ಚಿಕ್ಕೋಡಿ

ಕಬ್ಬು ದರಕ್ಕಾಗಿ ಅ.12ಕ್ಕೆ ನಿರ್ಣಾಯಕ ಸಭೆ; ಅ.13ಕ್ಕೆ ರೈತರ ಹೆದ್ದಾರಿ ಬಂದ್ ಎಚ್ಚರಿಕೆ

ಕಬ್ಬು ದರಕ್ಕಾಗಿ ಅ.12ಕ್ಕೆ ನಿರ್ಣಾಯಕ ಸಭೆ; ಅ.13ಕ್ಕೆ ರೈತರ ಹೆದ್ದಾರಿ ಬಂದ್ ಎಚ್ಚರಿಕೆ

ಲೋಕದರ್ಶನ ವರದಿ 

ಮಾಂಜರಿ 08 : ಉಭಯ ರಾಜ್ಯಗಳ ಕಬ್ಬು ಬೆಳೆಗಾರರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು, ನ್ಯಾಯಯುತ ಬೆಲೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಸಿಡಿದೆದ್ದಿದ್ದಾರೆ. ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಅಕ್ಟೋಬರ್ 15ರ ಗಡುವು ನೀಡಲಾಗಿದ್ದರೂ, ರೈತರ ಬೃಹತ್ ಆಂದೋಲನದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳು ಈ ಆದೇಶವನ್ನು ತಾತ್ಕಾಲಿಕವಾಗಿ ಹಿಂಪಡೆದಿವೆ. ಇದು ರೈತ ಹೋರಾಟದ ಮತ್ತೊಂದು ಮಜಲಿಗೆ ತಲುಪಿರುವುದರ ಸ್ಪಷ್ಟ ಲಕ್ಷಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಬ್ಬು ಬೆಳೆಗಾರರ ಈ ಬಂಡಾಯ ಅಕ್ಷರಶಃ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೇ ತಿಂಗಳ 12 ರಂದು ಮಧ್ಯಾಹ್ನ 3 ಗಂಟೆಗೆ ಸಕ್ಕರೆ ದರ ನಿಗದಿ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಹಾಗೂ ಕರ್ನಾಟಕದ ಕಬ್ಬು ಬೆಳೆಗಾರರ ರೈತ ಮುಖಂಡರ ಜೊತೆ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಸಕ್ಕರೆ ಸಚಿವ ರುದ್ರ​‍್ಪ ಲಮಾಣಿ ಹಾಗೂ ಸಹಕಾರಿ ಸಚಿವರಾದ ತಾವು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದೇವೆ ಎಂದು ಸಚಿವ ಲಕ್ಷ್ಮಣ್ ಸವದಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. 


ಸುದ್ದಿ ಓದಿ