ ಮಹತ್ವ ನೀಡದೇ ಸೇವೆಗೂ ಆದ್ಯತೆ ನೀಡಬೇಕು, ಒಂದು ಸಂಸ್ಥೆಯಲ್ಲಿ ವಿನಯತೆ ಮತ್ತು ವಿದೇಯತೆ ಇರಬೇಕು. ಜನರ ವಿಸ್ವಾಸ ಗಳಿಸಯವುದು ಸುಲಭವಲ್ಲ. ಇವತ್ತಿನ ದಿನದಲ್ಲಿ ಹಣಕಾಸಿನ ವಿಚಾರದಲ್ಲಿ ನಂಬಿಕೆ ಗಳಿಸಿಕೊಂಡು, ಉಳಿಸಿಕೊಂಡು ಹೋಗುವುದು ಸಾಮಾನ್ಯ ಸಂಗತಿ ಅಲ್ಲ. ಈದಿಶೆಯಲ್ಲಿ ಸಾಗಬೇಕು ಎಂದರು.
ಖರ್ಚು ಮತ್ತು ಉಳಿತಾಯದ ಬಗ್ಗೆ ಬಹಳಷ್ಟು ಶಿಸ್ತುಬದ್ಧ ಯೋಚನೆ ಇರಬೇಕು. ಜೊತೆಗೆ ಕ್ರೀಯಾಶೀಲತೆ ಇದ್ದರೆ ಸಾಲದು, ಸಿಬ್ಬಂದಿಗಳಲ್ಲಿ ಸಂಸ್ಥೆ ನನ್ನದು ಎನ್ನುವ ಭಾವ ಮೂಡಿದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಕಾಯಕ ಮತ್ತು ನಿಷ್ಠೆಗೆ ಮಹತ್ವವಿದೆ. ಎಲ್ಲ ದಾರ್ಶನಿಕರು ಈ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳಿದ್ದಾರೆ. ಯಾವುದೇ ಒಂದು ಸಂಸ್ಥೆ ಬೆಳವಣಿಗೆ ಹೊಂದಲು ತ್ಯಾಗ ಮತ್ತು ಬದ್ಧತೆ ಅವಶ್ಯಕವಾಗಿ ಬೇಕು ಎಂದರು.
ವೆಂಕಟೇಶಮೂರ್ತಿ, ಪ್ರಪುಲ ಮೇಲಗಿರಿ, ಸೇಲ್ಸ ಮ್ಯಾನೇಜರ ಶ್ರೀಕಾಂತ ಓಲೇಕಾರ, ಅಶೋಕ ಮೇಲಗಿರಿ, ಲಲಿತಾ ಮೇಲಗಿರಿ, ಮಂಜುನಾಥ, ಮಂಚೂರ ಮತ್ತಿತರರು ಇದ್ದರು.
ಫೋಟೊ30ಆರ್ಎನ್ಆರ್06ರಾಣಿಬೆನ್ನೂರ: ನಗರದ ನೂತನ ಮಾರುತಿ ಪೇಂಟ್ಸನ ಬಿರ್ಲಾ ಓಪನ್ ಗ್ಯಾಲರಿಗೆ ಸ್ಥಳೀಯ ಈಶ್ವರಿ ವಿಶ್ವ ವಿದ್ಯಾಲದ ಸಂಚಾಲಕಿ ಮಾಲತಿ ಅಕ್ಕ ಚಾಲನೆ ನೀಡಿ ಮಾತನಾಡಿದರು.