ವಿವಿಧ ಶರಣರ ಜಯಂತಿ ಆಚರಣೆ
ತಾಳಿಕೋಟೆ 12: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ದಲಿತ ವಚನಕಾರರಾದ ಶಿವಶರಣ ಮಾದರ ಚನ್ನಯ್ಯ ಹಾಗೂ ಶಿವಶರಣ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಮಾದರ ದೂಳಯ್ಯ ಮತ್ತು ಉರಿಲಿಂಗಪೆದ್ದಿ ಶರಣನ ಜಯಂತಿಯನ್ನು ಆಚರಿಸಲಾಯಿತು.ಆರಂಭದಲ್ಲಿ ಆಯಾ ಸಮಾಜಗಳ ಮುಕಂಡರು ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿ ಸೇರಿ ಶರಣರ ಭಾವಚಿತ್ರದಲ್ಲಿ ಮಾಲೆ ಹಾಕಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟೆ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಎಲ್ಲಾ ಸಮಾಜದ ಹಿರಿಯರು ಹಾಗೂ ಅಧಿಕಾರಿಗಳು ಮತ್ತು ಶಿಕ್ಷಕರು ವೃಂದದವರು ಸೇರಿ ಶರಣರಿಗೆ ಪೂಜೆ ಸಲ್ಲಿಸಿದರು. ಸಿಬ್ಬಂದಿಗಳಾದ ಎಂ ಎಂ ಅತ್ತಾರ, ರಾಮನಗೌಡ ಬಿರಾದಾರ, ಹುಚ್ಚಯ್ಯ ಹಿರೇಮಠ, ರಾಜುಗೌಡ ಪಾಟೀಲ, ಶಿವಶರಣ ಮಾದರ ಸಮಾಜದ ಹಾಗೂ ಮಾದರ ಧೋಳಯ್ಯ ಸಮಾಜದ ಕಾಶಿನಾಥ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ರವಿ ಶಿರೋಳ, ಹುಲಗಪ್ಪ ಮಾದರ, ವೀರಶೈವ ಡೋಹರ್ ಕಕ್ಕಯ್ಯ ಸಮಾಜದ ಅಧ್ಯಕ್ಷ ಸುಭಾಷ್ ಹೋಟಗಾರ, ಕಾರ್ಯದರ್ಶಿ ರಾಜಕುಮಾರ್ ಹೋಟಗಾರ, ಮಾಜಿ ಅಧ್ಯಕ್ಷ ಪರಶುರಾಮ ಹೋಟಗಾರ, ಶಿವಶರಣ ಸಮಗಾರ ಹರಳಯ್ಯ ಸಮಾಜದ ಕಾರ್ಯದರ್ಶಿ ಕಾಶಿನಾಥ್ ಮಬ್ರುಮಕರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ದಲಿತ ವಚನಕಾರರ ಜಯಂತಿಯನ್ನು ಗುರುವಾರ ಆಚರಣೆ ಮಾಡಲಾಯಿತು.