ಯರಗಟ್ಟಿ

ಯುವಕ ನಾಪತ್ತೆ

ಯುವಕ ನಾಪತ್ತೆ

ಯರಗಟ್ಟಿ 20: ವಿಠ್ಠಲ ಫಕ್ಕೀರಪ್ಪ ಮಾಲದಿನ್ನಿ (34) ಇವರು 2022 ಜು.17ರಂದು ಹಿರೇಕೊಪ್ಪ ಕೆ.ಎಸ್ ಗ್ರಾಮದ ತೋಟದ ಮನೆಯಿಂದ ಹಾಲಿನ ಡೈರಿಗೆ ಹಾಲು ಹಾಕಲು ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಇವರ ಪತ್ನಿ ಪಾರ್ವತಿ ಫಕ್ಕೀರಪ್ಪ ಮಾಲದಿನ್ನಿ ಇವರು ಕಟಕೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾದ ಯುವಕನ ಚಹರೆಪಟ್ಟಿ: ಎತ್ತರ 5.5 ಇಂಚು, ಸಾದಾರಣ ಮೈ ಕಟ್ಟು, ಸಾದಾಗಪ್ಪು ಮೈ ಬಣ್ಣ ದುಂಡು ಮುಖ, ಉದ್ದ ಮೂಗು, ಬಲಗೈ ಮೇಲೆ ಹಚ್ಚೆ ಕಲೆ, ನೀಲಿ  ಬಣ್ಣದ  ಶರ್ಟ, ಕಪ್ಪು  ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾನೆ. ಸದರಿ ಯುವಕ ಬಗ್ಗೆ ಮಾಹಿತಿ ದೊರೆತಲ್ಲಿ ಕಟಕೋಳ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊ: 948080408 

ಸುದ್ದಿ ಓದಿ