"ಮಕ್ಕಳ ಸೇವೆಯೇ ದೇವರ ಸೇವೆ ಸಮಾನ ಆನಂದ ಭೂಸನೂರ"
ಸಿಂದಗಿ 24 : ಮುಗ್ಧ ಮಕ್ಕಳ ಬಾಲ್ಯವನ್ನು ಸುಂದರವಾಗಿಸುವುದು ಮತ್ತು ಅವರಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡುವುದು ಅತ್ಯಂತ ಶ್ರೇಷ್ಠವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು . ತಾಲ್ಲೂಕಿನ ದೇವಣಗಾಂವ ಗ್ರಾಮದಲ್ಲಿ ಶನಿವಾರರಂದು ಆಳಂದ ತಾಲ್ಲೂಕಿನಲ್ಲಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿರುವ ಶಿವಾನಂದ ಕಲಬುರಗಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿ ಮಕ್ಕಳನ್ನು ’ದೇವರ ಮನೆ ಹೂವುಗಳು’ ಅವರ ನಿಸ್ವಾರ್ಥ ನಗು ಮತ್ತು ಪ್ರೀತಿಯಲ್ಲಿ ಭಗವಂತನನ್ನು ಕಾಣಬಹುದು.
ಭವಿಷ್ಯದ ನಿರ್ಮಾಣ: ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಪೌಷ್ಟಿಕ ಆಹಾರ ಮತ್ತು ಶಿಕ್ಷಣ ನೀಡುವುದು ದೇಶದ ಮತ್ತು ಸಮಾಜದ ಭವಿಷ್ಯವನ್ನು ರೂಪಿಸುವ ಕೆಲಸವಾಗಿದೆ. ತಮ್ಮ ಸೇವೆಯ ಮಕ್ಕಳಿಗೆ ಸಹಾಯ ಮಾಡುವುದು, ಅವರ ಕಷ್ಟಗಳಿಗೆ ಸ್ಪಂದಿಸುವುದು ಮಾನವೀಯತೆಯ ಅತ್ಯುನ್ನತ ರೂಪ.ನಿಮ್ಮ ಸುತ್ತಮುತ್ತಲಿನ ಮಕ್ಕಳಿಗೆ ಸಹಾಯ ಮಾಡಲು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದೇ ನಿಜವಾದ ದೇವಪೂಜೆ ಎಂದರು. ಸರಳ ಸಮಾರಂಭದಲ್ಲಿ ಸಿಂದಗಿ ಅಖಂಡ ತಾಲ್ಲೂಕಿನ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿರುವ ಸರ್ವ ಮುಖ್ಯಗುರುಗಳಿಗೆ ಶುಭಾಷಯಗಳು ತಿಳಿಸಿದರು.ಮಹಾಂತಯ್ಯ ಹಿಪ್ಪರಗಿಮಠ. ಲಕ್ಷ್ಮಣ ನಡವಿನಕೇರಿ .ಪ್ರಕಾಶ ನಂದಗೀರಿ. ಆನಂದ ಪೂಜಾರಿ ಇದ್ದರು