ಮನರಂಜನೆ

ಅಭಿಷೇಕ್ ಬಚ್ಚನ್, ರಾಜ್‌ಕುಮಾರ್ ರಾವ್ ಅಭಿನಯದ ಲುಡೋ ಚಿತ್ರದ ಟ್ರೈಲರ್ ಬಿಡುಗಡೆ

ಅಭಿಷೇಕ್ ಬಚ್ಚನ್, ರಾಜ್‌ಕುಮಾರ್ ರಾವ್ ಅಭಿನಯದ ಲುಡೋ ಚಿತ್ರದ ಟ್ರೈಲರ್ ಬಿಡುಗಡೆ

ಮುಂಬೈ, ಅ.20 :ಾಲಿವುಡ್‌ನ ಜೂನಿಯರ್ 'ಬಿ' ಅಭಿಷೇಕ್ ಬಚ್ಚನ್ ಮತ್ತು ರಾಜ್‌ಕುಮಾರ್ ರಾವ್ ಅವರ ಮುಂಬರುವ  'ಲುಡೋ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್ ಚಲನಚಿತ್ರ ನಿರ್ಮಾಪಕ ಅನುರಾಗ್ ಬಸು ಅವರ ಬಹು-ನಟರು ಅಭಿನಯಿಸಿದ  ಚಿತ್ರ 'ಲುಡೋ' ನಲ್ಲಿ ಅಭಿಷೇಕ್ ಬಚ್ಚನ್, ರಾಜ್‌ಕುಮಾರ್ ರಾವ್, ಸನ್ಯಾ ಮಲ್ಹೋತ್ರಾ, ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿದ್ದಾರೆ. 'ಲುಡೋ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವು ನವೆಂಬರ್ 12 ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.ಟ್ರೈಲರ್ ನಲ್ಲಿ ಹುಡುಗಿಯ ಅಪಹರಣವನ್ನು ತೋರಿಸಲಾಗಿದೆ. ಈ ಅಪಹರಣಕಾರರ ಪಾತ್ರಕ್ಕೆ ಅಭಿಷೇಕ್ ಬಚ್ಚನ್ ಜೀವ ತುಂಬಿದ್ದಾರೆ. ಮಾಣಿ ಪಾತ್ರದಲ್ಲಿ ನಟಿಸುತ್ತಿರುವ ರಾಜ್‌ಕುಮಾರ್ ರಾವ್ ಅವರ ಮುಂದೂ ಅಪಹರಣ ಪ್ರಕರಣವಿದೆ. ಅವರು ತನ್ನ ಮಾಜಿ ಪ್ರಿಯತಮೆಯ ಗಂಡನನ್ನು ಸ್ವತಂತ್ರಗೊಳಿಸಬೇಕು. ಇದಲ್ಲದೆ ಇವರೆಲ್ಲರ ಮಾಲಿಕ ಪಂಕಜ್ ತ್ರಿಪಾಠಿ. ಇವರೆಲ್ಲರೂ ತಮಗೆ ಅರಿವಿಲ್ಲದೆ ಒಂದೇ ದಿಕ್ಕಿನಲ್ಲಿ ಸಾಗುತ್ತಾರೆ.


ಸುದ್ದಿ ಓದಿ