“ಮಜವೋ ಮಜಾ ಬೇಸಿಗೆ ರಜಾ” ಚಿಣ್ಣರ ಬೇಸಿಗೆ ಶಿಬಿರ
ಹೊಸಪೇಟೆ 13: ತಾಲೂಕಿನ ಕೃತಿ ಆಕೃತಿ ಕಲಾ ಟ್ರಸ್ಟ್ ಕಾರಿಗನೂರು ಕಳೆದ ಐದು ವರ್ಷಗಳಿಂದ ರಾಜ್ಯದ ತುಂಬಾ ಮಕ್ಕಳ ರಂಗಭೂಮಿಯ ಬಗ್ಗೆ ಕೆಲಸ ಮಾಡುತ್ತಿದ್ದು, ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ “ಮಜವೋ ಮಜಾ ಬೇಸಿಗೆ ರಜಾ” ಚಿಣ್ಣರ ಬೇಸಿಗೆ ಶಿಬಿರವನ್ನು ದಿನಾಂಕ 11 ರಿಂದ 25 ರವರೆಗೆ 15 ದಿನಗಳ ಕಾಲ ಹಮ್ಮಿಕೊಂಡಿದ್ದು, ಶಿಬಿರದಲ್ಲಿ ಮಕ್ಕಳಿಗೆ ಹಾಡು, ನೃತ್ಯ, ರಂಗಾಟಗಳು, ಪೇಪರ್ ಕ್ರಾಪ್ಟ್, ಚಿತ್ರಕಲೆ, ನಾಟಕ ತರಬೇತಿಯನ್ನು ನೀಡಲಾಗುವುದು. ಈ ಮೂಲಕ ಮಕ್ಕಳನ್ನು ಸೃಜನ ಶೀಲರನ್ನಾಗಿಸುವ ಉದ್ದೇಶವನ್ನು ಹೊಂದಿದ್ದು. ರಾಜ್ಯದ ವಿವಿಧ ಗಣ್ಯರನ್ನು ಶಿಬಿರಕ್ಕೆ ಆಹ್ವಾನಿಸಿ ಮಕ್ಕಳೊಂದಿಗೆ ಸಂವಾದ ಮಾಡಲಾಗುವುದು. ಸಮಯ ಬೆಳಗ್ಗೆ 10 ರಿಂದ ಸಂಜೆ 4 ವರೆಗೆ ಸ.ಹಿ.ಪ್ರಾ.ಶಾಲೆ ಆವರಣ, ಕಾರಿಗನೂರಿನಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ನಿರ್ದೇಶಕರು ಸೋಮಶೇಖರ ಕಾರಿಗನೂರು, ಶಿಬಿರದ ಸಂಚಾಲಕರು ಭರತ ಕುಮಾರ.ಸಿ.ಆರ್. ವಿಶೇಷವಾಗಿ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಈ ಶಿಬಿರವು ಮೀಸಲಿದ್ದು. ಈ ಕಾರ್ಯಕ್ರಮವನ್ನು ತೊಗಲುಗೊಂಬೆಯಾಟದ ಹಿರಿಯ ಕಲಾವಿದರಾದ ನಾರಾಯಣಪ್ಪನವರು ಚಾಲನೆ ಮಾಡಿ ಮಕ್ಕಳಿಗೆ ಬದುಕಿನ ಬಗ್ಗೆ ತಿಳಿಸಿದರು.