ವಿಜಯಪುರ

ಮಲ್ಲನಗೌಡ ಬಿರಾದಾರ ಅವರಿಗೆ ಈಶ್ವರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಮಲ್ಲನಗೌಡ ಬಿರಾದಾರ ಅವರಿಗೆ ಈಶ್ವರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ದೇವರಹಿಪ್ಪರಗಿ 02 : ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ   ಅವರಿಗೆ ಸಮಾಜಮುಖಿ ಸೇವೆಯನ್ನು ಗುರುತಿಸಿ ಈಶ್ವರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಬೆಂಗಳೂರಿನ ಜಕ್ಕೂರು ಕೇಂದ್ರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಹತ್ತು ಕೋಟಿ ವ್ಯಸನ ಮುಕ್ತಿ ಅಭಿಯಾನ ಹಾಗೂ ಈಶ್ವರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಲ್ಲನಗೌಡ ಬಿರಾದಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಮಾಜಿ ಸಚಿವರಾದ ಆರಿ​‍್ಬ. ತಿಮ್ಮಾಪುರ, ಕುಮಾರ ಬಂಗಾರ​‍್ಪ ಹಾಗೂ ರಾಜಯೋಗಿನಿ ಲೀಲಾ ಅಕ್ಕನವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.  

ಬ್ರಹ್ಮಕುಮಾರಿ ಸಂಸ್ಥೆಯು ಮಲ್ಲನಗೌಡ ಬಿರಾದಾರ   ಅವರ ಸಮಾಜಮುಖಿ ಸೇವೆ, ಜನಸಂಪರ್ಕ, ಮಾನವೀಯ ಮೌಲ್ಯಗಳ ಪ್ರಚಾರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನೀಡುತ್ತಿರುವ ಸಹಕಾರವನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿತು.  ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಮಹಿಮಾ ಪಟೇಲ್, ನವರಸ ನಟನೆ ಅಕಾಡೆಮಿ ಸಂಸ್ಥಾಪಕ ಎಂ. ಶ್ರೀನಿವಾಸ, ಮುಖಂಡ ಬಿ.ಡಿ. ಪಾಟೀಲ, ಪವಿತ್ರ ಅಕ್ಕನವರು ಸೇರಿದಂತೆ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯರು, ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. 


ಸುದ್ದಿ ಓದಿ