ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ವಾರಸುದಾರರಿಗೆ 2 ಲಕ್ಷ ಪರಿಹಾರ
ಲೋಕದರ್ಶನ ವರದಿ
ರಾಣಿಬೆನ್ನೂರ: ಇತ್ತೀಚೆಗೆ ನಗರದ ಯೆರೆಕುಪ್ಪಿ ರಸ್ತೆಯ ಪಾರ್ಟ್ ಪೂಪರ್ ತಯಾರಿಕಾ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ದಿ. ಶಿಲ್ಪಾ ಸುಭಾಸ್ ಬನ್ನಿಹಟ್ಟಿ ಅವರ ವಾರಸುದಾರ ಸುಭಾಸ ಬೆಟ್ಟಪ್ಪ ಬನ್ನಿಹಟ್ಟಿ ಅವರಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜುರಾಗಿರುವ 2 ಲಕ್ಷ ರೂಪಾಯಿಗಳ ಪರಿಹಾರ ಚೆಕ್ನ್ನು ಶಾಸಕ ಪ್ರಕಾಶ್ ಕೋಳಿವಾಡ ಇಲ್ಲಿನ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಹಸ್ತಾಂತರಿಸಿದರು.
ತಹಶೀಲ್ದಾರ ಹನುಮಂತಪ್ಪ ಶಿರಹಟ್ಟಿ ಮತ್ತು ತಾಪಂ ಇಓ ಎಸ್.ಪಿ. ಸುಮಲತಾ ಇದ್ದರು