ಯರಗಟ್ಟಿ

ಶ್ರದ್ಧೆ ಪರಿಶ್ರಮವಿದ್ದರೆ ಯಶಸ್ಸು ಖಚಿತ: ಭೋವಿ

ಶ್ರದ್ಧೆ ಪರಿಶ್ರಮವಿದ್ದರೆ ಯಶಸ್ಸು ಖಚಿತ: ಭೋವಿ

ಲೋಕದರ್ಶನ ವರದಿ

ಯರಗಟ್ಟಿ 08: ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಪರಿಶ್ರಮವಿದ್ದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಸರಕಾರಿ ಮಾದರಿ ಶಾಲೆ ಮುಖ್ಯಶಿಕ್ಷಕ ಡಿ.ಡಿ.ಭೋವಿ ಹೇಳಿದರು.

ಸಮೀಪದ ತಲ್ಲೂರ ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ 2022,23ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಇಂದು ಶಿಕ್ಷಣ ವ್ಯಾಪಾರದ ವಸ್ತು ಆಗಿರುವದು ವಿಷಾದಕರ, ಮಕ್ಕಳಿಗೆ ಪಾಠದ ಜೊತೆ ಬದುಕಿನ ಪಾಠ ನಮ್ಮ ಸಂಸ್ಕೃತಿ ಬಗ್ಗೆ ತಿಳಿಹೇಳುವದು ಬಹಳ ಮುಖ್ಯವಾಗಿದೆ ಎಂದರು.

ಯರಗಟ್ಟಿ ಬಸವೇಶ್ವರ ಪ್ರೌಢ ಶಾಲೆಯ ಶಿಕ್ಷಕ ಎಲ್.ಎಸ್.ಹೊನ್ನಪ್ಪಗೋಳ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ಉಳಿಸಲು ಶಿಕ್ಷಣ ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಸವೇಶ್ವರ ಯುವಕ ಮಂಡಳ ನಿದರ್ೇಶಕ ಬಸಪ್ಪ ಭೋವಿ ಅಧ್ಯಕ್ಷತೆ ವಹಿಸಿದ್ದರು, ಆರ್.ಪಿ.ದುಂಡನಕೊಪ್ಪ, ಬಸಪ್ರಭು ಮಲಕ್ಕನ್ನವರ, ಸಿ.ವಿ.ಮಾಸ್ತಮರ್ಡ್ , ಕೆ.ಕೆ.ಉಪ್ಪಾರ, ಬಿ.ಸಿ.ಕರಿಕಟ್ಟಿ, ಲತಾ ತಲ್ಲೂರ, ಚಂದ್ರಪ್ಪ ಶಿವಪೂಜಿ, ಪಂಚಪ್ಪ ದುಂಡನಕೊಪ್ಪ, ಎಸ್.ಎಫ್.ಬಡಿಗೇರ, ಜಿ.ಎ.ಕೊಟ್ರಶೆಟ್ಟಿ, ಎ.ಜೆ.ಕಾಂಬಳೆ, ಎಸ್.ಎಮ್.ಸಾಲಿ, ಸಿ.ಪಿ.ತುಪ್ಪದ, ಎ.ಎಚ್.ಕುದರಿ ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು 

ಸುದ್ದಿ ಓದಿ