'ವಿಶ್ವ ವಿಶ್ವ ಪ್ರವಾಸೋದ್ಯಮ ದಿನ ಉತ್ಸವ ರಾಕ್ಗಾರ್ಡನ್: ಕುಟುಂಬಶಿಲ್ಪ ಕಲಾ ಉದ್ಯಾನವನಕ್ಕೆ ಚಾಲನೆ
ಸುಧಾಕರ ದೈವಜ್ಞ
ಶಿಗ್ಗಾವಿ 26: ಕರ್ನಾಟಕದ ಕಲೆ,ಸಂಸ್ಕೃತಿ ಹಾಗೂ ಗ್ರಾಮೀಣ ಸಾಮ್ರಾಜ್ಯ ವೈಭವವನ್ನು ಶಿಲ್ಪಗಳ ಮೂಲಕ ನಾಡಿನಜನತೆಗೆ ಪರಿಚಯಿಸುವಲ್ಲಿ ಉತ್ಸವ ರಾಕ್ಗಾರ್ಡನ್ ವಿನೂತನ ಪಾತ್ರ ನಿರ್ವಹಿಸುತ್ತಿದೆ. ಹೀಗಾಗಿ ಕರ್ನಾಟಕದ ಉಳಿದ ಪ್ರವಾಸಿ ತಾಣಗಳಿಗಿಂತ ಇದು ವಿಭಿನ್ನ ಎನಿಸಿದೆ.
ಇಲ್ಲಿ ನಮ್ಮದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಪ್ರಮುಖರೆನಿಸಿದ ದಿ.ಮಹಾತ್ಮಾ ಗಾಂಧೀಜಿಯವರ ಆದರ್ಶಗಳು ಶಿಲ್ಪಗಳ ರೂಪದಲ್ಲಿ ಅನಾವರಣಗೊಂಡಿರುವುದು, ನೋಡುಗರಿಗೆ ಅಚ್ಚರಿಯುಂಟು ಮಾಡುವುದರೆ ಜತೆಗೆ, ಕಲಾವಿದರಿಗೆ ನಮೋ ಎನ್ನುವಂತೆ ಮಾಡಿದೆ.
ಈ ಪ್ರವಾಸಿ ಕೇಂದ್ರ ಲೋಕಾರ್ಪಣೆಗೊಂಡು 12 ವರ್ಷಗಳಾದರೂ ಪ್ರವಾಸಿಗರು ನಿರಂತರ ಭೇಟಿಕೊಟ್ಟು ಮತ್ತಷ್ಟು ಹೊಸ ಸಂದೇಶ ನೀಡುವ ಸಲಹೆ ನೀಡಿ ಪ್ರೆರೇಪಿಸುತ್ತಿದ್ದಾರೆ. ಇದು ಸಂಸ್ಥೆಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಗಾರ್ಡನ್ನಲ್ಲಿ ಏನಿದೆ?: ಇಲ್ಲೀಗ ದಿ.ರಾಜ್ಕುಮಾರ್ ವೃತ್ತ, ಅವರ ಯೋಗಾಸನದ ವಿವಿಧ ಭಂಗಿಯ ಶಿಲ್ಪಗಳು, ಅದ್ಭುತ ಆಲದ ಮರ,ಆಧುನಿಕ ಕಲಾ ಗ್ಯಾಲರಿ, ಮದುವೆ ಪ್ರದರ್ಶನಾಲಯ, ಶಿಲ್ಪಕಲಾ ಕಾರಂಜಿ,ಕಾಡು ಪ್ರಾಣಿ, ಸಾಕು ಪ್ರಾಣಿಗಳ ಶಿಲ್ಪಗಳು, ಸಾಂಪ್ರದಾಯಿಕ ಬೇಸಾಯದ ಶಿಲ್ಪಗಳು, ಮಾದರಿಡೈರಿ (ಎಮ್ಮೆ, ಆಕಳುಗಳು ವಿವಿಧ ತಳಿಯ ಶಿಲ್ಪಕಲಾಕೃತಿಗಳು), ಜನಪದರ ಸಂತೆಗಳ, ಜನಪದರ ಸಾರಿಗೆ ವ್ಯವಸ್ಥೆ, ಗ್ರಾಮೀಣ ಆಟಗಳು, ಗ್ಲಾಸ್ ಗಾರ್ಡನ್, ವಿಶಿಷ್ಟ ವಾಸ್ತು ಶಿಲ್ಪ ಶೈಲಿಯ ಹೊಟೇಲ್, ಜನಪದರ ರಂಗಮಂದಿರ ಇವೆ.
ವಿನೂತನಕೊಡುಗೆಗೆ ಸಜ್ಜು
ಈ ಬಾರಿಯ 'ಪ್ರವಾಸೋದ್ಯಮದ ಪುನರಾವಲೋಕನ' ಸಂದೇಶಕ್ಕೆ ತಕ್ಕಂತೆ, ಸಂಸ್ಥೆಯು ದೇಶಿಯ ಮೂಲ ಇಟ್ಟುಕೊಂಡು ಹೊಸ ವಿಷಯಗಳನ್ನು ಪ್ರವಾಸಿಗರಿಗೆ ಊಣ ಬಡಿಸಲು ಕಾರ್ಯಯೋಜನೆ ರೂಪಿಸಿದೆ.
ಆರೋಗ್ಯಕರ ಕುಟುಂಬ ವ್ಯವಸ್ಥೆ
ನೆರೆ ಹೊರೆಯ ರಾಜ್ಯಗಳು,ದೇಶಗಳ ಆರೋಗ್ಯಕರ ಕುಟುಂಬ ವ್ಯವಸ್ಥೆ ಬಿಂಬಿಸುವುದರ ಜತೆಗೆ ಸಕಲ ಜೀವಿಗಳ ಪರಿಚಯ ನೀಡುವ 'ಸರ್ವಜೀವಿಗಳ ಶಾಂತಿಯತೋಟ' ನಿಮರ್ಿಸುವ ಕೈಂಕರ್ಯದಲ್ಲಿ ಗಾರ್ಡನ್ ಕ್ಯುರೇಟರ್ ವೇದಾರಾಣಿ ದಾಸನೂರ ನೇತೃತ್ವದಲ್ಲಿ ಕಲಾವಿದರು ನಿರತರಾಗಿದ್ದಾರೆ.
ಭಾಕ್ಸ ಸುದ್ದಿ : ಗಾರ್ಡನ್ನ ವೈಶಿಷ್ಟ್ಯಗಳು : 2014-ಮಕ್ಕಳ ಶಿಲ್ಪಕಲಾ ಕಾರಂಜಿ ಹಾಗೂ ಮದುವೆ ಪ್ರದರ್ಶನಾಲಯ, 2015-ಅದ್ಭುತ ಆಲದ ಮರ, ಜನಪದರ ಸಂತೆಗಳಾದ ದನದ ಸಂತೆ, ತರಕಾರಿ ಸಂತೆ, 2016-ಕುಸ್ತಿ ಹಾಗೂ ಮಲ್ಲಕಂಭಗಳನ್ನೊಳಗೊಂಡ ಗ್ರಾಮೀಣ ಕ್ರೀಡೆಗಲ ಕಲಾಕೃತಿಗಳು, 2017-ರಾಕ್ ಕಾರಂಜಿಯ ರಮ್ಯದೃಶ್ಯ ಹಾಗೂ ವಿಶಿಷ್ಟ ವಾಸ್ತು ಶಿಲ್ಪ ಶೈಲಿಯ ಹೊಟೇಲ್, 2018-ಪ್ರವಾಸಿಗರ ಶಿಲ್ಪಗಳು ಹಾಗೂ ಜಾನಪದರಂಗಮಂದಿರ, 2019-'ಹೂ ಹಟ್ಟಿ ಪಾರ್ಕ್ -ವಿವಿಧ ರೀತಿಯ ಹೂ ಚಿಟ್ಟೆಗಳನ್ನು ಸೃಷ್ಟಿಸಲಾಗಿದೆ, 2020-ಜನಪದರ ಸಂತೆಗಳು-ಜನಪದರ ವಿಸ್ತ್ರತರೂಪ ಹಣ್ಣು ಹಂಪಲು,ಮೀನು,ಕೋಳಿ,ಆಡು ಮಾರವವರ ಹೊಸ ಶಿಲ್ಪಗಳನ್ನು ಸೃಷ್ಟಿಸಲಾಗಿದೆ, 2021-ಶಿಲ್ಪಕಲಾ ಗ್ರಾಮಕ್ಕೆ ಸೇರ್ಪಡೆಯಾದ ಹೊಸ ಮನೆಗಳು, ನೇಕಾರ, ನಾಟಿ ವೈದ್ಯ, ಗಾಣಿಗೇರ, ಶಿಲ್ಪಕಾರರ ಮನೆಗಳನ್ನು ನಿರ್ಮಿಸಲಾಗಿದೆ. ಅವರ ವೃತಿ ಕೌಶಲ್ಯಗಳನ್ನು, ಜೀವನ ಕ್ರಮವನ್ನು ಶಿಲ್ಪ,ವಾಸ್ತು ಶಿಲ್ಪ ಹಾಗೂ ಗ್ರಾಮ್ಯ-ಪರಿಕರಗಳನ್ನು ಬಳಸಿಕೊಂಡು ಮರು ಸೃಷ್ಟಿಸಲಾಗಿದೆ, 2022-'ಕುಟುಂಬ'(Family Garden) ಕಾರ್ಯ ಪ್ರಾರಂಭಗೊಂಡಿದೆ. ಸಮಾಜದಲ್ಲಿ 'ಕುಟುಂಬ' ವ್ಯವಸ್ಥೆಯ ಮಹತ್ವ ಸಾರುವ 'ಕುಟುಂಬ' ಶಿಲ್ಪಕಲಾ ಉದ್ಯಾನವನ ನಿರ್ಮಿಸಲಾಗುತ್ತಿದೆ. ವಿವಿಧ ಧರ್ಮಗಳಲ್ಲಿ ಕುಟುಂಬ ವ್ಯವಸ್ಥೆಯನ್ನು ತೋರಿಸಲಾಗುವುದು.
ತಂದೆ-ತಾಯಿ, ಅಜ್ಜ-ಅಜ್ಜಿ-ಮೊಮ್ಮಕಳು ಹೀಗೆ ಕುಟುಂಬದ ಎಲ್ಲರ ಒಗ್ಗೂಡುವಿಕೆಯಿಂದ ಸೃಷ್ಟಿಯಾಗುವ ಆರೋಗ್ಯಕರ ಸಮಾಜ ನಿರ್ಮಾಣ ದ ಪರಿಕಲ್ಪನೆಯನ್ನು ಇಲ್ಲಿ ಬಿಂಬಿಸಲಾಗುವುದು.