ರಾಣೆಬೆನ್ನೂರ

ಸೋಮಲಾಪುರದ ಮಲ್ಲಯ್ಯನ ಕಾಣಿಕ "ಸಮೃದ್ಧಿ ಸುಖ ಆದಿತಲೆ ಪರಾಕ್‌

ಸೋಮಲಾಪುರದ ಮಲ್ಲಯ್ಯನ ಕಾಣಿಕ "ಸಮೃದ್ಧಿ ಸುಖ ಆದಿತಲೆ ಪರಾಕ್‌

ರಾಣೇಬೆನ್ನೂರ  10:  ತಾಲೂಕಿನ ಸುಕ್ಷೇತ್ರ ಸೋಮಲಪುರದ ಹೊನ್ನಕೇರಿ ಮಲ್ಲಯ್ಯನ ಕಾರಣಿಕೋತ್ಸವ ಹಲವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಇತ್ತೀಚೆಗೆ ನಡೆಯಿತು.ಗ್ರಾಮದಲ್ಲಿ ಪ್ರತೀ ವರ್ಷ ಮಹಾನವಮಿ ದಸರಾ ಹಬ್ಬದ ಅಮವಾಸ್ಯೆಯ ಮರುದಿನ 5 ದಿನಗಳ ದೀಪೋತ್ಸವ ಉಪವಾಸದ ನಂತರ 5ನೇ ದಿನ ಗೊರವಯ್ಯ ಮಲ್ಲಪ್ಪಜ್ಜನು ನೆರೆದ ಸಾವಿರಾರು ಭಕ್ತರ ನಡುವೆ, ಪಲ್ಲಕ್ಕಿಯನ್ನು ಸುತ್ತುವರೆದು ಕಾರ್ಣಿಕ ನುಡಿಯುವ  ಪರಂಪರೆ ಈ ಕ್ಷೇತ್ರದ್ದಾಗಿದೆ.  

ಅಂದ ಹಾಗೆ  ಈ ವರ್ಷದ ಕಾರ್ಣಿಕವೂ "ಸಮೃದ್ಧಿ ಸುಖ ಆದಿತಲೆ ಪರಾಕ್" ದೈವಣಿಯಾಗಿದ್ದು . ಮುಂಬರುವ ದಿನಗಳು ನಾಡಿನ ಶ್ರೇಯೋಭಿವೃದ್ಧಿಗೆ ಪೂರಕವಾಗಿ, ಪ್ರಕೃತಿ ಸಕಾಲಕ್ಕೆ ಮಳೆ ಬೆಳೆ ತರುತ್ತದೆ ಎಂಬುದು ಇದರ ತಾತ್ಪರ್ಯವಾಗಿದೆ ಎನ್ನುತ್ತಾರೆ  ದೇವಸ್ಥಾನದ ಅರ್ಚಕ ಪೂಜಾರ ಅಶೋಕಪ್ಪ ಹಲವಾಗಲು 


ಸುದ್ದಿ ಓದಿ