ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವ ಸತೀಶ: ದೇಮಶೆಟ್ಟಿ
ಲೋಕದರ್ಶನ ವರದಿ
ಗೋಕಾಕ: ಬುದ್ಧ ಬಸವ ಅಂಬೇಡ್ಕರ್ ಹೆಸರಲ್ಲಿ ರಾಜಕೀಯ ನಡೆಸುತ್ತಿರುವ ಕೆಲ ದುಷ್ಟಶಕ್ತಿಗಳು ಈ ಹಿಂದೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿ ನಿಮರ್ಿಸುವ ಸಂದರ್ಭದಲ್ಲಿ ವಿರೋಧಿಸಿದ್ದ ಶಾಸಕ ಸತೀಶ ಜಾರಕಿಹೊಳಿ ಸದ್ಯ ಬುದ್ಧ ಬಸವ ಅಂಬೇಡ್ಕರ್ ಅನೂಯಾಯಿ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಬಿಜೆಪಿ ನಗರಾಧ್ಯಕ್ಷ ಎಸ್ ವಿ ದೇಮಶೆಟ್ಟಿ ಹೇಳಿದರು.
ಅವರು, ಸೋಮವಾರದಂದು ನಗರದ ಬಿಜೆಪಿ ಕಾಯರ್ಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವಿಲ್ಲದ ಹಾಗೂ ಅಭಿವೃದ್ಧಿ ಹೊಂದಿದ ಕ್ಷೇತ್ರ ಯಮಕನಮರಡಿ ಏನು.? ಹಾಗಿದ್ದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರು ಅತ್ಯಲ್ಪಮತಗಳಿಂದ ಜಯಸಾಧಿಸಿದ್ದೆಕೆ.? ದಬ್ಬಾಳಿಕೆ ದಬ್ಬಾಳಿಕೆ ಎನ್ನುವ ಶಾಸಕ ಸತೀಶ ಹಾಗೂ ಪರಾಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ ಮತದಾನದ ದಿನ ಕ್ಷೇತ್ರದಲ್ಲಿ ತಿರುಗಾಡಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದು ದಬ್ಬಾಳಿಕೆ ಅಲ್ಲವೇ ಎಂದು ಗುಡುಗಿದರು,
ಲಖನ್ ಜಾರಕಿಹೊಳಿ ಈ ಮೊದಲು ಶಾಸಕ ರಮೇಶ ಜಾರಕಿಹೊಳಿ ಬೆನ್ನಿಗೆ ನಿಂತಿದ್ದರು. ನಂತರದಲ್ಲಿ ಅಧಿಕಾರದ ಆಸೆಗೆ ಸತೀಶ ಜಾರಕಿಹೊಳಿ ಅವರೊಂದಿಗೆ ತೆರಳಿದರು. ಅಧಿಕಾರದ ಆಸೆಗೆ ಯಾರು ವೈಟ್ ಶರ್ಟ ಬ್ಲಾಕ್ ಮಾಡುತ್ತಾರೆಂಬುದು ಕ್ಷೇತ್ರದ ಜನತೆಗೆ ತಿಳಿದಿದೆ. ಕುಂಬಳಕಾಯಿ ಕಳ್ಳ ಎಂದರೆ ಬೆನ್ನು ನೋಡಿಕೊಳ್ಳುವ ಭ್ರಷ್ಟರ ಭ್ರಷ್ಟಾಚಾರ ಇನ್ನೂ ಮುಂದೆ ಹೊರಬಿಳಲಿದೆ ಎಂದರು.
ಕಳೆದ ಉಪ ಚುನಾವಣೆಯಲ್ಲಿ ಅಂತೂ ಕೆಟ್ಟ ಪದಗಳಿಂದ ಟೀಕೆ ಮಾಡುವ ಮೂಲಕ ಮತದಾರರಲ್ಲಿ ತಪ್ಪು ಸಂದೇಶ ತುಂಬಿ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಲು ಬಹಳಷ್ಟು ಪ್ರಯತ್ನ ನಡೆಸಲಾಯಿತು.
ಆದರೆ ವಿರೋಧಿಗಳ ಆ ನೀತಿ ಸಫಲತೆ ನೀಡಿಲ್ಲ. ಬದಲಾಗಿ ಗೋಕಾಕ್ ತಾಲೂಕಿನ ಪ್ರಬುದ್ಧ ಮತದಾರರು ಸುಮಾರು 29.006 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ರಮೇಶ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆಂದರು.
ಉಪಚುನಾವಣಾ ಸೋಲಿನ ಹತಾಶೆಯ ಮನೊಭಾನೆಯಿಂದ ಮತ್ತೆ ನಮ್ಮ ನಾಯಕರಾದ ರಮೇಶ ಜಾರಕಿಹೊಳಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರ ಜನರ ದೃಷ್ಟಿ ಬೇರೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರ ಎತ್ತಿದ್ದಾಗ ನಾವು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ವಿಚಾರದ ಬಗ್ಗೆ ಜನರ ಬಳಿ ದಾಖಲೆ ಸಮೇತ ಇಟ್ಟಾಗ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದರು. ಈಗ ಚುನಾವಣೆ ಅಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ.
ಚುನಾವಣೆ ಗೆಲ್ಲಲು ಯಾರು ಎಷ್ಟು ಹಣ ಹಂಚಿದರು.? ಎಂಬುದು ಮರಡಿಮಠದಲ್ಲಿ ಸಾಕ್ಷಿ ಸಮೇತ 15ಲಕ್ಷ ರೂ ಹಣವನ್ನು ಚುನಾವಣಾ ಇಲಾಖೆ ವಶಪಡಿಸಿಕೊಂಡಿದೆ. ಪರಾಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ ಸೋಲಿನ ಹತಾಶೆಯಿಂದ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ತಮ್ಮ ಹೀನಾಯ ಸೋಲನ್ನು ಒಪ್ಪಿಕೊಳ್ಳದ ಪರಾಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ ಅವರು ಇನ್ನೊಬ್ಬರ ಗೆಲುವಿನ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಗೋಕಾಕ್ ಕ್ಷೇತ್ರದ ಜನರ ಆಶೀವರ್ಾದ ಇದ್ದರೆ ನೀರಾವರಿ ಮಂತ್ರಿ ಆಗ್ತಾರೆ ಅದರಂತೆ ಡಿಸಿಎಂ ಸಹ ಆಗಬಹುದು. ಅದನ್ನ ಬಿಜೆಪಿ ಹೈಕಮಾಂಡ ನಿರ್ಧರಿಸುತ್ತೆ.
ಸೌಜನ್ಯಕ್ಕಾಗಿ ಆಸ್ಪತ್ರೆಯಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಾಜಕೀಯ ವೈರತ್ವ ಮರೆತು ಭೇಟಿ ಮಾಡಿದ್ದಾರೆ. ಈ ಮೂಲಕ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ. ಇದನ್ನೆ ಬ್ಲ್ಯಾಕ ಮೇಲ್ ಎಂದು ಬಿಂಬಿಸುವ ಪರಾಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ರಾಜಕೀಯ ದ್ವೇಷ ಅಸೋಯೆ ಮಾತ್ರ ತಲೆಯಲ್ಲಿದೆ ಎಂಬುದು ಸಾಬೀತಾದಂತಾಗಿದೆ ಎಂದರು.
ಕಳೆದ ಬಾರಿಯೂ ಬಿಜೆಪಿ ಅಭ್ಯಥರ್ಿ ಪರ ಯಡಿಯೂರಪ್ಪ ಪ್ರಚಾರ ನಡೆಸಿದ್ದರು. ಹಾಗೇ ಈ ಬಾರಿಯೂ ನಡೆಸಿದರು. ಕಾಂಗ್ರೇಸ್ ಅಭ್ಯಥರ್ಿ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ತಂದು ಪ್ರಚಾರ ನಡೆಸಿದರು. ಆದರೆ ಅವರೇಕೆ ಗೆಲ್ಲಲಿಲ್ಲ?. ಯಡಿಯೂರಪ್ಪ ನಮ್ಮ ನಾಯಕರು. ರಮೇಶ ಜಾರಕಿಹೊಳಿ ಗೆಲುವಿನಲ್ಲಿ ಯಡಿಯೂರಪ್ಪನವರ ಪಾತ್ರ ಪ್ರಮುಖವಾಗಿದೆ ಎಂಬುದು ನಮ್ಮ ನಾಯಕರು ಬಹಿರಂಗವಾಗಿ ಹೇಳಿದ್ದಾರೆ.
58ಸಾವಿರ ಮತಗಳು ಇವೆ ಎಂದು ಹೇಳುವ ಇವರಿಗೆ ಮುಂದಿನ ಚುನಾವಣೆಯಲ್ಲಿ 18 ಸಾವಿರ ಮತಗಳು ಬರುವದು ಕಷ್ಟ. ಪರಾಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿಯನ್ನು ಉದ್ಯೋಗ ಪತಿ ಎಂದು ಬಿಂಬಿಸುವ ಸತೀಶ ಅವರು ಲಖನ್ ಯಾವ ಉದ್ಯೋಗ ಸ್ಥಾಪಿಸಿ ಎಷ್ಟು ಜನರಿಗೆ ಉದ್ಯೋಗ ಕೋಡಿಸಿದ್ದಾರೆ. ಒಂದೆ ಒಂದು ಪಾನ್ ಶಾಫ್ ಸಹ ಹೊಂದಿರದ ಲಖನ್ ಹೇಗೆ ಉದ್ಯಮಿ ಎಂದು ದೇಮಶೆಟ್ಟಿ ಪ್ರಶ್ನಿಸಿದರು.
ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೆ ಹೋಗುವ ಅವಶ್ಯಕತೆ ಇಲ್ಲ. ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವ ಅವಶ್ಯಕತೆ ಇಲ್ಲ. ಯಾರಿಗೂ ಮೋಸ ಮಾಡುವ ಅಗತ್ಯ ಇಲ್ಲ. ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶವಿದ್ದರೆ ರಮೇಶ ಜಾರಕಿಹೊಳಿ ಕಾಂಗ್ರೆಸ್ನಲ್ಲಿಯೇ ಉಳಿಯಬಹುದಾಗಿತ್ತು. ಸ್ವಭಿಮಾನಕ್ಕೆ ಪೆಟ್ಟು ಬಿದ್ದಾಗ ಅವರು ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮೀಶ್ರ ಸಕರ್ಾರದಲ್ಲಿ ಮಂತ್ರಿ ಸ್ಥಾನವನ್ನ ತ್ಯಜಿಸಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹಿಂದೆ ಸತೀಶ ಜಾರಕಿಹೊಳಿ ಏಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು? ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸತೀಶ ಜಾರಕಿಹೊಳಿ ಅವರು ನಮ್ಮ ನಾಯಕರಾದ ರಮೇಶ ಜಾರಕಿಹೊಳಿ ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಡಬೇಕು.
ಈ ರೀತಿ ಅಪಪ್ರಚಾರವನ್ನು ಗೋಕಾಕ್ ಮತಕ್ಷೇತ್ರದ ಜನ ಎಂದಿಗೂ ಸಹಿಸುವುದಿಲ್ಲ. ರಮೇಶ ಜಾರಕಿಹೊಳಿ ಬಗ್ಗೆ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಿದರೂ ಕ್ಷೇತ್ರದ ಜನ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು.
ಭೀಮಗೌಡ ಪೋಲಿಸಗೌಡರ, ಹನಮಂತ ದುರ್ಗನ್ನವರ, ಸುರೇಶ ಸನದಿ, ಶಕೀಲ ಧಾರವಾಡಕರ, ಚಿದಾನಂದ ದೇಮಶೆಟ್ಟಿ, ಲಕ್ಕಪ್ಪ ತಹಶೀಲದಾರ, ತವನಪ್ಪ ಬೆನ್ನಾಡಿ, ಸಂತೋಷ ಹುಂಡೇಕರ, ರಾಜು ಮರಲಿಂಗನವರ ಸೇರಿದಂತೆ ಇತರರು ಇದ್ದರು.