ಚಿಕ್ಕೋಡಿ

ದಸರಾ ಎಲ್ಲ ವರ್ಗದ ಜನರ ಸಂಭ್ರಮದ ಹಬ್ಬ: ಡಾ. ಪ್ರಭಾಕರ ಕೋರೆ

ದಸರಾ ಎಲ್ಲ ವರ್ಗದ ಜನರ ಸಂಭ್ರಮದ ಹಬ್ಬ: ಡಾ. ಪ್ರಭಾಕರ ಕೋರೆ

ಲೋಕದರ್ಶನ ವರದಿ 


ಮಾಂಜರಿ 17 : ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಡಹಬ್ಬ ದಸರಾ ಹಿಂದೆ ಮೈಸೂರು ನಗರಕ್ಕೆ ಸೀಮಿತವಾಗಿತ್ತು. ಆದರೆ ಇಂದು ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಾಡಿನ ವಿವಿಧ ಭಾಗಗಳಲ್ಲಿಯೂ ಯುವತಿಯರು ಮಹಿಳೆಯರು ಮತ್ತು ಯುವಪಡೆ ಸೇರಿದಂತೆ ಎಲ್ಲ ವರ್ಗದ ಜನರು ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಪದ್ಮಶ್ರೀ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಹೇಳಿದರು.  

ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಅಂಕಲಿಯಲ್ಲಿರುವ ಕೆಎಲ್‌ಇ  ಶಿಕ್ಷಣ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಯ ಸಯುಕ್ತ ಆಶ್ರಯದಲ್ಲಿ  ಆಯೋಜಿಸಿರುವ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ದಾಂಡಿಯಾ ನೃತ್ಯವು ಕೇವಲ ಮನರಂಜನೆಯ ಕಲೆಯಲ್ಲ ಮಹಿಳೆಯರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಡಾ. ಪ್ರಭಾಕರ್ ಕೋರೆ ಹೇಳಿದರು.  

 ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ತಾಲೂಕ ಪಂಚಾಯಿತಿಯ ಮಾಜಿ ಸದಸ್ಯ ಸುರೇಶ್ ಪಾಟೀಲ್ ಶಿವಾಲಯದ ಪ್ರಧಾನ ವ್ಯವಸ್ಥಾಪಕ ನಾಗೇಶ್ ಮುಜುಕೂರ್ ಜ್ಯೋತಿ ತಮ್ಮಗೌಡ ಬಿಎಸ್ ಅಂಬಿ ಎಂಎಸ್ ಕಾನಡೇಎ ಕೆ ಪಾಟೀಲ್ ಸಂತೋಷ್ ಹಿರೇಮಠ್ ಮಹಾಂತೇಶ್ ಮೈಶಾಳೆ ಸಚಿನ್ ಬಾಬರ್ ಹಾಗೂ ಇನ್ನುಳಿದ ನಾಗರಿಕರು ಹಾಜರಿದ್ದರು.  


ಸುದ್ದಿ ಓದಿ