ಬತ್ತಿದ ದೂಧಗಂಗಾ ನದಿ ಸಂಕಷ್ಟದಲ್ಲಿ ಸದಲಗಾ ಪರಿಸರದ ರೈತರು. ಕಾಳಮ್ಮಾವಾಡಿ ಜಲಾಷಯದಿಂದ ನೀರು ಬಿಡುಗಡೆಗೆ ಒತ್ತಾಯ.
ಮಾಂಜರಿ 16: ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಬಳಿ ಹರಿಯುವ ದೂಧಗಂಗಾ ನದಿಯು ಫೆಬ್ರುವರಿ ತಿಂಗಳಲ್ಲಿಯೇ ಬತ್ತಿ ಹೋಗಿದ್ದು, ರೈತರು, ಪಟ್ಟಣದ ನಾಗರೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೂಧಗಂಗಾ ನದಿ ಫೆಬ್ರವರಿ ತಿಂಗಳಲ್ಲೇ ಬತ್ತಿ ಹೋಗಿದ್ದು, ಸದ್ಯ ನದಿ ಪಾತ್ರದಲ್ಲಿ ನೀರಿಲ್ಲದಿದ್ದರೂ ಇನ್ನು ನಾಲ್ಕೈದು ದಿನಗಳಲ್ಲಿ ಸದಲಗಾ ಪಟ್ಟಣದ ವಾಸಿಗಳಿಗೆ ಕುಡಿವ ಸಮಸ್ಯೆ ತಲೆದೂರಲಿದೆ. ರೈತರು ಕಬ್ಬಿಗೆ ನೀರುಣಿಸಬೇಕಾಗಿರುವುದು ರೈತರನ್ನು ಸಂಕಷ್ಟಕ್ಕು ದೂಡಿದೆ. ರೈತರು ನೀರಿಗಾಗಿ ಪರದಾಡುವಂತಾಗಿದೆ.
ಜೊತೆಗೆ ದೂಧಗಂಗಾ ನದಿ ದಡದ ಬೋರಗಾಂವ, ಬೇಡಕಿಹಾಳ, ಸದಲಗಾ ಪರಿಸರದ ಮೀನುಗಾರರು ನದಿ ದಂಡೆಯಲ್ಲಿ ಮೀನುಗಾರಿಕೆಗೆ ಕುಂಠಿತಗೊಂಡಿದೆ. ಬರುವ ದಿನಗಳಲ್ಲಿ ಕಾಳಮ್ಮವಾಡಿ ಅಣೆಕಟ್ಟಿನಿಂದ ನೀರು ಬಿಡುವುದು ತೀರಾ ಅವಶ್ಯವಾಗಿದ್ದು, ನೀರು ಬಾರದಿದ್ದರೆ ಬಾರವಾಡ, ಮಾಂಗೂರು, ಕಾರದಗಾ, ಬೇಡಿಕಿಹಾಳ್, ಶಮನೇವಾಡಿ, ಭೋಜ, ಜನವಾಡ, ಸದಲಗಾ ಮಲಿಕವಾಡ, ಯಕ್ಸಂಬಾ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಾಗರಿಕರು ಮತ್ತು ನೀರಿಗಾಗಿ ರೈತರು ಪರದಾಡಬೇಕಾಗುತ್ತದೆ.ಸಂಬಂಧಪಟ್ಟ ಸಂಸದರು ಹಾಗೂ ಶಾಸಕರು ಈ ನೀರಿನ ಸಮಸ್ಯೆಯತ್ತ ಗಮನಹರಿಸಿ, ತಮ್ಮ ಕ್ಷೇತ್ರದ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ನೀರಿನ ವ್ಯವಸ್ಥೆ ಮಾಡಬೇಕಾಗಿರುವುದು ತುರ್ತ ಅಗತ್ಯವಾಗಿದ್ದು, ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಳಮ್ಮವಾಡಿ ಯೋಜನೆಯಿಂದ ನೀರು ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ.