ಇಂಡಿ

“ಚಂದ್ರಾಮ ಮಾಸ್ತರ ಬದುಕು" ಪುಸ್ತಕ ಬಿಡುಗಡೆ

“ಚಂದ್ರಾಮ ಮಾಸ್ತರ ಬದುಕು" ಪುಸ್ತಕ ಬಿಡುಗಡೆ


ಲೋಕದರ್ಶನ ವರದಿ  

ಇಂಡಿ 05 : ತಾಲೂಕಿನ ಹರಳಯ್ಯನಹಟ್ಟಿ (ಬೆನಕನಳ್ಳಿ)ಯಲ್ಲಿ ದಿ: 06-03- 2026 ರಂದು ಬೆಳಗ್ಗೆ 10-00 ಗಂಟೆಗೆ ಅಪ್ಪ ಅವ್ವ ಕಲಾ ಮತ್ತು ಸಾಹಿತ್ಯ, ಸಂಸ್ಕೃತಿ ಸಂಸ್ಥೆಯಿಂದ ದಿ.ಶ್ರೀ ಚಂದ್ರಾಮಯ ಹೊನ್ನಕಟ್ಟಿ (ಮಾಸ್ತರ) ಇವರ 24ನೇ ಪುಣ್ಯಾರಾಧನೆ ನಿಮಿತ್ಯ,  ರಾಜ್ಯ ಮಟ್ಟದ ಮಾಸ್ತರ ಪ್ರಶಸ್ತಿ ಮತ್ತು ವಿವಿಧ  ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿಜೀ ಅವರ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಜ್ಯೋತಿರ್ಲಿಂಗ ಹೊನ್ನಕಟ್ಟಿ ಸಿಪಿಐ ಹುಬ್ಬಳ್ಳಿ ಧಾರವಾಡ ಇವರು ಬರೆದ “ಚಂದ್ರಾಮ ಮಾಸ್ತರ ಬದುಕು" ಹಾಗೂ ಪ್ರೋ, ಬಿ.ಆರ್‌. ಪೋಲಿಸ ಪಾಟೀಲ ಇವರ “ಇನ್ನೆಸು ದಿನ ಇರತಿ” ಪುಸ್ತಕ ಬಿಡುಗಡೆಗೊಳ್ಳಲಿದೆ. ಕನ್ನಡ ನಾಡಿನಲ್ಲಿ ಉತ್ತಮ ಸೇವೆಗೈದ ಮಹನೀಯರನ್ನು ಗುರ್ತಿಸಿ ಕಾಯಕ ಮತ್ತು ಮಾಸ್ತರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

 ಅಪ್ಪ ಅವ್ವ ಕಲಾ ಸಾಹಿತ್ಯ ಮತ್ತು ಸಂಸ್ಕೃತಿ ಸಂಸ್ಥೆ ಸದಸ್ಯ ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ  ಸಿ ಐ ಹುಬ್ಬಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಯಕ ಪ್ರಶಸ್ತಿಗೆ ಭಾಜನರಾದವರು: ಸದಾಶಿವ ಕಟ್ಟಿಮನಿ ಡಿವೈಎಸ್ ಪಿ ಇಂಡಿ, ರೈತ ಹೋರಾಟಗಾರ ಧರ್ಮರಾಜ ಗೌಡರ, ಮೇರಿ ಜೇವಿಯರ್ ನೇತ್ರಾಧಿಕಾರಿ ಪ್ರಕಾಶ ಪರಣಕರ, ಪ್ರಭುಗೌಡ ಲಿಂಗದಳ್ಳಿ, ಡಾ.ಮಹಾಂತೇಶ ಬಿರಾದಾರ, ಡಾ.ಎಂ.ಕೆ.ಹದರಿ, ಡಾ. ಸಮೀರ ಹಾದಿಮನಿ, ಇಮಾಮಸಾಬ ವಲ್ಲೆಪ್ಪನವರ, ಲಿಂಗರಾಜು ಕಂಬಳಿ, ಅಶ್ವಿನಿ ರೆಡ್ಡಿ  ಅರಣ್ಯ ಇಲಾಖೆಯ ಧನರಾಜ ಮುಜಗೊಂಡ ಇಂಡಿ ತಾಲೂಕು ಲೋಕದರ್ಶನ ದಿನ ಪತ್ರಿಕೆ ವರದಿಗಾರ ಸಚೀನ ಎಸ್ ಇಂಡಿ.ಹಾಗೂ ಮಾಸ್ತರ ಪ್ರಶಸ್ತಿಗೆ ಭಾಜನರಾದವರು: ರಂಗಮ್ಮ ರಾಜಾಪೂರ, ಎಸ್‌.ಕೆ.ಕವಜಲಗಿ, ತಿಪ್ಪಣ್ಣ ನಾಗೂರ, ಚಂದ್ರಶೇಖರ ಪಡಗಣ್ಣವರ, ರಮೇಶ ಮೂಲಿಮನಿ, ವಿದ್ಯಾ ಕಲ್ಯಾಣಶೆಟ್ಟಿ, ಎಂ.ಎಂ ಪಡಶೆಟ್ಟಿ, ಬಿ ಆರ್ ಪೊಲೀಸ್ ಪಾಟೀಲ, 


ಸುದ್ದಿ ಓದಿ