69ನೇ ರಾಜ್ಯೋತ್ಸವ ಆಚರಿಸಿದ ಸಿಬ್ಬಂದಿ ವರ್ಗ..!!
ಕೆಂಪವಾಡ ಅಥಣಿ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡ ಕಲರವ..! 69ನೇ ರಾಜ್ಯೋತ್ಸವ ಆಚರಿಸಿದ ಸಿಬ್ಬಂದಿ ವರ್ಗ..!!
ಕಾಗವಾಡ 3 : ತಾಲೂಕಿನ ಕೆಂಪವಾಡ ಗ್ರಾಮದ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ದಿ. 01 ರಂದು 69 ನೇ ಕನ್ನಡ ರಾಜೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ನವ್ಹೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನಾಚರಣೆಯ ನಿಮಿತ್ಯ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ತಾಯಿ ಭುವನೇಶ್ವರ ದೇವಿಯ ಭಾವಚಿತ್ರದ ಪೂಜೆಯನ್ನು ಕಾರ್ಖಾನೆಯ ಸೆಕ್ಯೂರಿಟಿ ವಿಭಾಗದ ಅಧಿಕಾರಿ ನಾನಾಸಾಬ ಕಾಳೆಲಿ ಹಾಗೂ ಗೆಸ್ಟ್ ಹೌಸ್ ವಿಭಾಗದ ಉಸ್ತುವಾರಿ ರಮೇಶ್ ಗೋಡಸೆ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಕಾರ್ಖಾನೆಯ ಸೆಕ್ಯೂರಿಟಿ ಹಾಗೂ ಹಲವು ವಿಭಾಗಗಳ ಪ್ರಮುಖರು ಉಪಸ್ಥಿತರಿದ್ದರು.