ರಾಣೆಬೆನ್ನೂರ

ಸೇವಾ ಅಂಧರ ಸಂಸ್ಥೆಯಲ್ಲಿ "ವಿಶ್ವ ಶ್ರವಣ ನ್ಯೂನತೆ- ಕಿವುಡ ಮಕ್ಕಳ ದಿನಾಚರಣೆ”

ಸೇವಾ ಅಂಧರ ಸಂಸ್ಥೆಯಲ್ಲಿ "ವಿಶ್ವ ಶ್ರವಣ ನ್ಯೂನತೆ- ಕಿವುಡ ಮಕ್ಕಳ ದಿನಾಚರಣೆ”

ರಾಣೀಬೆನ್ನೂರು 28: ನಗರದಲ್ಲಿರುವ  ಸೇವಾ ಅಂಧರ ಸಂಸ್ಥೆ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ “ಉಜ್ವಲ” ಮಹಿಳೆ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ ಯೋಜನೆ, ಲಯನ್ಸ ಕ್ಲಬ್ ರಾಣೇಬೆನ್ನುರು ಇವರುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಶ್ರವಣ ನ್ಯೂನತೆ ಮಕ್ಕಳ” ದಿನಾಚರಣೆಯನ್ನು ಆಚರಿಸಲಾಯಿತು. ಬೆಳಿಗ್ಗೆ 10:30 ಕ್ಕೆ ನಗರದ ಹೆಡ್ ಪೊಸ್ಟ್‌ ಸರ್ಕಲ್‌ನಿಂದ  ಜಾಗ್ರತಿ ಜಾತಾ ಕಾರ್ಯಕ್ರಮವನ್ನು ಶ್ರೀ ವೇದಮೂರ್ತಿ ಎಸ್‌.ಟಿ ತಾಲೂಕ ಕಾರ್ಯನಿರತ ಪತ್ರಕರ್ತ ಸಂಘ ರಾಣೇಬೆನ್ನೂರು. ಮತ್ತು ಲಯನ್ಸ ಕ್ಲಬ್ ಅಧ್ಯಕ್ಷರಾದ ಶ್ರಿ ಪ್ರಭುಲಿಂಗಪ್ಪ ಸಿ ಹಲಗೇರಿ ಇವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಶ್ರೀ ವೇದಮೂರ್ತಿಯವರು ವಿಶ್ವ ಶ್ರವಣನ್ಯೂನತೆಯ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ ಎಂದರು ಮೆರವಣಿಗೆಯು ನಗರದ ಎಂ.ಜಿ ರಸ್ತೆ, ದರ್ಗ ಸರ್ಕಲ್, ಕುರಬಗೇರಿ ಕ್ರಾಸ್, ಪಿ.ಬಿ ರಸ್ತೆ ಮುಖಾಂತರ ಜನರಲ್ಲಿ ಶ್ರವಣನ್ಯೂನಯ, ಬಗ್ಗೆ ಮೈಕಿನಲ್ಲಿ ಹೇಳುತ್ತಾ ಸ್ಲೋಗನ್ ಹಿಡಿದು ಮಕ್ಕಳು ಜಾಗ್ರತಿ ಮೂಡಿಸುತ್ತಾ  ಮಾರುತಿ ನಗರದ ಶಾಲಾ ಆವರಣಗೆ ನಡೆದು ಬಂದರು.  

 ಸಂಜೆ 4:30ಕ್ಕೆ ವೇದಿಕೆ ಕಾರ್ಯಕ್ರಮವು  ಮಾರುತಿ ನಗರದ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದಲ್ಲಿ ನೆಡೆಯಿತು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಪರಮಪೂಜ್ಯ, 1108 ಜಗದ್ಗರು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ನಂದಿಗುಡಿ, ಇವರು ಮಾತಾನಾಡಿ ಸಮಾಜದಲ್ಲಿ ಎಲ್ಲರಂತೆ ನೀವು ಜೀವಿಸಲು ನಿಮಗೆ ದಾರಿ ತೋರಿದ ಶ್ರೀಮತಿ ರೇಣುಕಾ ಶಿವಕುಮಾರ ದಂಪತಿಗೆ ದೇವರು ಸದಾ ಆರೋಗ್ಯ ಭಾಗ್ಯ ನೀಡಲಿ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ ಸಾಕೇತಿಕವಾಗಿ ವಿತರಿಸಿದರು. ಇದೇ ಸಂದರ್ಬದಲ್ಲಿ ಮಾತನಾಡಿದ ಪ್ರಕಾಶ ಬುರಡಿಕಟ್ಟಿ ನಗರ  ಸಭೆ ಸದಸ್ಯರು ಸಮಾಜದಲ್ಲಿ ಎಲ್ಲರಂತೆ ಬೆಳೆಯುವುದಕ್ಕೆ ಸೇವಾ ಅಂದರ ಸಂಸ್ಥೆಯು ವಿಕಲಚೇತನ ಮಕ್ಕಳಿಗೆ ವಿದ್ಯೆ ಕಲಿಯುವುದಕ್ಕೆ, ಬಾಳಿ ಬದುಕುವದಕ್ಕೆ ಅನುವು ಮಾಡಿ ಕೊಟ್ಟಿರುವುದು ತುಂಬಾ ಶಾಂಘ್ಲನಿಯಾ ಎಂದರು.  

ಸಂಸ್ಥೆಗೆ ನನ್ನ ಕೈಲಾದ ಸಹಾಯ ನೀಡುವುದಾಗಿ ಹೇಳಿದರು  ಶೇಖಣ್ಣ ಹೋಸಗೌಡರ ನಗರ ಸಭೆ ಸಧಸ್ಯರು ಮಾತನಾಡಿ ನಾನು 1991 ರಿಂದ ನೋಡುತ್ತಾ ಬಂದಿದ್ದೇನೆ. ಸಂಸ್ಥೆಯ ಕಾರ್ಯದರ್ಶಿಯಾದ  ರೇಣುಕಾ ಶಿವಕುಮಾರ ದಂಪತಿ ಮತ್ತು ಸಿಬ್ಬಂದಿಯ ಕೆಲಸ ದೇವರು ಮೆಚ್ಚಿಸುವಂತ ಕಾರ್ಯ ಎಂದರು ಸಂಸ್ಥೆಗೆ ಸದಾ ಬೇನ್ನೆಲುಬಾಗಿ ನಿಲ್ಲುತ್ತೆನೆ ನನಗೆ ಕೈಲಾದ ಸಹಾಯ ಮಾಡುತ್ತೆನೆ ಎಂದರು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ. ನಿತ್ಯಾನಂದ ಕುಂದಾಪುರ, ಮಾತನಾಡಿ ವಿಕಲ ಚೇತನ ಮಕ್ಕಳ ಚಟುವಟಿಕೆ ನೋಡಿ ತುಂಬಾ ಸಂತೋಷವಾಗಿದೆ. ನಾನು  ಸಂಸ್ಥೆಯ ಪ್ರತಿಯೊಂದು ಕಾರ್ಯವನ್ನು ನೋಡುತ್ತಾ ಬಂದಿದ್ದೇನೆ ಎಂದರು. ಎಂ.ಹೆಚ್‌.ಪಾಟೀಲ ಕ್ಷೇತ್ರ ಶಿಕ್ಷಾಧಿಕಾರಿಗಳು, ಇವರು ಮಾತನಾಡಿ ನಾನು ಸಾಕಷ್ಟು ಕಾರ್ಯಕ್ರದಲ್ಲಿ ಭಾಗವಹಿಸಿದ್ದೇನೆ ಆದರೆ  ವಿಶೇಷ ಚೇತನ ಮಕ್ಕಳ ಉತ್ತಮ ಶಿಕ್ಷಣ, ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ನೋಡಿ ತುಂಬಾ ಸಂತೋಷವಾಯಿತು. ಈ ಶಾಲೆಯು ಒಂದು ಶ್ರವಣ ನ್ಯೂನತೆ ಮಗುವನ್ನು ದತ್ತು ಪಡೆದುಕೋಳ್ಳುತ್ತೇನೆ, ಇಲಾಖೆಯಿಂದ ಸಹಾಯವನ್ನು ನೀಡುವುದಾಗಿ ಹೇಳಿದರು. ಲಯನ್ಸ ಕ್ಲಬ್ ಅಧ್ಯಕ್ಷರಾದ  ಪಭುಲಿಂಗಪ್ಪ ಹಲಗೇರಿ ಇವರು ಮಾತನಾಡಿ  ಸಂಸ್ಥೆಯು 1990 ರಲ್ಲಿ 3 ಮಕ್ಕಳಿಂದ ಪ್ರಾರಂಬವಾದ ಸಂಸ್ಥೆ ಇಂದು 130 ಮಕ್ಕಳಿ ಶಿಕ್ಷಣ ನೀಡುತ್ತಿರುವುದು ಹೇಮ್ಮೆಯ ಸಂಗತಿ ಎಂದರು  ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ ಕಾಕಿ ಜೆ, ಸಿ.ಆಯ್ ಸೇವಾ ಅಂಧರ ಸಂಸ್ಥೆ ಕಾರ್ಯದರ್ಶಿ ರೇಣುಕಾ ಶಿವಕುಮಾರ, ಸಂಸ್ಥೆಯ ಅಧ್ಯಕ್ಷ ಹೆಚ್ ಆರ್ ಶಿವಕುಮಾರ ಸಂಸ್ಥೆಯ ಕಿರು ಪರಿಚವನ್ನು ಮಾಡಿಕೊಟ್ಟರು ಇದೇ ಸಂದರ್ಬದಲ್ಲಿ ಸನ್ಮಾನಿಸಲಾಯಿತು ಶಾಲಾ ಮಕ್ಕಳಿಂದ ಕ್ರೀಡೆಯಲ್ಲಿ ಸಾದನೆ ಗೈದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೆರಿದವು. ಈ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆಯನ್ನು  ವಿನಯ ಬಳ್ಳಾರಿ ಕುಟುಂಬದವರು ಸಾ/ಮೋಟೆಬೆನ್ನುರು ಇವರು ಮಾಡಿಸಿದರು. ಪೋಲಿಸ ಇಲಾಖೆಯ ಮತ್ತು ಪತ್ರಿಕಾ ಮಾಧ್ಯಮದವರು ಸಹಕಾರ ನೀಡಿದರು. ಸ್ವಾಗತವನ್ನು ಸೌಮ್ಯ ಎಸ್,ಆರ್ ನೇರವೆರಿಸಿದರು ವಂದನಾರೆ​‍್ಣಯನ್ನು  ಶಾರದ ನೇರವೇರಿಸಿದರು. ಶಾಲಾ ಮುದ್ದು ಮಕ್ಕಳು ಮತ್ತು ಮಕ್ಕಳ ಪಾಲಕರು ಶಾಲಾ ಶಿಕ್ಷಕರು ಆಡಳಿತ ಮಂಡಳಿ  ಭಾಗವಹಿಸಿದ್ದರು. 


ಸುದ್ದಿ ಓದಿ