ಧಾರವಾಡ - ಹುಬ್ಬಳ್ಳಿ

ಸಹಕಾರ ಉದ್ಯಮಗಳಲ್ಲಿ ಪರಿವರ್ತನೆ” ದಿನದ ಆಚರಣೆ

ಸಹಕಾರ ಉದ್ಯಮಗಳಲ್ಲಿ ಪರಿವರ್ತನೆ” ದಿನದ ಆಚರಣೆ

ಸಹಕಾರ ಉದ್ಯಮಗಳಲ್ಲಿ ಪರಿವರ್ತನೆ” ದಿನದ ಆಚರಣೆ  

ಧಾರವಾಡ 21 : ಅರವಟಗಿ, ಡೋರಿ-17, 71ನೇ ಅಖಿಲ ಭರತ ಸಹಕಾರ ಸಪ್ತಾಹದ ಅಂಗವಾಗಿ “ಸಹಕಾರ ಉದ್ಯಮಗಳಲ್ಲಿ ಪರಿವರ್ತನೆ” ದಿನದ ಆಚರಣೆಯನ್ನು ಅರವಟಗಿ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಡೋರಿ ಇದರ ಮಾಜಿ ಅಧ್ಯಕ್ಷರಾದ ಶಶಿಧರ ಇನಾಮದಾರ ಅವರು ಉದ್ಘಾಟಿಸಿದರು. ಸಹಕಾರ ಸಪ್ತಾದ ವಿಷಯವಾಗಿ ಯೂನಿಯನ್‌ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸವಿತಾ ಕುರ್ಲಗೇರಿ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷರಾದ ಶಂಕರ​‍್ಪ ಎನ್‌. ರಾಯನಾಳ ಅವರು ಮಾತನಾಡುತ್ತ, ಭಾರತದಲ್ಲಿ ಸಹಕಾರ ಚಳುವಳಿಯ ಆರಂಭಕ್ಕೆ ಮೂಲ ಕಾರಣ ಆಥಿಕವಾಗಿ ಸಂಕಷ್ಟದಲ್ಲಿದ್ದ ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕವಾಗಿ ನೆರವಾಗಲು ಅಖಂಡ ಧಾರವಾಡ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಆರಂಭವಾಗುವ ಮೂಲಕ ಸಹಕಾರ ಚಳುವಳಿ ಪ್ರಾರಂಭಗೊಂಡಿತು. ನಂತರದ ದಿನಗಳಲ್ಲಿ ಈ ಕ್ಷೇತ್ರವು ವ್ಯಾಪಕವಾಗಿ ವಿಸ್ತರಣೆ ಹೊಂದುವ ಮೂಲಕ ಎಲ್ಲಾ ಆಯಾಮಗಳಲ್ಲಿಯೂ ಆವರಿಸಿಕೊಂಡಿದೆ ಎಂದ ತಿಳಿಸಿದರು. 

ಮತ್ತೋರ್ವ ಮುಖ್ಯ ಅತಿಥಿಗಳಾದ ಪಿಕಾರ್ಡ ಬ್ಯಾಂಕಿನ ನಿರ್ದೇಶಕರಾದ ಭರತೇಶ ಪಾಟೀಲ ಅವರು ರೈತರ ಕ್ಷೇತ್ರವಾಗಿ ಗುರುತಿಸಿಕೊಂಡ ವಲಯ ಇಂದು ಭಾರತದಾಧ್ಯಂತ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳು ಸ್ಥಾಪನೆಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ವಿಶ್ವದ ಸಹಕಾರ ವಲಯದಲ್ಲಿ ಮಹತ್ತರವಾಗಿ ಗುರುತಿಸಿಕೊಂಡಿದೆ. ರಾಷ್ಟ್ರದ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿವೆ ಎಂದು ಹೇಳಿದರು. 

ಇನ್ನೋರ್ವ ಮುಖ್ಯ ಅತಿಥಿಗಳಾದ ಕೆ.ಸಿ.ಸಿ. ಬ್ಯಾಂಕಿನ ಮಜಿ ನಿರ್ದೇಶಕರಾದ ಉಮೇಶ ಬೂಮಣ್ಣವರ ಅವರು ಸಹಕಾರ ಸಂಸ್ಥೆಗಳು ಇಂದು ಸಾರ್ವಜನಿಕ ಹಾಗೂ ಕಾಸಗಿ ಸಂಸ್ಥೆಗಳು ಒದಗಿಸುತ್ತಿರುವ ಎಲ್ಲಾ ಸೇವೆಗಳನ್ನು ಒದಗಿಸುವ ಮಟ್ಟಕ್ಕೆ ಬೆಳದಿರುವುದು ಸ್ವಾಗತಾರ್ಹವಾದ ವಿಚಾರವಾಗಿದೆ. ಇದರ ಜತೆಗೆ ಅವುಗಳು ವೃತ್ತಿಪರ ಹಾಗೂ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ಉತ್ತಮ ಆಡಳಿತ ವಿಧಾನಕ್ಕೆ ಒತ್ತು ನೀಡುತ್ತಿವೆ. ಈಗಾಗಲೇ ಹಲವಾರು ಸಹಕಾರ ಬ್ಯಾಂಕುಗಳು ರಾಷ್ಟ್ರಿಕೃತ ಬ್ಯಾಂಕುಗಳು ಒದಗಿಸುವ ಸೇವೆಯನ್ನು ನೀಡುವಲ್ಲಿ ಯಶಸ್ವಿಯಾಗಿವೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಶಿ ಅರವಟಗಿ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಡೋರಿ ಇದರ ಅಧ್ಯಕ್ಷರಾದ ಶ್ರೀ ಶಿವಾನಂದ ಬ. ಹಿರೇಮಠ ಅವರು ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಸಹಕಾರ ಸಚಿವಾಲಯ ಪ್ಯಾಕ್ಸಗಳನ್ನು ಬಹುಮುಖ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಯೋಜನೆಯು ಒಂದಾಗಿದೆ. ಪ್ರಧಾನ ಮಂತ್ರಿ ಕಿಸಾನ ಸಮೃದ್ಧಿ ಕೇಂದ್ರ ಜನೌಷಧಿ ಕೇಂದ್ರ ಪಿ.ಎಮ್‌- ಕುಸಮ್ ಯೋಜನೆ, ಆಹಾರ ಧಾನ್ಯಗಳ ಸಂಗ್ರಹ ಕೇಂದ್ರ, ನೂತನ ರಾಷ್ಟ್ರೀಯ ಸಹಕಾರ ನೀತಿ ಸೇರಿದಂತೆ ಪ್ರಮುಖ ಉಪಕ್ರಮಗಳು ಸಹಕಾರಿ ಉದ್ಯಮದಲ್ಲು ಪರಿಣಾಮಕಾರಿ ಪರಿವರ್ತನೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಿವೆ ಎಂದರು. ಕೆಐಸಿಎಂ ಉಪನ್ಯಾಸಕರಾದ ಗೀತಾ ಕೋಣನ್ನವರ ಉಪನ್ಯಾಸ ನೀಡಿದರು.  

ಸದರ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಅಶೋಕ ಜೋಡಟ್ಟಿಯವರ ಸ್ವಾಗತಿಸಿ, ಕಾರ್ಯಕ್ರಮ ನಿರುಪಿಸಿದರು. ಕೊನೇಯಲ್ಲಿ ಸವಿತಾ ಕುರ್ಲಗೇರಿ ಹಿರೇಮಠ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಅಲ್ಲಾಭಕ್ಷ ಹ. ಕುಂದುಬೈನವರ, ಗುರುನಾಥ ಕುಲಕರ್ಣಿ, ಮಲ್ಲಪ್ಪ ಗಾಣಿಗೇರ, ಸೋಮಶೇಖರ ಕಾಳೆ, ರಾಯಪ್ಪ ಹುಡೇದ, ಅಡವಯ್ಯ ಹಿರೇಮಠ, ಪರಶುರಾಮ ಶಿಂಧೆ, ಶಬ್ಬೀರಹ್ಮದ ಮುಲ್ಲಾ, ಮಹ್ಮದಸಾಬ ತಡಕೋಡ, ಹಜರತ್‌ಸಾಬ ಪಾಟೀಲ, ಶಿವನಪ್ಪ ಹರಿಜನ, ವಿಶ್ವಾಂಭರ ಬಣಸಿ, ಕಲ್ಮೇಶ ಬಡಿಗೇರ, ಲಾಲಸಾಬ ಕಾಶೇನಕುಂಟ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿ., ಧಾರವಾಡ, ಧಾರವಾಡ ಹಾಗೂ ಅಳ್ನಾವರ ತಾಲೂಕಿನ ಎಲ್ಲ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರಿ​‍್ಡಸಲಾಗಿತ್ತು. 


ಸುದ್ದಿ ಓದಿ