ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಬದುಕಿ: ಬನವಣೆ
ಮಾಂಜರಿ: ಸರ್ಕಾರಗಳಿಗೂ ಆಗದಂತಹ ಕೆಲಸವನ್ನು ಡಾ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಸಂಸ್ಥೆಗಳ ಮೂಲಕ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಬದುಕಬೇಕು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರು ಪಾತ್ರ ಬಹಳ ಮಹತ್ವದ್ದು. ಮಹಿಳೆಯರು ಪ್ರಾಮಾಣಿಕವಾಗಿ ಸಂಘಗಳಿಂದ ತೆಗೆದ ಸಾಲವನ್ನು ಮರಿಪಾವತಿಸುತ್ತಾರೆ. ಈ ಕಾರಣಕ್ಕೆ ಯಾವುದೇ ಸಂಘಗಳು ಮುಳುಗಡೆಯಾಗಿಲ್ಲ. ಮಹಿಳೆಯರಿಂದ ಸ್ವಾಸ್ಥ ಸಮಾಜದ ನಿರ್ಮಾಣವಾಗಬೇಕೆಂಬ ವೀರೇಂದ್ರ ಹೆಗಡೆಯವರ ಕನಸು ನನಸಾಗುತ್ತಿದೆ ಎಂದು ಸಿ ಬಿ ಎಸ್ ಎಸ್ ಕೆ ನಿರ್ದೇಶಕ ಭರತೇಶ ಬನವಣೆ ಹೇಳಿದರು.
ಅವರು ಇಂದು ಸಮೀಪದ ನಸಲಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಈ ಯೋಜನೆಯಡಿಯಲ್ಲಿ ಒಂದು ಕೋಟಿ 75 ಲಕ್ಷ ಜನ ಮಹಿಳೆಯರು ಸದಸ್ಯತ್ವ ಹೊಂದಿದ್ದಾರೆ. 60 ಲಕ್ಷ ಸಂಸ್ಥೆಗಳನ್ನು ಮಹಿಳೆಯರ ಸೇವೆಗಾಗಿ ಕಟ್ಟಲಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಓಂಕಾರ್ ಅಶ್ರಮ ಮಠದ ಮಾತೊಶ್ರೀ ಭ್ರಮರಾಂಬಿಕಾ ದೇವಿ, ಬದುಕನ್ನು ಬದುಕುವ ಕಲೆಯನ್ನು ಕಲಿಸಿದವರು ಡಾ. ವೀರೇಂದ್ರ ಹೆಗಡೆಜಿ. ಹೆಣ್ಣು ಮಕ್ಕಳ ಕಷ್ಟಗಳಿಗೆ ಕೇವಲ ಸಾಂತ್ವನದ ಮಾತುಗಳನ್ನು ಹೇಳಲಿಲ್ಲ. ಬಡವರ ಬೆನ್ನೆಲುಬಾಗಿ ನಿಂತು ಸ್ವಾಭಿಮಾನದಿಂದ ಬದುಕಲು ಕಲಿಸಿದರು.ಎಂದರು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುಕ್ತಾಬಾಯಿ ಕೆಂಗಣ್ಣವರ, ಉಪಾಧ್ಯಕ್ಷ ನೇಮಿನಾಥ ಖೋಮಬಾರೆ, ಅಜಿತ್ ಖೆಮಲಾಪುರೆ,ಆನಂದ ಸಮಾಜೆ, ಕೃಷ್ಣಪ್ಪ ದತ್ತವಾಡೆ, ನೆಹರು ಮಗದುಮ ಇನ್ನಿತರರು ಉಪಸ್ಥಿತರಿದ್ದರು. ಸಂತೋಷ್ ಕುಮಾರ ರೈ ಅವರು ಪ್ರಸ್ತಾವಕವಾಗಿ ಮಾತನಾಡಿದರು.ದೀಪ ಕುಪ್ಪನಟ್ಟಿ ಪ್ರಾರ್ಥನೆ ಹಾಡಿದರು. ಜಯಶ್ರೀ ವರದಿ ವಾಚನ ಮಾಡಿದರು ವಿಠಲ ಸ್ವಾಗತಿಸಿದರು, ಸುನಿತಾ ಗಿರಿ ವಂದಿಸಿದರು. ಬಾವನ ಸೌಂದತ್ತಿ ನಸಲಾಪುರ, ನಂದಿಕುರಳಿ, ಸ್ವಸಾಯ ಸಂಘಗಳ ಒಕ್ಕೂಟದ ಸದಸ್ಯರು ಪ್ರತಿನಿಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.