ಸಿರುಗುಪ್ಪ

ಬ್ರಾಹ್ಮಣ್ಯ ನಾಶವಾದರೆ ಅದು ವಿಶ್ವಕ್ಜೆ ಮಾರಕ: ಮಂತ್ರಾಲಯಶ್ರೀ

ಬ್ರಾಹ್ಮಣ್ಯ ನಾಶವಾದರೆ ಅದು ವಿಶ್ವಕ್ಜೆ ಮಾರಕ: ಮಂತ್ರಾಲಯಶ್ರೀ

ಸಿರುಗುಪ್ಪ17: ಬ್ರಾಹ್ಮಣ್ಯ ನಾಶವಾದರೆ ಅದು ಕೇವಲ ನಮ್ಮ ಸಮಾಜಕ್ಕೆ ಒಂದೇ ಅಲ್ಲ, ಇಡೀ ರಾಜ್ಯ, ದೇಶ ಹಾಗೂ ವಿಶ್ವಕ್ಕೆ ಅದು ಮಾರಕವಾಗುತ್ತದೆ  ಎಂದು ಪ್ರಸ್ತುತ ಮಂತ್ರಾಲಯ ಕ್ಷೇತ್ರದ ಪೀಠಾಧಿಪತಿ ಶ್ರೀ ಸುಭುದೇಂದ್ರ ಶ್ರೀಗಳು ಹೇಳಿದರು.     

       ನಗರದ ಶನೈಶ್ಚರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಸಂಘದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಶ್ರೀಗಳು ಪುರ ಪ್ರವೇಶ ಮಾಡಿ ದೇವಸ್ಥಾನದ ಬಳಿ ಬರುತ್ತಿದ್ದಂತೆ ತ್ರಿಮತಸ್ಥ ವಿಪ್ರರು ಜೈಘೋಶಗಳನ್ನು ಹಾಕುತ್ತಾ ಪುಷ್ಪವೃಷ್ಠಿ ಸುರಿಸಿದರು. ಸುಹಾಸಿನಿ ಸುಮಂಗಲರು ಕಳಸ ಕನ್ನಡಿಗಳನ್ನು ಹಿಡಿದು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಭಜನಾ ಮಂಡಳಿಗಳವರು ಮತ್ತು ಕೋಲಾಟ ತಂಡದವರು ಶ್ರೀಗಳನ್ನು ದೇವಸ್ಥಾನದ ಪ್ರಾಂಗಣಕ್ಕೆ ಕರೆತಂದರು.ದೇವಸ್ಥಾನದಲ್ಲಿನ ಶ್ರೀನಿವಾಸ ಆಂಜನೇಯ ಶನೇಶ್ಚರ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮಗಳು ಪ್ರಾರಂಭಗೊಂಡವು.    

           ತಾಲೂಕು ಬ್ರಾಹ್ಮಣ ಸಂಘದ ಯುವ ಘಟಕದ ಅಧ್ಯಕ್ಷ ಪವನ್ ಕುಮಾರ್ ದೇಸಾಯಿ ವೇದಿಕೆಗೆ ಎಲ್ಲರನ್ನು ಸ್ವಾಗತಿಸಿದರು. ಹಾಸ್ಯ ಕಲಾವಿದ ಮತ್ತು ಶಿಕ್ಷಕ ಜೆ ನರಸಿಂಹಮೂತರ್ಿ ನಿರೂಪಣೆ, ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ದೀಪ ಶಾಮಾಚಾರ್ ಪ್ರಾರ್ಥನೆ, ಪ್ರಧಾನ ಕಾರ್ಯದಶರ್ಿ ಕುಲಕಣರ್ಿ ರಾಘವೇಂದ್ರ ಸ್ಥಾಪನೆಯ ಉದ್ದೇಶದ ವರದಿ ವಾಚನ ಮಾಡಿದರು.ಜ್ಯೋತಿ ಪ್ರಜ್ವಲನೆ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮಗಳು ಪ್ರಾರಂಭಗೊಂಡವು ನಂತರ ತಾಲೂಕು ಬ್ರಾಹ್ಮಣ ಸಂಘದ ನಾಮಫಲಕವನ್ನು ಶ್ರೀಗಳು ಮತ್ತು ವೇದಿಕೆಯ ಗಣ್ಯರೊಂದಿಗೆ ಉದ್ಘಾಟನೆಗೊಳಿಸಿದರು. 

ವೆ. ನಮ್ಮ ಸಮುದಾಯದವರು ಯಾವ ಪಕ್ಷಕ್ಕೆ ಮತ ಕೊಟ್ಟರೆ ಒಳ್ಳೆಯದು ಆಗುತ್ತದೆ ಎಂಬುದನ್ನು ಆಲೋಚಿಸಿ ಮತದಾನ ಮಾಡಬೇಕು ಇಂದು ಈ ನಗರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಎಲ್ಲಾ ಬ್ರಾಹ್ಮಣ ಸಮಾಜದವರಿಗೆ ಅಭಿನಂದನೆಗಳನ್ನು ಮತ್ತು ಆಶೀರ್ವಚನವನ್ನು ಶ್ರೀಗಳು ತಿಳಿಸಿದರುಸಭೆಯಲ್ಲಿ ಹಾಲಿ ಶಾಸಕ ಎಂಎಸ್ ಸೋಮಲಿಂಗಪ್ಪ ಮಾತನಾಡಿ ನಿಮ್ಮ ಸಮಾಜವು ನಮಗೆ ಯಾವಾಗಲೂ ನಮ್ಮ ಜೊತೆಗಿದೆ. ಇಂದು ನನಗೆ ಮನವಿ ಪತ್ರ ನೀಡಿ ಸ್ಮಶಾನಕ್ಕಾಗಿ ಸೂಕ್ತ ಸ್ಥಳ ಮತ್ತು ಏರ್ಪಾಡು ಮಾಡಿಕೊಡುವ ಬಗ್ಗೆ ಕೇಳಿರುತ್ತೀರಿ ಅವಶ್ಯವಾಗಿ ಮಾಡುತ್ತೇನೆ. ಅಲ್ಲದೆ ಶ್ರೀಗಳು ಕೆಂಚನಗುಡ್ಡದ ಶ್ರೀ ವಸುಧೇಂದ್ರ ತೀರ್ಥರ ಬೃಂದಾವನ ಸ್ಥಳದಲ್ಲಿ ನೂತನ ಮಂಟಪವನ್ನು ಸರ್ಕಾರದ ವತಿಯಿಂದ ಮಾಡಿಕೊಡುವಂತೆ ಆಜ್ಞಾಪಿಸಿದ್ದಾರೆ ಸಕರ್ಾರದ ಜೊತೆ ಮಾತನಾಡಿ ಸುಮಾರು ಒಂದು ಕೋಟಿ ರೂಪಾಯಿವರೆಗಿನ ಮಂಟಪ ಕಟ್ಟಿಸಿ ಕೊಡುತ್ತೇನೆ ಎಂಬ ಭರವಸೆ ಈ ಸಂದರ್ಭದಲ್ಲಿ ತಿಳಿಸಿದರು.ಆಹ್ವಾನದ ಮೇರೆಗೆ  ಆಗಮಿಸಿ ಉಪಸ್ಥಿತರಿದ್ದ ಕನರ್ಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ   ಮಾತನಾಡಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು ಸಮಾಜದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಮತ್ತು ರೂಪಿಸಲಾಗುತ್ತಿದೆ ಎಂದು ತಿಳಿಸಿದರು ಮಾಜಿ ಶಾಸಕ ಬಿ ಎಂ ನಾಗರಾಜ ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರುಶ್ರೀಗಳು ಪದಾಧಿಕಾರಿಗಳನ್ನು ಮತ್ತು ಅವರ ಜವಾಬ್ದಾರಿಗಳನ್ನು ಘೋಷಣೆ ಮಾಡಿದ ನಂತರ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಮೂತರ್ಿ ಜೋಯಿಸ್ ಮಾತನಾಡಿ ತಾಲೂಕಿನಲ್ಲಿ ಅತ್ಯಂತ ಬಲಿಷ್ಠವಾದ ಸಂಘಟನೆಯನ್ನು ಕಟ್ಟಲಾಗುವುದು ಎಲ್ಲಾ ಶ್ರೀಗಳ ಆಶೀರ್ವಾದ ಮತ್ತು ಎಲ್ಲಾ ತ್ರಿಮತಸ್ಥರ ಸಹಕಾರ ಅವಶ್ಯ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷಿಣಿ ಕೆ. ಸುಶೀಲಮ್ಮ ವೆಂಕಟರಮರೆಡ್ಡಿ,ಅಖಿಲ ಕನರ್ಾಟಕ ಮಹಾಸಭಾದ ಪ್ರಮೋದ್ ಮನೋಲಿ,ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಘವೇಂದ್ರ ಭಟ್,ಕಾರ್ಯಕಾರಿ ಸಮಿತಿಯ ಉಮೇಶ ಶಾಸ್ತ್ರಿ,ರಾಜ್ಯ ಸಂಘಟಿತ ಪುರೋಹಿತ ಕಾಮರ್ಿಕರ ಕ್ಷೇಮಾಭಿವೃದ್ಧಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎಂ.ಜಿ ಅನಂತಮೂರ್ತಿ , ಆಮ್ ಆದ್ಮಿ ಪಕ್ಷದ ಮುಖಂಡ ದರಪ್ಪ ನಾಯಕ, ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಪ್ರಕಾಶ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಗಾಯಕ  ಅನಂತ ಕುಲಕರ್ಣಿ  ರಾಯಚೂರಿನ ಹಾಸ್ಯ ಕಲಾವಿದ  ರಾಘವೇಂದ್ರಾಚಾರ್ ಇವರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಸುದ್ದಿ ಓದಿ