ಚಿಕ್ಕೋಡಿ

ಬಸವೇಶ್ವರ ವಚನಗಳು ಸರ್ವ ಕಾಲಕ್ಕೂ ಶ್ರೇಷ್ಠವಾದ ಆದರ್ಶ ಸ್ಫೂರ್ತಿ

ಬಸವೇಶ್ವರ  ವಚನಗಳು  ಸರ್ವ ಕಾಲಕ್ಕೂ  ಶ್ರೇಷ್ಠವಾದ ಆದರ್ಶ  ಸ್ಫೂರ್ತಿ

ಲೋಕದರ್ಶನ ವರದಿ 

ಚಿಕ್ಕೋಡಿ  05: ವಿಶ್ವಗುರು ಬಸವಣ್ಣನವರ  ಸಮಾನತೆಯ ಆಶಯ, ಪ್ರಗತಿಪರ ಚಿಂತನೆ ಮತ್ತು ದೂರದೃಷ್ಟಿ ಇಡೀ ಜಗತ್ತಿಗೆ ಮಾದರಿ ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ .ಎಸ್‌. ಆಲೂರ್ ಅವರು ಹೇಳಿದರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಮಾಜ ವಿಜ್ಞಾನ, ಭಾಷಾ ವಿಜ್ಞಾನ ಹಾಗೂ ಪತ್ರಿಕೋದ್ಯಮ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಹಾವಿದ್ಯಾಲಯದ ಸಭಾಂಗಣದಲ್ಲಿ ’ಬಸವೇಶ್ವರರ ವಿಚಾರ ದೃಷ್ಟಿಕೋನಗಳು’ ಎಂಬ ವಿಷಯದ ಕುರಿತು ಆಯೋಜಿಸಲಾದ್ದ, ಒಂದು ದಿನದ ’ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ,ಅವರು ಮಾತನಾಡಿದರು.ಬಸವಣ್ಣನವರು ಕೇವಲ ಕರ್ನಾಟಕ ಅಥವಾ ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಬಸವಣ್ಣನವರ ಚಿಂತನೆಗಳು ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾರುತ್ತವೆ. ಹಾಗಾಗಿ, ಬಸವಣ್ಣನವರು ಯಾವುದೇ ಒಂದು ಸಮುದಾಯ, ಪ್ರದೇಶದ ಸ್ವತ್ತಲ್ಲ; ಅವರು ಮತ್ತು ಅವರ ವಿಚಾರಧಾರೆ ಇಡೀ ವಿಶ್ವದ ಮನುಕುಲಕ್ಕೆ ಸೇರಿದೆ ಎಂದು ತಿಳಿಸಿದರು. ಬಸವಣ್ಣನವರು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದರು. ಜಾತಿ, ಲಿಂಗ ಮತ್ತು ಅಸಮಾನತೆಯನ್ನು ವಿರೋಧಿಸಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. 


ಸುದ್ದಿ ಓದಿ