ಆ. 10ರಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಸಭೆ
ಸಿರುಗುಪ್ಪ 06: ತಾಲ್ಲೂಕಿನಲ್ಲಿ 1ವರ್ಷದಿಂದ 19ವರ್ಷದ 1,18,397ಅರ್ಹ ಮಕ್ಕಳಿದ್ದಾರೆ ಎಲ್ಲರಿಗೂ ಅಂಗನವಾಡಿ ಕೇಂದ್ರಗಳು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಶಿಕ್ಷಕರು ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಜಂತುಹುಳು ಮುಕ್ತ ಸ್ವಸ್ಥ ತಾಲ್ಲೂಕು ನಿರ್ಮಾಣ ಮಾಡುವಂತೆ ಪ್ರವೃತ್ತರಾಗಬೇಕು ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ವೀರಣ್ಣ ಅವರು ಹೇಳಿದರು.
ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಸಭೆಯಲ್ಲಿ ಈರಣ್ಣ ಅವರು ಮಾತನಾಡಿ ಆಗಸ್ಟ್ 10ರಿಂದ 17ರವರೆಗೆ ತಾಲ್ಲೂಕಿನಲ್ಲಿ ರುವ 1ರಿಂದ 19ವರ್ಷದ ಮಕ್ಕಳಿಗೆ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಮಾತ್ರೆಗಳನ್ನು 1ರಿಂದ 3ವರ್ಷದ ಮಕ್ಕಳಿಗೆ ನೀರಿನಲ್ಲಿ ಮಿಶ್ರಣಮಾಡಿ ದ್ರಾವಣ ರೂಪದಲ್ಲಿ ಕುಡಿಸಬೇಕು ಹಾಗೆಯೇ 3ರಿಂದ 19ವರ್ಷದ ಮಕ್ಕಳು ಮಾತ್ರೆಯನ್ನು ಚೀಪಬೇಕು ನುಂಗಬಾರದು ಎಂದು ಸಭೆಗೆ ಅವರು ತಿಳಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಡಿ ಭಜಂತ್ರಿ, ಜಿಲ್ಲಾ ಸಾಕ್ಷರತಾ ಕಾರ್ಯ ಕಾರಿ ಸಮಿತಿ ಸದಸ್ಯ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಎ ಗಾದಿಲಿಂಗಪ್ಪ,ನಗರಸಭಾ ಪೌರಾಯುಕ್ತ ಪ್ರೇಮ್ ಚಾಲ್ಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕೆ ಜಲಾಲಪ್ಪ, ದೈಹಿಕ ಶಿಕ್ಷಕ ಈರಣ್ಣ ,ಕೃಷಿ ತೋಟಗಾರಿಕೆ ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ರಾಘವೇಂದ್ರ ವಮರ್ಾ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು