ಧಾರವಾಡ - ಹುಬ್ಬಳ್ಳಿ

‘ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ’

‘ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ’
'It is necessary to adhere to values ​​in life'

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರ ಹಿತೋಕ್ತಿ 

ಧಾರವಾಡ 09: ಭಾರತೀಯ ದಾರ್ಶನಿಕ ಜಗತ್ತು ಪ್ರತಿಪಾದಿಸಿದ ಮೇರು ಜೀವನ ಮೌಲ್ಯಗಳು ಮನುಕುಲದ ಜೊತೆಗಿವೆ. ಮೌಲ್ಯಾಧಾರಿತ ಜೀವನ ವಿಧಾನಕ್ಕೆ ಯಾವಾಗಲೂ ಶ್ರೇಷ್ಠತೆಯ ಮೆರಗು ಪ್ರಾಪ್ತವಾಗುತ್ತದೆ. ಹಾಗಾಗಿ ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯವಾಗಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು. 

ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಅಮ್ಮಿನಬಾವಿ ಹಾಗೂ ಮರೇವಾಡ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1995-96ನೆಯ ವರ್ಷದ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಬದುಕಿಗೆ ಮೌಲ್ಯಗಳ ಅವಶ್ಯಕತೆ ಎಷ್ಟು ಮುಖ್ಯವೋ, ಹಾಗೇ ಗುರುವಿನ ಮಾರ್ಗದರ್ಶನವೂ ಅಷ್ಟೇ ಮುಖ್ಯ. ಲೌಕಿಕ ಇಲ್ಲವೇ ಅಲೌಕಿಕ ವಿದ್ಯಾರ್ಜನೆ ಇದ್ದರೂ ಸಹಿತ ಅಲ್ಲಿ ಗುರು ಮುಖೇನ ಕಲಿತ ವಿದ್ಯೆಯು ಪರಿಪೂರ್ಣವಾಗಿರುತ್ತದೆ ಎಂದರು.  

ಗುರುವಂದನೆ : ಎಸ್‌.ಎಲ್‌.ಎಮ್ಮಿ, ಎನ್‌.ಬಿ.ಪವಾರ, ಆರ್‌.ಎಸ್‌. ಗುಲಗಂಜಿಕೊಪ್ಪ, ಪುಷ್ಪಾ ಬಾಗಲವಾಡಿ, ವ್ಹಿ.ಬಿ. ಕೆಂಚನಗೌಡ್ರ, ಎಸ್‌.ವೈ ಪೂಜಾರ, ಚೆನ್ನಮ್ಮ ನೀರಲಕಟ್ಟಿ, ಸುಮನ್ ಬೋಂಗಾಳೆ, ಎನ್‌.ಸಿ. ಪಾಟೀಲ, ಚಿ.ರಾ.ಪದಕಿ, ಎಸ್‌.ಎಸ್‌. ಅಂಗಡಿ, ತುಳಸಾ ಮುತಾಲಿಕದೇಶಪಾಂಡೆ, ಜೀಜಾಬಾಯಿ ಜಾಧವ, ಗುರುಮೂರ್ತಿ ಯರಗಂಬಳಿಮಠ, ಚೆನ್ನಮ್ಮ ಬೈಲೂರ, ಪ್ರೇಮಾ ಗುಡಿ, ಮಲ್ಲಿಕಾರ್ಜುನ ಮಠಪತಿ ಅವರನ್ನು ಗೌರವಿಸಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.  

ಶ್ರೀಶಾಂತೇಶ್ವರ ಪ್ರೌಢಶಾಲೆ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಂ.ವ್ಹಿ. ಹೊಸೂರ ಅಧ್ಯಕ್ಷತೆವಹಿಸಿದ್ದರು. ಜಿ. ಎಂ. ಹಂಚಿನಾಳ ಹಾಗೂ ಎಂ. ವ್ಹಿ. ಅಂಗಡಿ ಅತಿಥಿಗಳಾಗಿದ್ದರು. ಎಸ್‌.ಟಿ. ಹಿರೇಮಠ, ಶಿವಾನಂದ ಅಕ್ಕೋಜಿ, ಚೆನ್ನಬಸಪ್ಪ ಮಾಟರ, ಉಮೇಶ ನಡುವಿನಹಳ್ಳಿ, ಶಿವಯೋಗಿ ಚಂದರಗಿ ಇತರರು ಇದ್ದರು. ನಿವೃತ್ತ ಸೈನಿಕರುಗಳಾದ ಶಿವಯೋಗಿ ಚಂದರಗಿ ಹಾಗೂ ಮೆಹಬೂಬಸುಬಾನಿ ನದಾಫ್ ಅವರನ್ನೂ ಗೌರವಿಸಲಾಯಿತು. ಸಂತೋಷ ಕಮತರ ಸ್ವಾಗತಿಸಿದರು. ಶೋಭಾ ಸುಳ್ಳದ ನಿರೂಪಿಸಿದರು. ಶಿವಲೀಲಾ ಹುಲ್ಲೂರ ವಂದಿಸಿದರು. 


ಸುದ್ದಿ ಓದಿ