ಮಹಾರಾಷ್ಟ್ರದಿಂದ ಅಕ್ರಮ ಮದ್ಯಸಾಗಾಣಿಕೆ ತಡೆಗೆ ಗಡಿ ಭಾಗದಲ್ಲಿ ಚಕ್ಪೋಸ್ಟ್ ಅಳವಡಿಕೆ
ಸಂಬರಗಿ 13:ಕರ್ನಾಟಕ ಮಹಾ ಗಡಿಯಲ್ಲಿ ಮಹಾರಾಷ್ಟ್ರದಿಂದ ಅಕ್ರಮವಾಗಿ ಮದ್ಯಸಾಗಾಣಿಕೆ ತಡೆಗಟ್ಟಲು ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ಅಬಕಾರಿ ಇಲಾಖೆಯಿಂದ ಚಕ್ಪೋಸ್ಟ್ ಅಳವಡಿಸಿದ್ದಾರೆ. ಆ ಕಾರಣ ಅಕ್ರಮ ಸಾರಾಯಿ ತಡೆಗಟ್ಟುವ ಸಾಧ್ಯತೆ ಇದ್ದು ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಿನಿಂದ ಪರಿಶೀಲನೆ ಮಾಡಲಾಗುತ್ತಿದೆ.
ಕರ್ನಾಟಕ ಸರ್ಕಾರ ಅಬಕಾರಿ ಇಲಾಖೆ ವಿವಿಧ ಮದ್ಯದ ಬೆಲೆಯನ್ನು ಹೆಚ್ಚು ಮಾಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕಿಂತ ಪ್ರತಿ ಮದ್ಯದ ಬೆಲೆ ಕಡಿಮೆ ಮಾಡಿದೆ. ಆ ಕಾರಣದಿಂದ ಸಾಂಗಲಿ ಜಿಲ್ಲೆಯಿಂದ ಅಥಣಿ ಹಾಗೂ ಕಾಗವಾಡ ತಾಲೂಕಿನ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸೆರೆ ಅನಧಿಕೃತವಾಗಿ ಮಾರಾಟ ಮಾಡುವುದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಈ ಕ್ರಮ ಕೈಗೊಂಡಿದೆ. ಗಡಿಭಾಗದ ಅನಂತಪೂರ, ಮಧಬಾವಿ, ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಹಲವು ಗ್ರಾಮಗಳಲ್ಲಿ ಗುಪ್ತವಾಗಿ ತಪಾಸನೆ ನಡೆಸುತ್ತಿದ್ದು ಏನಾದರೆ ಹೊರಗಿನಮದ್ಯ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ವಿಶೇಷವಾಗಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಜನರ ಸಂಪರ್ಕ ಸಾಮಾನ್ಯವಾಗಿ ಮಹಾರಾಷ್ಟ್ರದ ಸಾಂಗಲಿ ಮಿರಜ ಹಾಗೂ ಜತ್ತ ತಾಲೂಕಿನ ಕಡೆ ಸಾಗುತ್ತಿದ್ದು ಅಲ್ಲಿ ಮರಳಿ ಬರುವ ಪ್ರತಿಯೊಂದು ವಾಹನವನ್ನು ಬಳ್ಳಿಗೇರಿ ಹಾಗೂ ಕಾಗವಾಡ ಚಕ್ ಪೋಸ್ಟ್ನಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.ಇನ್ನೂ ಹಲವಾರು ಗಡಿ ಗ್ರಾಮಗಳಲ್ಲಿ ಚಕ್ ಪೋಸ್ಟ್ಗಳ ಅವಶ್ಯಕತೆ ಇದೆ. ಈ ಎರಡು ಚಕ್ಕ್ ಪೋಸ್ಟ್ ದಿಂದ 24 ಗಂಟೆಗಳ ಕಾಲ ವಾಹನಗಳನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ಪರಿಶೀಲನೆ ಮಾಡುತ್ತಾರೆ.ಈ ಕುರಿತು ಅಬಕಾರಿ ಇಲಾಖೆಯ ನೀರಿಕ್ಷಕ ಮಹಾಂತೇಶ ಬಂಡಗಾರ ಇವರನ್ನು ಸಂಪರ್ಕಿಸಿದಾಗ ಸದ್ಯದ ಪರಿಸ್ಥಿತಿಯಲ್ಲಿ ಬಳ್ಳಿಗೇರಿ ಹಾಗೂ ಕಾಗವಾಡ ಚಕ್ ಪೋಸ್ಟ್ ಇದ್ದು ಅಬಕಾರಿ ಇಲಾಖೆ ಪ್ರತಿಯೊಂದು ವಾಹನಗಳನ್ನು ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೆವೆ ಎಂದರು.ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ಬಳ್ಳಿಗೇರಿ ಚಕ್ಕ್ ಪೋಸ್ಟ್ದಲ್ಲಿ ಅಬಕಾರಿ ಇಲಾಖೆಯಿಂದ ಉಪನಿರೀಕ್ಷಕ ದತ್ತಾ ಅಥಣಿ ಹಾಗೂ ಶಿವಪುತ್ರ ಮಂಗಸೂಳಿ ವಾಹನ ಪರಿಶೀಲನೆ ಮಾಡುತ್ತಿರು ದೃಶ್ಯ