ಕಾಗವಾಡ

ಡಾ. ಅರ್ಚನಾ ಅಥಣಿಗೆ ಲಿಂಗರಾಜ ಸಾಹಿತ್ಯ ಪ್ರಶಸ್ತಿ: ಇಂದು ಪ್ರದಾನ

ಡಾ. ಅರ್ಚನಾ ಅಥಣಿಗೆ ಲಿಂಗರಾಜ ಸಾಹಿತ್ಯ ಪ್ರಶಸ್ತಿ: ಇಂದು ಪ್ರದಾನ

ಲೋಕದರ್ಶನ ವರದಿ 


 ಕಾಗವಾಡ 09: ಕನ್ನಡ ನಾಡು, ನುಡಿಯ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಧ್ಯಾಪಕಿ ಡಾ. ಅರ್ಚನಾ ಅಥಣಿಯವರ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರೆ​‍್ಡಯಾಗಿದೆ. 

  ಸದಾ ಬರವಣಿಗೆಯನ್ನೇ ಉಸಿರಾಗಿಸಿಕೊಂಡಿರುವ ಡಾ.ಅರ್ಚನಾ ಅವರಿಗೆ ಪ್ರಸಕ್ತ 2022 ರ ಸಾಲಿನ "ಲಿಂಗರಾಜ ಸಾಹಿತ್ಯ ಪ್ರಶಸ್ತಿ" ಹುಡುಕಿಕೊಂಡು ಬಂದಿದೆ. ಅಥಣಿಯ ಕೆಎಲ್‌ಈ ಸಂಸ್ಥೆಯ ಎಸ್‌.ಎಂ.ಎಸ್‌. ಕಾಲೇಜಿನ ಖೋತ ಸಭಾ ಭವನದಲ್ಲಿ ದಿ. 10ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ತ್ಯಾಗವೀರ ಶಿರಸಂಗಿ ಲಿಂಗರಾಜ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 

  ಅಥಣಿ ತಾಲೂಕಿನ ರಡ್ಡೇರಹಟ್ಟಿ ಸರ್ಕಾರಿ ಫ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿರುವ ಡಾ.ಅರ್ಚನಾ ಅಥಣಿ ಅವರು ಅಕ್ಕ ಮಹಾದೇವಿ ವಚನಗಳ ಮೀಮಾಂಶೆ ಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೆಟ್ ಪದವಿ ಪಡೆದುಕೊಂಡವರು. 

  ಡಾ. ಸ,ಜ, ನಾಗಲೋತಿಮಠ, ರಾಜ್ಯ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ವಿಜ್ಞಾನ ಮಿತ್ರ ರಾಜ್ಯ ಶಿಕ್ಷಕ ಪ್ರಶಸ್ತಿ,  ಮಹಾಂತ ಜೋಳಿಗೆ ಪ್ರಶಸ್ತಿ, ವಿಶೇಷ ಸಾಧಕ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳ ಗರಿಯ ಜೊತೆಗೆ ಈಗ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಸೇರೆ​‍್ಡಗೊಂಡಿದೆ. ಇತ್ತೀಚಿಗೆ ಮಾಲ್ಡಿವ್ಸ್‌ದಲ್ಲಿ ಜರುಗಿದ ಅಂತರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾಲ್ಗೊಂಡು ಕನ್ನಡ ನಾಡಿನ ಹಿರಿಮೆಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ.  

ಸೋಮವಾರ ದಿ.10 ರಂದು ತ್ಯಾಗವೀರ ಲಿಂಗರಾಜರ ಜಯಂತಿ ಅಥಣಿಯ ಖೋತ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಡಾ.ಮಲ್ಲಿಕಾರ್ಜುನ ಹಂಜಿ ನೇತೃತ್ವವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಡಾ.ಅರ್ಚನಾ ಅಥಣಿಯವರಿಗೆ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ನಂದಕುಮಾರ ಸಾವಡಕರ ವಹಿಸುವರು. ಪ್ರಾಚಾರ್ಯ ಎಸ್‌.ಎಲ್‌.ಪಾಟೀಲ, ಪೆಕಾಶ ಪಾಟೀಲ, ಸಿ.ಎಸ್‌.ಜನವಾಡ,ಡಾ.ಎಸ್‌.ವಾಯ್‌.ಹೊನ್ನುಂಗರ ಉಪಸ್ಥಿತರಿರುವರು. 


ಸುದ್ದಿ ಓದಿ