ಬ್ಯಾಡ್ಗಿ

ಕಾಂಗ್ರೆಸಿಗೆ ವಾರೆಂಟಿ ಇಲ್ಲದ ಗ್ಯಾರಂಟಿ ಕಾರ್ಡ್ : ಸಿ.ಟಿ.ರವಿ

ಕಾಂಗ್ರೆಸಿಗೆ ವಾರೆಂಟಿ ಇಲ್ಲದ ಗ್ಯಾರಂಟಿ ಕಾರ್ಡ್  : ಸಿ.ಟಿ.ರವಿ

ಬ್ಯಾಡಗಿ: ಕಿವಿಗೆ ಹೂವು ಮುಡ್ಕೊಳ್ಳುವ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಸಾಧನೆಗಳನ್ನು ತಾವೇ ಮಾಡಿದ್ದು ಎಂದು ಬೊಬ್ಬೆ ಹೊಡೆಯುತ್ತಾ ರಾಜ್ಯದ ಜನರ ಕಿವಿಗೆ ಹೂವು ಇಡುತ್ತಿದ್ದಾರೆ ಎಂದು ಸಿ.ಟಿ.ರವಿ ಟೀಕಿಸಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಶೇ.90ರಷ್ಟು ಅನುದಾನದಲ್ಲಿ ರಾಜ್ಯದ ಜನತೆಗೆ ಸಿದ್ಧರಾಮಯ್ಯ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಈ ಯೋಜನೆಯನ್ನು ತನ್ನದೇ ರೀತಿಯಲ್ಲಿ ಪ್ರಚಾರ ನೀಡಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಅಭಿವೃದ್ಧಿ ವಿಚಾರದಲ್ಲಿ ಜಾಣ ಕುರುಡುತನ, ಕಿವುಡುತನ ಮತ್ತು ಮೂಗತನ ತೋರುತ್ತ ಪದೇಪದೇ ಬಿಜೆಪಿ ಏನ್ ಮಾಡಿದೆ.? ಎಂದು ರಾಜ್ಯದ ಜನತೆಯ ಮುಂದೆ ಗಂಟಲು ಹರಿದುಕೊಳ್ಳುತ್ತ, ಈಗಾ ತನ್ನ ವಾರಂಟಿಯೇ ಇಲ್ಲದ ಗ್ಯಾರಂಟಿ ಕಾರ್ಡ್  ನೀಡಲು ಮುಂದಾಗಿದೆ ವ್ಯಂಗ್ಯವಾಡಿದರು.ಬಿಜೆಪಿ ಮುಸ್ಲಿಂ ವಿರೋಧಿಯಲ್ಲ:ಬಿಜೆಪಿಯು ಎಂದಿಗೂ ಮುಸಲ್ಮಾನರ ವಿರೋಧಿಗಳಲ್ಲ. ಆದರೆ, ಬಾಂಬ್ ಇಡೋರಿಗೆ, ಸಮಾಜಘಾತಕ, ವಿದ್ವಂಸಕ ಕೃತ್ಯಗಳನ್ನು ಎಸಗುವ ದುರ್ಜನರನ್ನು ಬಿಜೆಪಿಯು ಯಾವತ್ತಿಗೂ ಮನ್ನಣೆ ನೀಡುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿ ಸಂತ ಶಿಶುನಾಳ ಶರೀಫರಂತಹ ಮಹಾನ್ ಶರಣರು, ಎಪಿಜೆ ಅಬ್ದುಲ್ ಕಲಾಂ, ಇಬ್ರಾಹಿಂ ಸುತಾರ್ ಸೇರಿದಂತೆ ದೇಶಭಕ್ತಿಯನ್ನು ಹೊಂದಿದ ಬಹಳಷ್ಟು ಮೇಧಾವಿಗಳು ಇದ್ದು, ಅವರೆಲ್ಲರನ್ನೂ ಬಿಜೆಪಿ ಗೌರವಿಸಿ ಸ್ಮರಣಿಸುತ್ತದೆ. ಆದರೆ, ಕಾಂಗ್ರೆಸಿಗೆ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಸೇರಿದಂತೆ ಕುಕ್ಕರ್ ಬಾಂಬ್, ವಿಧ್ವಂಸಕ ಕೃತ್ಯಗಳನ್ನು ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡುವ ಘಾತುಕರು ಬೇಕಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ರೈತರ ಪರವಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಹಾವೇರಿ ಜಿಲ್ಲೆಯ ರೈತರಿಗೆ ಪ್ರಸಕ್ತ ಸಾಲಿನ ಬೆಳೆವಿಮೆಯು 502ಕೋಟಿಯಷ್ಟು ನೇರವಾಗಿ ಅವರ ಖಾತೆಗೆ ಸೇರಲಿದೆ ಎಂದರಲ್ಲದೇ, ಈ ಬಾರಿ ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನದಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿ ಪರ ಆಡಳಿತಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಅನುದಾನವನ್ನು ತಂದು ಅಭಿವೃದ್ಧಿಯನ್ನು ಸಾಧಿಸಿರುವ ಬಗ್ಗೆ ಮಾಹಿತಿ ನೀಡಿದರಲ್ಲದೇ, ಎರಡು ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ನೀರಾವರಿ ಯೋಜನೆಗಳ ಮಂಜೂರಾತಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕರ್ಾರ ಅನುದಾನದ ಶೀಘ್ರ ಬಿಡುಗಡೆಗೆ ಕ್ರಮ ವಹಿಸಿ, ಕೇವಲ ಮೂರೇ ವರ್ಷಗಳಲ್ಲಿ ಯೋಜನೆಯ ಕಾಮಗಾರಿಯನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ಮಾಡಿರುವ ಸಾಧನೆಯ ಕುರಿತು ವಿವರಿಸಿದರು. ಪಟ್ಟಣದ ಪುರಸಭೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕೇವಲ 5,ಕೋಟಿ ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ 60,ಕೋಟಿ ಅನುದಾನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ, ಯಾತ್ರೆಯ ಉಸ್ತುವಾರಿ ಅರುಣ್ ಶಹಾಪುರ, ಮಾಜಿ ಶಾಸಕರುಗಳಾದ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ್ ಕಲಕೋಟಿ, ತಾಲೂಕಾಧ್ಯಕ್ಷ ಹಾಲೇಶ ಜಾಧವ್, ಎನ್. ಕಲ್ಲೇಶಿ, ಸಾಂಬಾರ್ ಮಂಡಳಿಯ ಅಧ್ಯಕ್ಷ ಎನ್.ಎಂ.ಈಟೇರ್, ಸತೀಶ ಶಿರವಾಡಕರ, ವೀರಯ್ಯ ಹಿರೇಮಠ, ವೀರೇಂದ್ರ ಶೆಟ್ಟರ,  ಎಂ.ಎಸ್.ಪಾಟೀಲ, ಸುರೇಶ ಉದ್ಯೋಗಣ್ಣನವರ, ಶಿವಾನಂದ ಯಮುನಕ್ಕನವರ, ಫಕ್ಕೀರಮ್ಮ ಚಲುವಾದಿ, ಮಲ್ಲಮ್ಮ ಪಾಟೀಲ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ವಿಜಯ ಸಂಕಲ್ಪ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ಬೈಕ್ ಯರ್ಾಲಿ ಜೊತೆಯಾಗಿ ಮೆರವಣಿಗೆಯ ಮೂಲಕ ಸಾವಿರಾರು ಕಾರ್ಯಕರ್ತರ ಜಯಘೋಷದೊಂದಿಗೆ ಸಮಾವೇಶದ ವೇದಿಕೆಯನ್ನು ತಲುಪಿತು.

ಸುದ್ದಿ ಓದಿ