ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಕಾರ್ಯಕ್ರಮ
ಶಿಗ್ಗಾವಿ 12: ಒಂದು ಗ್ರಾಮ, ಊರು, ಪಟ್ಟಣ, ನಗರ ಅಭಿವೃದ್ಧಿಯಾಗಬೇಕಾದರೆ ವಿರಕ್ತಮಠದಂತಹ ಒಂದು ಶರಣ ಸಂಸ್ಕೃತಿ ಕೇಂದ್ರವಿರಬೇಕು ಅಂದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ ಎಂದು ಸಮಾಜ ಸೇವಕ ಶಶಿಧರ ಯಲಿಗಾರ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಲಿಂ.ಮನಿಪ್ರ ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದೇಶ ಒಂದು ಕಡೆ ಅಭಿವೃದ್ಧಿಯಾಗುತ್ತಿದ್ದರೆ ಇನ್ನೋಂದು ಕಡೆ ನಮ್ಮ ಸಂಸ್ಕೃತಿ ಅವನತಿಯತ್ತಸಾಗಿದೆ ಆದ್ದರಿಂದ ನಮ್ಮ ಹಳೆಯ ಸಂಸ್ಕೃತಿ, ಸಂಪ್ರದಾಯ, ಅಡುಗೆ ತೊಡುಗೆ, ಹಬ್ಬ ಹರಿ ದಿನಗಳನ್ನು ನೋಡಬೇಕಾಗಿರುವುದು ಇಂತಹ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತ್ರ ಎಂದು ಖೇದ ವ್ಯಕ್ತಪಡಿಸಿದರು.ಇಂದಿನ ದಿನಮಾನಗಳಲ್ಲಿ ಗ್ರಾಮಕ್ಕೊಂದು ಮಠ ಮಂದಿರದ ಅವಶ್ಯಕತೆಯಿದೆ ಏಕೆಂದರೆ ಎಲ್ಲಿ ನೋಡಿದರು ಜಾತಿ ಪಂಗಡಗಳ ನಡುವೆ ಸಂಘರ್ಷಗಳು ನೆಡೆದು ಸೌಹಾರ್ದತೆಯನ್ನು ನಾವು ನಿವೇಲ್ಲ ಮರೆಯುತ್ತಿದ್ದೇವೆ ಆ ನಿಟ್ಟಿನಲ್ಲಿ ಮಠ ಮಾನ್ಯಗಳ ಮುಖಾಂತರ ನಮ್ಮ ಸಂಸ್ಕೃತಿಯನ್ನು ಕಾಪಾಡಬಹುದು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ. ಎಮ್ ಎಮ್ ತಿರ್ಲಾಪೂರ ಮಾತನಾಡಿದರು. ನಂತರ ಶಶೀಧರ ಯಲಿಗಾರ ಹಾಗೂ ರೈತ ಧನಿ ಸಂಪಾದಕ ಬಸವರಾಜ ಕುರಗೋಡಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು, ಬೆಳಿಗ್ಗೆಯಿಂದ ರೈತ ದ್ವನಿ ಚಾನಲನಲ್ಲಿ ಸಾಮೂಹಿಕ ವಿವಾಹ ಹಾಗೂ ಕಾರ್ಯಕ್ರಮದ ನೇರ ಪ್ರಸಾರವಾಯಿತು.ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಗಳು, ಸವಣೂರ ದೊಡ್ಡ ಹುಣಸೇಮರದ ಶ್ರೀಗಳು, ಅಕ್ಕಿಆಲೂರ ಡಾ ಚನ್ನಬಸವ ಮಹಾಸ್ವಾಮಿಗಳು, ಬಸವದೇವರು, ಗಂಗಾವತಿ ಶ್ರೀಗಳು, ಆರ್ಶಿವದಿಸಿದರು. ಕಾರ್ಯಕ್ರಮವನ್ನು ಮಂಜುನಾಥ ಬಮ್ಮನಕಟ್ಟಿ ನಿರ್ವಹಿಸಿದರು.ಈ ಕಾರ್ಯಕ್ರಮದಲ್ಲಿ ತಾಲೂಕಿನ ಭಕ್ತರು, ಶರಣು, ಶರಣೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.ಶರಣ ಸಂಸ್ಕೃತಿ ಉತ್ಸವ ಇಂತಹ ಕಾರ್ಯಕ್ರಮಗಳ ಮುಖಾಂತರ ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಆ ನಿಟ್ಟಿನಲ್ಲಿ ನಾಡಿನ ಮಠ ಮಾನ್ಯಗಳು ಸಮಾಜಮುಖಿ ಕೆಲಸ ಮಾಡುತ್ತೀವೆ ಅದರಲ್ಲಿ ಪಟ್ಟಣದ ವಿರಕ್ತಮಠವು ಒಂದು ಎಂದರು.