ಮಲ್ಲಿಗೆ ನಾಡಿನಲ್ಲಿ ಅರಳಿದ ಕಮಲ: ಬಿಜೆಪಿ ವಿಜಯೋತ್ಸವ ಆಚರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 13 : ಭಾರಿ ಕುತೂಹಲ ಮೂಡಿಸಿದ್ದ ಹೂವಿನಹಡಗಲಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯಥರ್ಿ ಪಿ.ಟಿ.ಪರಮೇಶ್ವರನಾಯ್ಕ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ 71,833 ಪಡೆದರೆ,ಪಿ.ಟಿ.ಪರಮೇಶ್ವರನಾಯ್ಕ 71,042 ಮತಗಳು, ಜೆಡಿಎಸ್ ಅಭ್ಯರ್ಥಿ ಪುತ್ರೇಶ 1,834, ಆಮ್ ಆದ್ಮಿ ಪಕ್ಷ 877 ಮತಗಳನ್ನು ಪಡೆದಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಶನಿವಾರ ಮತದಾನ ಫಲಿತಾಂಶ 14ರಿಂದ 15ನೇ ಸುತ್ತಿನಲ್ಲಿ ಪಿ.ಟಿ.ಪರಮೇಶ್ವರನಾಯ್ಕ ಅವರು 2ಸಾವಿರಕ್ಕೂ ಹೆಚ್ಚು ಅಂತರ ಮುನ್ನಡೆ ಪಡೆಯುತ್ತಿದ್ದರು.ನಂತರ 30ಮತಗಳ ಅಂತರಿಂದ ಪರಮೇಶ್ವರನಾಯ್ಕ ಮುನ್ನಡೆ ಇದ್ದು,ನಂತರ ಅಂತಿಮ ಎರಡು ಸುತ್ತಿನಲ್ಲಿ ಕೃಷ್ಣನಾಯ್ಕ ಅವರು 791 ಮತಗಳ ಅಂತರದಿಂದ ವಿಜಯಮಾಲೆ ಒಲಿದಿದೆ. ಕಳೆದ 10ವರ್ಷದಿಂದ ಕಾಂಗ್ರೆಸ್ ಭದ್ರಕೋಟೆಯಲ್ಲಿ ಇದೀಗ ಕಮಲ ಅರಳಿದೆ.
ಮಲ್ಲಿಗೆ ನಾಡಿನಲ್ಲಿ ಈ ಬಾರಿ 2013ರಲ್ಲಿ ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿತ್ತು. ಬಿಜೆಪಿ,ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ಸ್ಪಧರ್ಿಸಿದ್ದರಿಂದ ಕಾಂಗ್ರೆಸ್ ಅಭ್ಯಥರ್ಿ ಪರಮೇಶ್ವರನಾಯ್ಕ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಓದೋಗಂಗಪ್ಪ 44 ಸಾವಿರ ಮತಗಳನ್ನು ಗಳಿಸಿದರೆ, ಅಧಿಕೃತ ಬಿಜೆಪಿ ಅಭ್ಯಥರ್ಿ ಬಿ.ಚಂದ್ರನಾಯ್ಕ 28ಸಾವಿರ ಮತಗಳನ್ನು ಪಡೆದಿದ್ದರು. ಮತಗಳ ವಿಭಜನೆಯಿಂದ ಪರಮೇಶ್ವರನಾಯ್ಕ ಕೇವಲ 9ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದರು.
2023ರ ಚುನಾವಣೆಯಲ್ಲಿ ಬಿಜೆಪಿಯಲ್ಲಿ 10ರಿಂದ 12 ಜನ ಆಕಾಂಕ್ಷಿಗಳಿದ್ದರು,ಸಹ ಮೂಲ ಬಿಜೆಪಿಗೆ ಟಿಕೆಟ್ ಕೊಡಲಿಲ್ಲ.ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಕೃಷ್ಣನಾಯ್ಕ ಬಿಜೆಪಿ ಸೇರ್ಪಡೆಯಾದರು.ನಂತರ ಬಿಜೆಪಿ ಟಿಕೆಟ್ ನೀಡಿದ್ದರಿಂದ ಪಕ್ಷದಲ್ಲಿ ಆಕಾಂಕ್ಷಿಗಳು ಅಸಮಾಧಾನವನ್ನು ಶಮನಗೊಳಿಸಿ ಬಿಜೆಪಿ ಅಭ್ಯರ್ಥಿ ಎಲ್ಲರೂ ಕೈಜೋಡಿಸಿದರು.ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಕೇವಲ 791 ಅಂತರದಿಂದ ಸೋಲು ಕಂಡರು.
ಬಿಜೆಪಿ ಗೆಲುವು ವಿಜಯೋತ್ಸವ : ಭಾರಿ ಕುತೂಹಲ ಮೂಡಿಸಿದ್ದ ಹೂವಿನಹಡಗಲಿ ಎಸ್ಸಿ ಮೀಸಲು ವಿಧಾನಸಭಾ ಮತ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಗೆಲುವು ಸಾಧಿಸಿದ್ದಾರೆ. ಜಯದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟ್ಟಣದ ನಾನಾ ವೃತ್ತದಲ್ಲಿ ಪಾಟಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು