ಚಿಕ್ಕೋಡಿ

ಉತ್ತಮ ಮಳೆಗಾಗಿ ಶ್ರೀ ಮಹಾಲಕ್ಷ್ಮೀ ದೇವಿಗೆ ಜಲಾಭಿಷೇಕ

ಉತ್ತಮ ಮಳೆಗಾಗಿ ಶ್ರೀ ಮಹಾಲಕ್ಷ್ಮೀ ದೇವಿಗೆ ಜಲಾಭಿಷೇಕ

ಲೋಕದರ್ಶನ ವರದಿ 

ಮಾಂಜರಿ 01 : ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ  ಮೇಘರಾಜ ಹಾಗೂ  ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ತಮ ಮಳೆ, ರೈತರ ಬೆಳೆ ಸಮೃದ್ಧಿ ಹಾಗೂ ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಉಂಟಾಗದಿರಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.  

ಶ್ರೀ ಲಕ್ಷ್ಮೀ ದೇವಸ್ಥಾನದಿಂದ ‘ಸರ್ಕಾರಿ ಬಾವಿ’ವರೆಗೆ ಸುಮಂಗಲೆಯರ ಸಹಭಾಗಿತ್ವದಲ್ಲಿ ಕಳಶ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಬಾವಿಯ ಬಳಿ ಪೂಜೆ ಸಲ್ಲಿಸಿ ‘ಪರಡಿ’ ಬಿಡಲಾಯಿತು. ನಂತರ ಪಲ್ಲಕ್ಕಿಯನ್ನು ಕೇರಿಮೂಲಿ ಮಾರ್ಗವಾಗಿ ಮರಳಿ ದೇವಸ್ಥಾನಕ್ಕೆ ತರಲಾಯಿತು.

ಮಹಿಳೆಯರು ದೇವಿಗೆ ಉಡಿ ತುಂಬಿ ನೈವೇದ್ಯ ಅರ​‍್ಿಸಿದರು. ಧನಗಿರಿ ಡೋಲು, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.  


ಸುದ್ದಿ ಓದಿ