ಸಹ ಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ
ಕಾಗವಾಡ :ಸ್ಪರ್ಧೆಯಲ್ಲಿ ವಿಜೇತ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ನಗದು ಬಹುಮಾನವನ್ನು ನೀಡಲಾಗುತ್ತದೆ ಪ್ರಥಮ ಹಾಗೂ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದಂತಹ ವಿಜೇತ ಶಿಕ್ಷಕರಿಗೆ ಪ್ರಥಮ ಬಹುಮಾನ 1500 ದ್ವಿತೀಯ ಬಹುಮಾನ 1000 ತೃತೀಯ ಬಹುಮಾನ 500 ಗಳಂತೆ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುತ್ತದೆ.ಸ್ಪರ್ಧೆಯಲ್ಲಿ 150 ಕ್ಕಿಂತ ಹೆಚ್ಚು ಶಿಕ್ಷಕರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ ಎಂದು ನೋಡಲ್ ಅಧಿಕಾರಿ ಎಸ್.ಬಿ ಪಾಟೀಲ ಹೇಳಿದರು.
ಐನಾಪುರ ಪಟ್ಟಣದಲ್ಲಿ ದಿ. 25ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು.ಹಾಗೂ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾ ಲಯ ಇವರ ಸಹಯೋಗದಲ್ಲಿ ಕೆಆರ್ಇಎಸ್ ಶಿಕ್ಷಣ ಸಂಸ್ಥೆಯೆ ಕೇಂದ್ರ ಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ತಾಲೂಕಾ ಮಟ್ಟದ ಸಹ ಪಠ್ಯ ಚಟುವಟಿಕೆಗಳಿಗಳ ಸ್ಪರ್ಧೆಗಳ ಕಾರ್ಯಕ್ರಮವನ್ನು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಆರ್ ಮುಂಜೆ ಅವರು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಭಕ್ತಿ ಗೀತೆ ,ಪ್ರಬಂಧ, ಆಶು ಭಾಷಣ ರಸ ಪ್ರಶ್ನೆ ಮಾದರಿ ತಯಾರಿಕೆ, ಸ್ಪರ್ಧೆಗಳು ಜರುಗಿದವು. ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಜಿ.ಸಂಕಪಾಳ ಆರ್ ಎಚ್ ಖಡಾಕಡಿ, ಎಸ್ ಬಿ, ಪಾಟೀಲ,ಜಿ ಎಮ್ ಸಡ್ಡಿ ಉಪಪ್ರಾಚಾರ್ಯ ಎ ಎಮ್ ಹುಲ್ಲೆನ್ನವರ ಇತರರು ಇದ್ದರು