ಕ್ಷೇತ್ರದ 14 ವಕ್ಫ್ ಸಂಸ್ಥೆಗಳಿಗೆ 95 ಲಕ್ಷ ಅನುದಾನ- ಶಾಸಕ ಗಣೇಶ ಹುಕ್ಕೇರಿಮೊದಲ ಹಂತದಲ್ಲಿ ಏಳು ಸಂಸ್ಥೆಗಳಿಗೆ 35 ಲಕ್ಷ ಬಿಡುಗಡೆ:
ಚಿಕ್ಕೋಡಿ 13: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುಸ್ಲಿಂ ಸಮುದಾಯದ 14 ವಕ್ಫ್ ಸಂಸ್ಥೆಗಳ ಮಸೀದಿ, ಖಬರಸ್ತಾನ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು ?5 ಲಕ್ಷ ಅನುದಾನ ಮಂಜೂರಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಏಳು ಸಂಸ್ಥೆಗಳಿಗೆ 35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿದ ಅವರು.ಕ್ಷೇತ್ರದ ವಿವಿಧ ಗ್ರಾಮಗಳ ಮಸೀದಿ ಹಾಗೂ ಖಬರಸ್ತಾನ ಅಭಿವೃದ್ಧಿ ಸಮಿತಿಗಳ ಮನವಿಗೆ ಸ್ಪಂದಿಸಿ, ಮಸೀದಿ ಕಟ್ಟಡ ನಿರ್ಮಾಣ, ದುರಸ್ತಿ, ಖಬರಸ್ತಾನದ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ನವದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಬಾ. ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿರಗಾಂವ ಗ್ರಾಮದ ಅಹಲೆ ಸುನ್ನತ್ ಜಮಾತ್ ಸಮಿತಿಗೆ ಮಸೀದಿ ನಿರ್ಮಾಣಕ್ಕೆ 5 ಲಕ್ಷ, ಕೇರೂರ ಗ್ರಾಮದ ಮುಸ್ಲಿಂ ಜಮಾತ್ ಸಮಿತಿಗೆ 5 ಲಕ್ಷ, ನವಲಿಹಾಳ ಗ್ರಾಮದ ಮಸೀದಿ ಹಾಗೂ ಖಬರಸ್ತಾನ ಸಮಿತಿಗೆ , ಚಿಕ್ಕೋಡಿ ರಾಮನಗರದ ಖಬರಸ್ತಾನ ಅಭಿವೃದ್ಧಿಗೆ 10 ಲಕ್ಷ, ನಣದಿ ಗ್ರಾಮದ ಸುನ್ನತ್ ಮುಸ್ಲಿಂ ಜಮಾತ್ ಜಾಮಾ ಮಸೀದಿ ಸಮಿತಿಗೆ 5 ಲಕ್ಷ, ಸದಲಗಾ ಪಟ್ಟಣದ ಹಜರತ್ ಶಮನಾಪೀರ ದರ್ಗಾ ಸಮಿತಿಗೆ ಮಸೀದಿ ದುರಸ್ತಿಗಾಗಿ 10 ಲಕ್ಷ ಹಾಗೂ ಯಡೂರ ಗ್ರಾಮದ ಮುಸ್ಲಿಂ ಜಮಾತ್ ಸಮಿತಿಗೆ ಮಸೀದಿ ದುರಸ್ತಿಗಾಗಿ 5 ಲಕ್ಷ ಅನುದಾನ ಮಂಜೂರಾಗಿದೆ.ಚಿಕ್ಕೋಡಿ ಪಟ್ಟಣದ ಹೊಸಪೇಟೆ ನಗರದ ಮುಸ್ಲಿಂ ಜಮಾತ್ ಸಮಿತಿಗೆ ಶಾದಿಮಹಲ್ ನಿರ್ಮಾಣಕ್ಕೆ 5 ಲಕ್ಷ, ಮುಲ್ಲಾ ಪ್ಲಾಟ್‌ನ ಮುಸ್ಲಿಂ ಜಮಾತ್ ಖಬರಸ್ತಾನ ಪಂಚ್ ಮೊಹಲ್ಲಾ ಸಮಿತಿಗೆ ಶಾದಿಮಹಲ್ ನಿರ್ಮಾಣಕ್ಕೆ 10 ಲಕ್ಷ, ಸಂಜಯ ಗಾಂಧಿ ನಗರದ ಮಸೀದಿ-ಎ-ಅಕ್ಸಾ ಅಭಿವೃದ್ಧಿಗೆ 5 ಲಕ್ಷ, ಖಡಕಲಾಟ ಗ್ರಾಮದ ಸುನ್ನತ್ ಮುಸ್ಲಿಂ ಜಮಾತ್ ಸಮಿತಿಗೆ ಮಸೀದಿ ನಿರ್ಮಾಣಕ್ಕೆ 10 ಲಕ್ಷ, ಹಿರೇಕೋಡಿ ಗ್ರಾಮದ ಜಾಮಿಯಾ ಮಸೀದಿ ಮತ್ತು ಖಬರಸ್ತಾನ ಸಮಿತಿಗೆ ಶಾದಿಮಹಲ್ ನಿರ್ಮಾಣಕ್ಕೆ 5 ಲಕ್ಷ ಹಾಗೂ ಕೋಥಳಿ ಗ್ರಾಮದ ಸುನ್ನತ್ ಜಮಾತ್ ಸಮಿತಿಗೆ ಮಸೀದಿ ನಿರ್ಮಾಣಕ್ಕೆ 5 ಲಕ್ಷ ಅನುದಾನ ಮಂಜೂರಾಗಿದೆ.