ರಾಣೆಬೆನ್ನೂರ

" ವಿಶ್ವ ಧ್ಯಾನ ದಿನ " ರವಿಶಂಕರ್ ಗುರೂಜಿ ಜಾಗತಿಕ ಧ್ಯಾನ- ನೇರ ಪ್ರಸಾರ- ಭಾರತಿ ಜಂಬಿಗಿ

" ವಿಶ್ವ ಧ್ಯಾನ ದಿನ " ರವಿಶಂಕರ್ ಗುರೂಜಿ ಜಾಗತಿಕ ಧ್ಯಾನ- ನೇರ ಪ್ರಸಾರ- ಭಾರತಿ ಜಂಬಿಗಿ

" ವಿಶ್ವ ಧ್ಯಾನ ದಿನ " ರವಿಶಂಕರ್ ಗುರೂಜಿ ಜಾಗತಿಕ ಧ್ಯಾನ- ನೇರ ಪ್ರಸಾರ- ಭಾರತಿ ಜಂಬಿಗಿ  

ರಾಣೇಬೆನ್ನೂರು   20:  ವಿಶ್ವ ಧ್ಯಾನದ  ದಿನದಂದು ಡಿಸೆಂಬರ್ 21ರಂದು ಶನಿವಾರ ಭಾರತೀಯ ಕಾಲಮಾನದ ರಾತ್ರಿ 8 ಗಂಟೆಗೆ ಆರ್ಟ್‌ ಆಫ್ ಲಿವಿಂಗ್ ಕೇಂದ್ರದ ಶ್ರೀ, ಶ್ರೀ, ರವಿಶಂಕರ್ ಗುರೂಜಿ ಅವರು ನಡೆಸಿಕೊಡಲಿರುವ  ಜಾಗತಿಕ ಧ್ಯಾನದ ನೇರ ಪ್ರಸಾರವು ಜರುಗಲಿದೆ ಎಂದು, ಆರ್ಟ್‌ ಆಫ್ ಲಿವಿಂಗ್  ಜಿಲ್ಲಾ ಧ್ಯಾನ ದಿನ ಅಭಿವೃದ್ಧಿ ಸಂಯೋಜಕರಾದ ಶ್ರೀಮತಿ ಭಾರತಿ ಕುಮಾರ. ಜಂಬಗಿ ಹೇಳಿದರು. ಅವರು, ಇಲ್ಲಿನ ನಾಗ ಶಾಂತಿ ಕಾಲೇಜು ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.    ಮಾನವನ ಆಧುನಿಕ ಬದುಕಿನಲ್ಲಿ ಯಾವುದೇ ಶಾಂತಿ ನೆಮ್ಮದಿ ಇಲ್ಲದೆ ಜೀವನ ಸಾಗಿಸುವಂಥಾಗಿದೆ. ಮಾನಸಿಕ ನೆಮ್ಮದಿಗಾಗಿ, ಭಾರತದ ಐಕ್ಯತೆ ಮತ್ತು ಸೌಹಾರ್ತೆಗಾಗಿ ರವಿಶಂಕರ್ ಗುರೂಜಿ ಅವರು, ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.   ಶಾಂತಿ ಮತ್ತು ನೆಮ್ಮದಿ ಜೀವನಕ್ಕೆ ನಿತ್ಯವೋ ನಿಗದಿತ ಯೋಗ ಧ್ಯಾನ ಪ್ರಾಣಾಯಾಮ, ಅಗತ್ಯವಿದೆ. ವಿಶ್ವ ಸಂಸ್ಥೆಯಲ್ಲಿ  ಗುರೂಜಿ ಅವರು ಭಾಷಣ ಮಾಡಲಿದ್ದಾರೆ ಎಂದರು.  ಶನಿವಾರ ರಾತ್ರಿ 8 ಗಂಟೆಗೆ, ಜಾಗತಿಕ ಧ್ಯಾನವನ್ನು ನಡೆಸಿಕೊಳ್ಳಲಿದ್ದಾರೆ. ಇದು ನೇರ ಪ್ರಸಾರವಾಗಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ವೀಕ್ಷಿಸಬಹುದಾಗಿದೆ ಅಲ್ಲದೆ ಅಂದೆಅವರು," ವಿಶ್ವ ಧ್ಯಾನ ದಿನ" ವನ್ನಾಗಿ ಘೋಷಿಸಿ, ಪ್ರತಿ ವರ್ಷವೂ, ಈ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.  ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯು, ಮಹಿಳೆಯರಿಗಾಗಿಉಚಿತ ಕಂಪ್ಯೂಟರ್ ತರಬೇತಿಯನ್ನು 52 ದಿವಸಗಳ ಕಾಲ ಊಟ ಉಪಹಾರ ವಸತಿಯೊಂದಿಗೆ ನೀಡಲಾಗುತ್ತಿದೆ. ಯಾವುದೇ ಜಾತಿ, ಮತ, ಭೇದ, ಭಾವ ಇಲ್ಲದೆ ನಡೆಯುವ ಶಿಕ್ಷಣದ ಪ್ರಯೋಜನವನ್ನು ಪಡೆದು ಸ್ವಾವಲಂಬಿ ಬದುಕನ್ನು ಕಲ್ಪಿಸುವ ಉದ್ದೇಶ ಅವರದಾಗಿದೆ ಎಂದರು.      ಆರ್ಟ್‌ ಆಫ್ ಲಿವಿಂಗ್ ಯೋಗ ಶಿಕ್ಷಕರಾದ  ಸಾವಿತ್ರಮ್ಮ ಹೂಲಿಹಳ್ಳಿ,  ಉಜ್ಜಪ್ಪ ಕೊಪ್ಪದ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ