ಧಾರವಾಡ - ಹುಬ್ಬಳ್ಳಿ

'ಸಂಗೀತ, ಸಾಹಿತ್ಯ, ಕ್ರೀಡೆಗಳು ಮನುಷ್ಯನನ್ನು ಸದಾ ಉಲ್ಲಾಸಭರಿತವಾಗಿರಿಸುತ್ತವೆ,

'ಸಂಗೀತ, ಸಾಹಿತ್ಯ, ಕ್ರೀಡೆಗಳು ಮನುಷ್ಯನನ್ನು ಸದಾ ಉಲ್ಲಾಸಭರಿತವಾಗಿರಿಸುತ್ತವೆ,

'ಸಂಗೀತ, ಸಾಹಿತ್ಯ, ಕ್ರೀಡೆಗಳು ಮನುಷ್ಯನನ್ನು ಸದಾ ಉಲ್ಲಾಸಭರಿತವಾಗಿರಿಸುತ್ತವೆ.' 

ದಾರವಾಡ 10 :ಸಂಗೀತ, ಸಾಹಿತ್ಯ, ಲಲಿತಕಲೆ ಹಾಗೂ ಕ್ರೀಡೆಗಳು ಮನುಷ್ಯನನ್ನು ಸದಾ ಉಲ್ಲಾಸಭರಿತವಾಗಿರಿಸುತ್ತವೆ. ಸಂಗೀತ ಕಲಿಯುವದರಿಂದ ಆಲಿಸುವದರಿಂದ ಮನಸ್ಸು ಶಾಂತವಾಗಿರುತ್ತದೆ.  ಆಗ ಮಾತ್ರ ನಾವು ಹೆಚ್ಚೆಚ್ಚು ವಿಚಾರಶೀಲರಾಗಲು ಸಾಧ್ಯವಾಗುತ್ತದೆ ಎಂದು ಕವಿವಿ ಕುಲಪತಿ ಡಾ. ಬಿ.ಎಮ್‌. ಪಾಟೀಲರು ಹೇಳಿದರು.   

ದಿನಾಂಕ: 9.11.2024ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಭಾರತ ಸರಕಾರದ ಸಂಸ್ಕೃತಿ ಮಂತ್ರಾಲಯದ ಆಶ್ರಯದಲ್ಲಿ ಪಂ. ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ ಏರಿ​‍್ಡಸಿದ್ದ ರಾಷ್ಟ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿದ ಡಾ. ಬಿ.ಎಮ್‌. ಪಾಟೀಲರು ಮುಂದುವರೆದು ಮಾತನಾಡುತ್ತ ಸ್ವರ ಸಂಯೋಜನೆಯಲ್ಲಿ, ಹಾರ್ಮೊನಿಯಂ ಕ್ಷೇತ್ರದಲ್ಲಿ ಮತ್ತು ತಬಲಾ ಕ್ಷೇತ್ರದಲ್ಲಿ ಬಹುಸಂಖ್ಯೆಯ ಶಿಷ್ಯವರ್ಗವನ್ನು ನಾಡಿಗೆ ಸಮರ​‍್ಿಸಿದ ಶ್ರೇಷ್ಠ ಕಾರ್ಯಮಾಡಿದ ಇರ್ವರೂ ಮಹನೀಯರ ಸ್ಮರಣೆಯಲ್ಲಿ ರಾಷ್ಟ್ರೀಯ ಸಂಗೀತೋತ್ಸವ ಏರಿ​‍್ಡಸಿರುವ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಕಾರ್ಯ ಶ್ಲಾಘನೀಯ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಅವರು ಪಂ. ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಅವರ ಸಾಧನೆ, ವ್ಯಕ್ತಿತ್ವದ ಕುರಿತು ಮಾತನಾಡುತ್ತ ಇಂದಿನ ಯುವ ಕಲಾವಿದರು ಪಂ.ವಸಂತ ಕನಕಾಪೂರ ಮತ್ತು ಪಂ.ಬಸವರಾಜ ಬೆಂಡಿಗೇರಿ ತೋರಿದ ದಾರಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.  ಕವಿವಿ ಕಲಾನಿಕಾಯದ ಡೀನರಾದ ಡಾ. ಮೃತ್ಯುಂಜಯ ಅಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.    

ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಮ್ಮ ಸೊಸೈಟಿಯು ಮಹನೀಯರ ಸ್ಮರಣೆಯ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ ಸಂಗೀತ, ನೃತ್ಯ, ಸಾಹಿತ್ಯ, ಕ್ರೀಡೆ ಮತ್ತು ಪ್ರಕಾಶನ ಕಾರ್ಯವನ್ನು ಮಾಡುತ್ತ ಉದಯೋನ್ಮುಖರಿಗೆ ಅವಕಾಶ ನೀಡುವಲ್ಲಿ ನಿರತವಾಗಿದೆ ಎಂದರು.   

ಸಮಾರಂಭದಲ್ಲಿ ಮೋಹನ ಬೆಂಡಿಗೇರಿ, ಬನೂತಾಯಿ ಕನಕಾಪೂರ, ತಬಲಾ ಕಲಾವಿದ ಸುರೇಶ ನಿಡಗುಂದಿ ಹಾಗೂ ಹಾರ್ಮೊನಿಯಂ ಕಲಾವಿದ ಬಸವರಾಜ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.    

ಸಂಗೀತೋತ್ಸವದಲ್ಲಿ ಹುಬ್ಬಳ್ಳಿಯ ಖ್ಯಾತ ಗಾಯಕ ಡಾ.ಅಶೋಕ ಹುಗ್ಗಣ್ಣವರ ಧಾರವಾಡದ ಡಾ.ಮೃತ್ಯುಂಜಯ ಅಗಡಿ ಮೈಸೂರಿನ ಡಾ.ಶ್ವೇತಾ ಮಡಪ್ಪಾಡಿ, ಧಾರವಾಡದ ವಿದುಷಿ ಭಾರ್ಗವಿ ಕುಲಕರ್ಣಿ ಗಾಯನ ಪ್ರಸ್ತುತ ಪಡಿಸಿದರು.  ಯಾದಗಿರಿಯ ಡಾ.ಗುರುಬಸವ ಮಹಾಮನೆ ಹಾಗೂ ಗದಗದ ಸುರೇಶ ಮಂಗಳೂರು ವಯೋಲಿನ ವಾದನ ಪ್ರಸ್ತುತ ಪಡಿಸಿದರು. ಹುಬ್ಬಳ್ಳಿಯ ನಿಖಿಲ್ ಜೋಶಿ ಅವರು ಸಿತಾರ ವಾದನ, ಶ್ರೀಧರ ಭಜಂತ್ರಿ ಅವರ ಶಹನಾಯಿ ವಾದನ ಜರುಗಿತು. ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಸಹಕಲಾವಿದರಾಗಿ ಪಂ.ಅಲ್ಲಮಪ್ರಭು ಕಡಕೋಳ, ವಾದಿರಾಜ ದಂಡಾಪೂರ, ಶ್ರೀಧರ ಮಾಂಡ್ರೆ, ಡಾ.ಗೋಪಿಕೃಷ್ಣ ಕೆ.ಜಿ., ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ಮಳೆಮಲ್ಲೇಶ ಹೂಗಾರ ಸಾಥ್ ಸಂಗತ ನೀಡಿದರು.    

ಡಾ.ಶಶಿಧರ ನರೇಂದ್ರ ರಚನೆ ಹಾಗೂ ನಿರ್ದೇಶನದ ವಸಂತ ರಾಗ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.   

ರವಿ ಕುಲಕರ್ಣಿ ನಿರೂಪಿಸಿದರು. ಸೌಂದರ್ಯ ಪ್ರಾರ್ಥಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.   ವಿದುಷಿ ಸುಜಾತಾ ಗುರವ ವಂದಿಸಿದರು.   

ಗಣ್ಯರಾದ ರಾಘವೇಂದ್ರ ಆಯಿ, ಡಾ.ಡಿ.ಎಂ.ಹಿರೇಮಠ, ಡಾ.ಕೃಷ್ಣ ಕಟ್ಟಿ, ಡಾ.ಶಾಂತಾರಾಮ ಹೆಗಡೆ, ಎಂ.ಜಿ. ಸಿಂದಗಿ, ಎಮ್‌.ಜಿ.ತಿಮ್ಮಾಪೂರ, ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಶ್ರೀನಿವಾಸಜಿ, ಬಸವರಾಜ ಜಡಿ, ಡಾ.ಕೃಷ್ಣಮೂರ್ತಿ ಭಟ್ಟ, ಡಾ.ನಾರಾಯಣ ಹಿರೇಕೊಳಚಿ, ಡಾ.ಶಕ್ತಿ ಪಾಟೀಲ, ಡಾ.ದೂದಿಹಳ್ಳಿ, ವೀರಣ್ಣ ಪತ್ತಾರ, ಲತಾ ಶಿವಾನಂದ, ರಮಾ ಗುಡಿ, ಡಾ. ಎ.ಎಲ್‌.ದೇಸಾಯಿ, ಪ್ರಸಾದ ಮಡಿವಾಳರ, ರವೀಂದ್ರ ಪಾಟೀಲ, ಡಾ.ನಾಗಲಿಂಗ ಮುರಗಿ, ಡಾ.ಬಸವರಾಜ ಕಲೆಗಾರ, ಡಾ.ಶಿವರಾಜ ಈರಾಪೂರ,  ಬಸವರಾಜ ಹೂಗಾರ, ಸುರೇಖಾ ಸುರೇಶ,  ಶಕುಂತಲಾ ಹಾದಿಮನಿ, ವಿದುಷಿ ಸವಿತಾ ಹೆಗಡೆ, ಅನಿತಾ ಚಿಕ್ಕಮಠ, ಡಾ.ಪದ್ಮಾವತಿ, ಸುಜಾತಾ ದೇಸಾಯಿ ಮತ್ತಿತರರು ಇದ್ದರು. 


ಸುದ್ದಿ ಓದಿ