ಕಾರವಾರ

ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಧಿಡೀರ್ ಪ್ರತಿಭಟನೆ

ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಧಿಡೀರ್ ಪ್ರತಿಭಟನೆ

ಕಾರವಾರ 12: ಕೆಎಸ್ಆರ್ಟಿಸಿ ನೌಕರರನ್ನು ಸಕರ್ಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ, ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಗಮಗಳ ಸಿಬ್ಬಂದಿಯಿಂದ   ಪ್ರತಿಭಟನಾ ಧರಣಿ ನಡೆಯಿತು. ಶನಿವಾರ ಬಸ್ ಸಂಚಾರ್ ಸಂಪೂರ್ಣ ಸ್ಥಗಿತವಾಗಿತ್ತು. ಜಿಲ್ಲೆಯ ಒಳಗೆ ಹಾಗೂ  ಹೊರ ಜಿಲ್ಲೆಯ ಸಾರಿಗೆ ಸೇವೆ ಸಂಪೂರ್ಣ ಸ್ತಬ್ಧವಾಗಿತ್ತು. ವೇತನ ಸಹ ನೀಡದ ಸಕರ್ಾರಕ್ಕೆ ವಾಯುವ್ಯ ಸಾರಿಗೆ ಸಿಬ್ಬಂದಿ ಧಿಕ್ಕಾರ ಕೂಗಿದರು. ಲಕ್ಷ್ಮಣ ಸವದಿ ಒಬ್ಬ ಅಸಮರ್ಥ ಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ, ಸಮುದಾಯಗಳ ಅಭಿವೃದ್ಧಿಗೆ ನಿಧಿಯನ್ನು ಘೋಷಿಸುವ ಸಕರ್ಾರ ಶ್ರಮಿಕರತ್ತ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಮಾಡಿದರು. 

ಕೆಎಸ್ಆರ್ಟಿಸಿ ಸಿಬ್ಬಂದಿಯನ್ನು ಸಕರ್ಾರಿ ನೌಕರರು ಎಂದು ಪರಿಗಣಿಸಬೇಕು. ಸಾರಿಗೆ ಇಲಾಖೆಯಲ್ಲಿನ ಮೇಲಾಧಿಕಾರಿಗಳ ದಬ್ಬಾಳಿಕೆ, ಭ್ರಷ್ಟಾಚಾರ ನಿಲ್ಲಿಸಬೇಕು ಎಂಬ  ಬೇಡಿಕೆ ಮುಂದಿಟ್ಟು  ಬೆಂಗಳೂರಿನಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನಾಕಾರರನ್ನು ಬಂಧಿಸಿರುವುದು ಕಂಡಕ್ಟರ್ ಮತ್ತು ಡ್ರೈವರ್ಗಳ  ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ  ಕಾರವಾರ ಬಸ್ ನಿಲ್ದಾಣದ ಬಳಿ ಏಕಾಏಕಿ ನಿವರ್ಾಹಕ ಮತ್ತು ಚಾಲಕರು  ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಗೆ ಇಳಿದರು. ಹೊರ ಜಿಲ್ಲೆಗೆ ತೆರಳುವ ಬಸ್ಗಳ ಸೇವೆಯನ್ನು ಹಠಾತ್ತಾಗಿ  ಸ್ಥಗಿತಗೊಳಿಸಿದ ಸಿಬ್ಬಂದಿಗಳು ಕಾರವಾರ ಬಸ್ ನಿಲ್ದಾಣದ ಬಳಿ ಧರಣಿ ಕೂತು ಪ್ರತಿಭಟನೆ ನಡೆಸಿದರು. ಬಸ್ ಸಂಚಾರ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.

ಶುಕ್ರವಾರ ಕೆಎಸ್ಆರ್ಟಿಸಿ ನೌಕರರು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಸ್ವಯಂ ಪ್ರೇರಣೆಯಿಂದ ಎಲ್ಲಾ ಬಸ್ಗಳ ಸಂಚಾರ ಸ್ಥಗಿತಗೊಳಿಸಿ ಸೇವೆಯಿಂದ ಹೊರಗುಳಿದಿದ್ದರು. ಬಳಿಕ ಕಾರವಾರ ಡಿಪೋ ಮಾನ್ಯೇಜರ್ ಅವರು, ಚಾಲಕರನ್ನು ಹಾಗೂ ನಿವರ್ಾಹಕರನ್ನು ಕರೆಸಿ ಮನವೊಲಿಸಿ ಬಸ್ ಸೇವೆ ಪ್ರಾರಂಭಿಸುವಂತೆ ಮನವಿ ಮಾಡಿದರು. ಕೆಲ  ಚಾಲಕರು ಬೆಳಿಗ್ಗೆ 10 ಗಂಟೆಗೆ ಮುಷ್ಕರ್ ಕೈ ಬಿಟ್ಟು ಬಸ್ ಸೇವೆ ಪ್ರಾರಂಭಿಸಿದರು. ಆ ನಂತರ ಮಧ್ಯಾಹ್ನ 12.30ಕ್ಕೆ ಮತ್ತೆ ಧಿಡೀರ್ನೆ  ಹೊರ ಜಿಲ್ಲೆಯಿಂದ ಬಂದಿದ್ದ  ಬಸ್ ಚಾಲಕರು ಬಸ್ ಸೇವೆ ಬಂದ್ ಮಾಡಿದರು. ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬೇರೆ ಊರಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಪರದಾಡುವಂತಾಯಿತು. 

ಶನಿವಾರ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ನಿಲ್ಲಿಸಿದರು. ರವಿವಾರ ಸಹ ಬಸ್ ಸೇವೆ ಇರುವ ಬಗ್ಗೆ ಖಾತ್ರಿಯಿಲ್ಲ. ಸಾರಿಗೆ ಇಲಾಖೆಯ ಕಾಮರ್ಿಕ ಮುಖಂಡರ ಮಾರ್ಗದರ್ಶನ ಪಡೆದು ನಂತರ ನಿಲುವು ಪ್ರಕಟಿಸುವುದಾಗಿ ಕಾರವಾರ ಡಿಪೋ ವ್ಯಾಪ್ತಿಯ ಹಾಗೂ ವಾಯುವ್ಯ ಕನರ್ಾಟಕ ಸಾರಿಗೆ ನೌಕರರ ಸಂಘಟನೆಗಳು ತಿಳಿಸಿವೆ.


ಸುದ್ದಿ ಓದಿ