ಚಿಕ್ಕೋಡಿ

ಸರ್ವಸ್ವವನ್ನೂ ತ್ಯಾಗ ಮಾಡಿದ ಶಿರಸಂಗಿ ಲಿಂಗರಾಜರ ಬದುಕು ಆದರ್ಶ

ಸರ್ವಸ್ವವನ್ನೂ ತ್ಯಾಗ ಮಾಡಿದ ಶಿರಸಂಗಿ ಲಿಂಗರಾಜರ ಬದುಕು ಆದರ್ಶ

ಲೋಕದರ್ಶನ ವರದಿ

ಜೀವ ವಿಮಾ ನಿಗಮದ ಅಧಿಕಾರಿ ಆನಂದ ಅರವಾರೆ ಅಭಿಮತ: ಲಿಂಗರಾಜರ 162 ನೇಯ ಜಯಂತ್ಯೋತ್ಸವ

 ಮಾಂಜರಿ ದಿ 11: ಸಮಾಜದ ಉದ್ಧಾರಕ್ಕೆ ಬದುಕನ್ನೇ ಸವೆಸಿದ ಮಹಾದಾನಿ ಶಿರಸಂಗಿ ಲಿಂಗರಾಜರು ಅಳಿದರೂ ಮಾಡಿದ ಕಾರ್ಯ ಇಂದಿಗೂ ಹಸಿರು ಸರ್ವಸ್ವವನ್ನೂ ತ್ಯಾಗ ಮಾಡಿದ ಅವರ ಬದುಕೇ ಒಂದು ಆದರ್ಶ ಎಂದು ಭಾರತಿಯ ಜೀವ ವಿಮಾ ನಿಗಮದ ಅಧಿಕಾರಿ ಆನಂದ ಅರವಾರೆ ನುಡಿದರು.

ಅವರು ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯ ಮತ್ತು ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಇಂದು ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ 162 ನೇಯ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.

 ಬದುಕಿನಲ್ಲಿ ದಾನ-ದಾಸೋಹ-ತ್ಯಾಗ ಅತ್ಯಂತ ಮಹತ್ವವಾದ ಮೌಲ್ಯಗಳು ಸಮಾಜದಲ್ಲಿ ಇವುಗಳ ಪ್ರಜ್ಞೆ ಇರುವುದರಿಂದಲೇ ಕಾಲಕಾಲಕ್ಕೆ ಹಲವಾರು ಮಹಾತ್ಮರನ್ನು ನೀಡಿತು ಹೀಗೆ ತಮ್ಮ ತ್ಯಾಗದ ಬದುಕಿನಿಂದ ಹೆಸರಾದವರು ಎಂದು ಅವರು ಹೇಳಿ ಮನುಷ್ಯನಿಗೆ ಸಾವು ನಿಶ್ಚಿತ ಅದು ತಪ್ಪಿದಲ್ಲ ಆದರೆ ಬದುಕಿರುವವರೆಗೆ ನಾವು ಮಾಡಬೇಕಾದ ಕಾರ್ಯಗಳು ಹಲವು ಆಕಾರ್ಯಗಳು ಸಮಾಜದ ಅಭ್ಯುದಯಕ್ಕೆ ಮೀಸಲಾದರೆ ನಮ್ಮ ಬದುಕು ಸುಂದರ ದಾನವನ್ನು ದಾಸೋಹವನ್ನಾಗಿಸುವ ಕೆಲಸ ನಡೆಯಬೇಕು ಸೋಹಂ ಹೋಗಿ ದಾಸೋಹಂ ಆದಾಗಲೇ ನಮ್ಮ ಬದುಕಿಗೆ ಸಾರ್ಥಕತೆ ಬರುವುದು ಎಂದರು.

ಕೀರ್ತಿವಾರ್ತೆ , ಮಾನ ಸಮ್ಮಾನ, ಅಧಿಕಾರ, ಅಂತಸ್ತು, ಸಂಪತ್ತು ಯಾವುದು ಸಮ್ಮೋಂದಿಗೆ ಬರುವುದಿಲ್ಲ ನಾವು ಮಾಡಿದ ಉತ್ತಮ ಕಾರ್ಯ ಮಾತ್ರ ನಮ್ಮೊಂದಿಗೆ ಬರುವುದು ಸಮಾಜದಲ್ಲಿ ಶಿಕ್ಷಣವೇ ಸರ್ವಸ್ವ ಅದ ಎಲ್ಲರ ಸ್ವತ್ತಾಗಬೇಕೆಂಬ ಸಂಕಲ್ಪದಿಂದ ಲಿಂಗರಾಜರು ಟ್ರಸ್ಟ್ ಸ್ಥಾಪಿಸಿ ಇಡಿ ಸಮಾಜದ ಮಕ್ಕಳನ್ನೆ ತಮ್ಮ ಮಕ್ಕಳೆಂದು ಭಾವಿಸಿದರು ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡಿದರು ಲಿಂಗರಾಕರಂಥ ದಾನಿಗಳು ಸಮಾಜವನ್ನು ಬದುಕಸಿದ್ದಾರೆ ಲಿಂಗರಾಜರ ಜಯಂತಿ ಕೆಎಲ್ಇಗೆ ಸಿಮಿತವಾಗದೇ ಇಡೀ ಬೆಳಗವಿಯ ಹಬ್ಬವಾಗಿ ಆಚರಿಸುವಂತೆ ಆಗಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಸ್ಥಾನಿಕ ಮಂಡಳಿಯ ಅಧ್ಯಕ್ಷರಾದ ಬಸವರಾಜ ಎಮ ಕೋರೆ ಮಾತನಾಡಿ ಲಿಂಗರಾಜರ ಭವ್ಯ ಬದುಕು ಎಲ್ಲರಿಗೂ ಅನುಕರಣಿಯ ಅವರು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡರು ಸಮಾಜಕ್ಕೆ ತಮ್ಮ ಸರ್ವಸ್ವವನ್ನು ಅಪರ್ಿಸುವ ಮೂಲಕ ದಾನ, ದಾಸೋಹದ ಪಾವಿತ್ರ್ಯ ಹೆಚ್ಚಿಸಿದರು ಕೆಎಲ್ಇ ಸಂಸ್ಥೆ ಪ್ರತಿವರ್ಷ ಈ ಪುಣ್ಯಪುರುಷರ ಜಯಂತಿಯನ್ನು ಆಚರಿಸುವ ಮೂಲಕ ವಿದ್ಯಾಥರ್ಿಗಳಲ್ಲಿ ತ್ಯಾಗ ಮನೋಭಾವ ಮೂಡಿಸಲಾಗುತ್ತಿದೆ ಎಂದರು.

ಪ್ರೌಡಶಾಲೆಯ ಪ್ರಾಚಾರ್ಯ ಜೆ ಎಸ ತಮಗೌಡಾ, ಪದವಿಪೂರ್ವ ಮಹಾವಿದ್ಯಾಲಯದ ಪ್ರಚಾರ್ಯ ಆರ ಸಿ ಪಾಟಿಲ, ಸಿಬಿಎಸ್ಸಿ ಶಾಲೆಯ ಪ್ರಾಚಾರ್ಯ ಡಾ. ಭಾರತಿ ಪಾಟೀಲ, ಎಸ್ಸಿ ಪಾಟೀಲ ಶಲೆಯ ಮುಖ್ಯಾಧ್ಯಾಪಕ ಬಿ.ಎಸ್.ಅಂಬಿ, ಪದವಿ ಮಹವಿದ್ಯಲಯದ ಪ್ರಾಚಾರ್ಯರಾದ ಡಾ ಎ ಕೆ ಪಾಟಿಲ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಆಣ್ಣಾಸಹೆಬ ಜಕಾತೆ, ಕುಮಾರ ಕೋರೆ, ರತ್ನಾಕರ ಚಿಕಲಿ, ಸ್ವಾಗತ ಸಂಸ್ಕೃತಿ ವಿಭಾಗದ ಮುಖ್ಯಸ್ಥ ಮಹುವಾ ಮಾಡಿ ಎನ ಆರ ಉಮರಾಣಿ ನಿರುಪಿಸಿ ಯಶೋದಾ ಮಡಿವಾಳ ವಂದಿಸಿದರು 

ಸುದ್ದಿ ಓದಿ