#MeToo ಅಭಿಯಾನ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಪ್ರತಿಫಲನವಾಗಿದೆ: ಸಚಿವ ಪ್ರಕಾಶ್ ಜಾವಡೇಕರ್
ನವದೆಹಲಿ 15:ಲೈಂಗಿಕ ಕಿರುಕುಳಗಳ ವಿರುದ್ಧ ಆರಂಭವಾಗಿರುವ #MeToo ಅಭಿಯಾನ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಪ್ರತಿಫಲನವಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.
ಹೇಗೆ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರಭುಪಾದ ಸ್ವಾಮಿ ಯಾವಾಗಲೂ ಹೇಳುತ್ತಿರುತ್ತಾರೆ. ಒಂದು ವೇಳೆ ಗುಣಗಳನ್ನು ಕಳೆದುಕೊಂಡರೆ, ನಿಜವಾಗಿಯೂ ನಷ್ಟ ಅನುಭವಿಸಿದಂತೆ ಎಂದು ಜಾವಡೇಕರ್ ತಿಳಿಸಿದ್ದಾರೆ.
2008 ರಲ್ಲಿ ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ದ ನಟಿ ತನುಶ್ರಿ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಚಿತ್ರೋಧ್ಯಮ, ಮಾಧ್ಯಮ, ಕಾರ್ಪೋರೇಟ್ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ತಮ್ಮ ಮೇಲಿನ ಲೈಂಗಿಕ ಕಿರುಕುಳ ವಿಚಾರವನ್ನು #MeToo ಅಭಿಯಾನದಲ್ಲಿ ಹಂಚಿಕೊಳ್ಳುತ್ತಿದ್ದು, ಈ ಅಭಿಯಾನ ದೇಶಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆ.